ಬೆಂಗಳೂರು : 2025ರ ಜುಲೈ ತಿಂಗಳಿನಲ್ಲಿ ಜಯನಗರದ ಆರನೇ ಬಡಾವಣೆಯ ಮನೆಯ ಮಾಲೀಕರು ಮನೆ ಬಾಗಿಲ ಬೀಗವನ್ನು ಹಾಕಿ ಬೀಗದ ಕೀಯನ್ನು ಹೊರಾಂಗಣದಲ್ಲಿ ಇಟ್ಟು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಬೀಗ ತೆಗೆದು ಕಪಾಟಿನಲ್ಲಿದ್ದ 30 ಗ್ರಾಂ ಚಿನ್ನದ ಗಟ್ಟಿಯನ್ನು ಕಳುವಾಗಿದ್ದ ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿತ್ತು. ಈ ಪ್ರಕರಣಕ್ಕೆ ಸಂಬAಧಪಟ್ಟಹಾಗೆ ಜಯನಗರ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ 3.5 ಲಕ್ಷ ರೂಪಾಯಿ ಬೆಲೆ ಬಾಳುವ 30 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿರುತ್ತಾರೆ.



