ಫಿಫಾ ವಿಶ್ವಕಪ್ 2026 ರಲ್ಲಿ ಜರ್ಮನಿ ತಂಡ ಶುಭಾರಂಭ ಮಾಡಿದೆ. ಹೂಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜರ್ಮನಿ ಮತ್ತು ಕುರಾಸಾವೊ ತಂಡಗಳು ಮುಖಾಮುಖಿಯಾಗಿದ್ದವು. ಫಿಫಾ ರ್ಯಾಂಕಿAಗ್?ನಲ್ಲಿ 82ನೇ ಸ್ಥಾನದಲ್ಲಿರುವ ಕುರಾಸಾವೊ ವಿರುದ್ಧ ಆರಂಭದಲ್ಲೇ ಸಂಪೂರ್ಣ ಹಿಡಿತ ಸಾಧಿಸಿದ ಜರ್ಮನಿ ಪಡೆ ಗೋಲುಗಳ ಮೇಲೆ ಗೋಲು ಬಾರಿಸಿದರು. ಈ ಮೂಲಕ 7-1 ಅಂತರದಿಂದ ಪಂದ್ಯ ಗೆದ್ದುಕೊಂಡಿದ್ದಾರೆ. ಈ ಗೆಲುವಿನೊಂದಿಗೆ ಜರ್ಮನಿ ತಂಡವು ಫುಟ್ಬಾಲ್ ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆಯನ್ನೂ ಕೂಡ ಬರೆದಿದ್ದಾರೆ.
ಈ ಪಂದ್ಯದಲ್ಲಿ 7 ಗೋಲುಗಳನ್ನು ಬಾರಿಸುವ ಮೂಲಕ ಜರ್ಮನಿ ತಂಡವು ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಟ್ಟು 239 ಗೋಲುಗಳೊಂದಿಗೆ ಜರ್ಮನಿಯು ಬ್ರೆಝಿಲ್ (238 ಗೋಲುಗಳು) ತಂಡದ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಫಿಫಾ ವಿಶ್ವಕಪ್ನಲ್ಲಿ ಆಡಿದ ಅತ್ಯಂತ ಕಡಿಮೆ ಜನಸಂಖ್ಯೆಯ ಸಣ್ಣ ದೇಶ ಎಂಬ ಹೆಗ್ಗಳಿಕೆಯುವ ಇದೀಗ ಕುರಾಸಾವೊ ಪಾಲಾಗಿದೆ. ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ದಾಖಲೆಗಳ ಆಧಾರದ ಮೇಲೆ Worldometer ಸಂಸ್ಥೆಯು ಕುರಾಸಾವೊದ 2026 ರ ಮಧ್ಯಭಾಗದ ಜನಸಂಖ್ಯೆಯನ್ನು 1,85,440 ಎಂದು ಅಂದಾಜಿಸಿದೆ.
ಅAದರೆ 2 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ದ್ವೀಪ ರಾಷ್ಟ್ರ ಕುರಾಸಾವೊ ಫಿಫಾ ವಿಶ್ವಕಪ್ ಅಂಗಳದಲ್ಲಿ ಕಣಕ್ಕಿಳಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಫುಟ್ಬಾಲ್ ವಿಶ್ವಕಪ್ ಆಡಿದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ಇನ್ನು ಈ ಪಂದ್ಯದ ಆರಂಭದಲ್ಲಿ ಜರ್ಮನಿ ಮುನ್ನಡೆ ಪಡೆದರೂ, ಕುರಾಸಾವೊ ತಂಡದ ಲಿವಾನೊ ಕೊಮೆನೆನ್ಸಿಯಾ ಗಳಿಸಿದ ಐತಿಹಾಸಿಕ ಗೋಲು ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಕುರಾಸಾವೊ ದೇಶದ ಮೊದಲ ಗೋಲು ಎಂಬುದು ವಿಶೇಷ.
ಸಾರ್ವಕಾಲಿಕ ವಿಶ್ವ ದಾಖಲೆ
ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಒಂದು ತಂಡ ತನ್ನ ಮೊದಲ ಪಂದ್ಯದಲ್ಲಿ ಅತ್ಯಂತ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ ಹಂಗೇರಿ ತಂಡದ ಹೆಸರಿನಲ್ಲಿದೆ. 1982ರ ವಿಶ್ವಕಪ್ನ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಹಂಗೇರಿಯು ಎಲ್ ಸಾಲ್ವಡಾರ್ ವಿರುದ್ಧ 10 ಗೋಲುಗಳನ್ನು ಬಾರಿಸಿ 10-1 ರಿಂದ ಐತಿಹಾಸಿಕ ಜಯ ಸಾಧಿಸಿತ್ತು.
ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ!



