ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ Sಖಊ, ನಿಗದಿತ 20 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಭರ್ಜರಿ 255 ರನ್ ಗಳಿಸಿತು. Sಖಊ ಪರ ಇಶಾನ್ ಕಿಶನ್ ಕೇವಲ 46 ಎಸೆತಗಳಲ್ಲಿ ಭರ್ಜರಿ 79 ರನ್ ಬಾರಿಸಿ ಉತ್ತಮ ಪ್ರದರ್ಶನ ತೋರಿದರು. ಅದೇ ರೀತಿ ಹೆನ್ರಿ ಕ್ಲಾಸನ್ ಕೂಡ 24 ಎಸೆತಗಳಲ್ಲಿ 51 ರನ್ ಬಾರಿಸಿ ಗಮನ ಸೆಳೆದರು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ 56 ರನ್ ಬಾರಿಸಿ ಅಬ್ಬರಿಸಿದರೆ, ಟ್ರಾವಿಸ್ ಹೆಡ್ 16 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿ ನಿರಾಸೆ ಮೂಡಿಸಿದರು. Sಖಊ ಪಂದ್ಯ ಗೆದ್ದರೂ ಖಅಃ ಪಾಯಿಂಟ್ಸ್ ಟೇಬಲ್ನಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.
ಖಅಃ ಪರ ರಸೀಕ್ ಸಲಾಂ 4 ಓವರ್ನಲ್ಲಿ 52 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಸುಯಶ್ ಶರ್ಮಾ 3 ಓವರ್ನಲ್ಲಿ 36 ರನ್ ನೀಡಿ 1 ವಿಕೆಟ್ ಮತ್ತು ಕನಾಲ್ ಪಾಂಡ್ಯ 2 ಓವರ್ಗೆ 24 ರನ್ ನೀಡಿ 1 ವಿಕೆಟ್ ಪಡೆದರು. ಇನ್ನುಳಿದಂತೆ ಭುವನೇಶ್ವರ್ ಕುಮಾರ್ 4 ಓವರ್ನಲ್ಲಿ ಬರೋಬ್ಬರಿ 51 ರನ್ ನೀಡಿದ್ದಲ್ಲದೇ ಯಾವುದೇ ವಿಕೆಟ್ ಪಡೆಯಲಿಲ್ಲ. ಹಾಗೆಯೇ ಜೋಶ್ ಹೇಜಲ್ವುಡ್ ಕೂಡ 4 ಓವರ್ನಲ್ಲಿ 55 ರನ್ ನIಡಿ ಶೂನ್ಯ ವಿಕೆಟ್ ಸಂಪಾದಿಸಿದರು.
ಇನ್ನು SRH ನೀಡಿದ 256 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಖಅಃ ಓವರ್ಗಳಲ್ಲಿ ವಿಕೆಟ್ ನಷ್ಟಕ್ಕೆ ರನ್ ಗಳಿಸಿ ಸೋಲಲೊಪ್ಪಿಕೊಂಡಿತು. ತಂಡದ ಪರ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್ ಗಳಿಸಿದರು. ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 11 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದರು. ಮತ್ತೋರ್ವ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್ ಕೂಡ, 14 ಎಸೆತಗಳಲ್ಲಿ 21 ರನ್ ಬಾರಿಸಿ ಪೆವಿಲಿಯನ್ಗೆ ನಿರ್ಗಮಿಸಿದರು.
ಆದರೆ ನಾಯಕ ರಜತ್ ಪಾಟಿದಾರ್ 39 ಎಸೆತಗಳಲ್ಲಿ 56 ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ 41 ರನ್ಗಳಿಸಿ ಮಿಂಚಿದರಾದರೂ, ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಈ ಇಬ್ಬರೂ ಆಟಗಾರು ಪಂದ್ಯವನ್ನು ಅಂತಿಮ ಘಟ್ಟದವರೆಗೂ ಕೊಂಡೊಯ್ದಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಲಷ್ಟೇ ಶಕ್ತವಾಯಿತು. Sಖಊ ತಂಡ ಖಅಃ ತಂಡವನ್ನು 55 ರನ್ಗಳ ಅಂತರದಿAದ ಸೋಲಿಸಿತು.
ಆರ್ಸಿಬಿ ವಿರುದ್ಧ ಹೈದರಾಬಾದ್ ಗೆಲುವು!



