ಜಕಾರ್ತ: ಇಂಡೋನೇಷ್ಯಾದ ಬೊರ್ನಿಯೊ ದ್ವೀಪದಲ್ಲಿ ಇಂದು ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಈ ಹೆಲಿಕಾಪ್ಟರ್ ಬೊರ್ನಿಯೊ ದ್ವೀಪದ ತಾಳೆ ಎಣ್ಣೆ ತೋಟಗಳ ನಡುವೆ ಹಾರಾಟ ನಡೆಸುತ್ತಿತ್ತು. ವರದಿಗಳ ಪ್ರಕಾರ, ಹೆಲಿಕಾಪ್ಟರ್ ಟೇಕ್ ಆಫ್ ಆದ ಕೇವಲ 5 ನಿಮಿಷಗಳಲ್ಲಿ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು.



