ಬಂಗಾರಪೇಟೆ: ದೇಶದಲ್ಲಿ ಮದರಸಾ ಹೆಸರಿನಲ್ಲಿ ಎಲ್ಲಾ ಕಡೆ ನುಗ್ಗುತ್ತಿದ್ದಾರೆ. ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 5 ಕೋಟಿ ಮುಸ್ಲಿಮರವರು ದೇಶದ ಒಳಗಡೆ ಇದ್ದಾರೆ. ಅವರಿಗೆ ಎಲ್ಲಾ ದಾಖಲೆಗಳಿವೆ. ನಾವು ತೆರಿಗೆ ಕಟ್ಟುವುದು ಅವರು ಸೌಲಭ್ಯ ಪಡೆಯುವುದು, ವಿಷಕಾರಿ ಜಂತುಗಳನ್ನು ನಾಶಪಡಿಸಬೇಕಾಗಿದೆ. ಓಟಗಾಗಿ ದೇಶದ್ರೋಹಿಗಳನ್ನು ಸಾಕುತ್ತಿದ್ದೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಪಟ್ಟಣದ ಪೋಲೀಸ್ ಠಾಣೆಯ ಮುಂದೆ ಸಿಐ ರವಿಕುಮರ್ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕಳೆದ 29 ರಂದು 45 ಮಂದಿ ಅಪ್ರಾಪ್ತರನ್ನು ಹಿಡಿದಿಟ್ಟ ಪೋಲೀಸರಿಗೆ ಅಭಿನಂದನೆ ಸಲ್ಲಿಸಿದರು. ದೇಶದಲ್ಲಿ ಅಪ್ರಾಪ್ತ ಬಾಲಕರನ್ನು ಶಂಕಾಸ್ಪದವಾಗಿ ರಾಜ್ಯಾಂತರ ಸಾಗಾಟ ಮಾಡಿರುವ ಗಂಭೀರ ಪ್ರಕರಣ, ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸುಮಾರು 45 ಅಪ್ರಾಪ್ತ ಬಾಲಕರು ಗುಂಪಾಗಿ ರೈಲಿನಿಂದ ಇಳಿದು ಬರುತ್ತಿರುವುದು ಗಮನಕ್ಕೆ ಬಂದಿದ್ದು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದಾಗಲೂ ಸಹ ಮಕ್ಕಳ ಬಳಿ ಯಾವುದೇ ಕಾನೂನುಬದ್ದ ದಾಖಲೆಗಳು ಇಲ್ಲದಿರುವುದು ದೃಢಪಟ್ಟಿದ್ದು, ಈ ಎಲ್ಲಾ ಬಾಲಕರನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಇವರೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳು ಮಕ್ಕಳನ್ನು ಬಿಹಾರ ರಾಜ್ಯದಿಂದ ಕರೆತಂದಿದ್ದು, ಹಾವೇರಿ ಜಿಲ್ಲೆಗೆ ಧಾರ್ಮಿಕ ಶಿಕ್ಷಣಕ್ಕಾಗಿ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ. ಈ ಹೇಳಿಕೆ ಸಂಪೂರ್ಣವಾಗಿ ಅನುಮಾನಾಸ್ಪದವಾಗಿದೆ, ಪೋಷಕರ ಲಿಖಿತ ಅನುಮತಿ ಇಲ್ಲದೆ ಅಪ್ರಾಪ್ತಮಕ್ಕಳನ್ನು ರಾಜ್ಯಾಂತರವಾಗಿ ಹೇಗೆ ಸಾಗಿಸಲಾಗಿದೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಇಂತಹ ಗುಂಪು ಪ್ರಯಾಣ ಹೇಗೆ ಅನುಮತಿಸಲಾಗಿದೆ ಹಾವೇರಿಗೆ ಹೋಗಬೇಕಾದ ಮಕ್ಕಳು ಬಂಗಾರಪೇಟೆಯಲ್ಲಿ ಪತ್ತೆಯಾಗಿರುವುದು ಏಕೆ ಮಕ್ಕಳ ಪೋಷಕರು ಸ್ಥಳಕ್ಕೆ ಬರುವುದಕ್ಕೂ ನಿರಾಕರಿಸಿರುವುದು ಯಾವ ರೀತಿಯ ಚಾಲದ ಸೂಚನೆ ಇದಲ್ಲದೆ, ಮಕ್ಕಳ ಬಳಿ ಕಂಡುಬAದ ಆಧಾರ್ ಕಾರ್ಡ್ಗಳ ಪ್ರಾಮಾಣಿಕತೆ ಬಗ್ಗೆ ಗಂಭೀರ ಅನುಮಾನವಿದ್ದು, ಇತ್ತೀಚಿನ ದಿನಗಳಲ್ಲಿ ಡುಪ್ಲಿಕೇಟ್, ಕಳ್ಳ ಆಧಾರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದು ಸಂಘಟಿತ ಮಾನವ ಕಳ್ಳಸಾಗಣೆ ಜಾಲದ ಭಾಗವಾಗಿರುವ ಸಾಧ್ಯತೆ ತೀವ್ರವಾಗಿದೆ.ಇನ್ನೂ ಗಂಭೀರ ವಿಷಯವಾಗಿದೆ. ಒಂದೇ ವೇಳೆ ಇಷ್ಟು ದೊಡ್ಡ ಸಂಖ್ಯೆಯ ಅಪ್ರಾಪ್ತ ಬಾಲಕರನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದರೂ ಮಧ್ಯಂತರದಲ್ಲಿ ಯಾವುದೇ ತಪಾಸಣೆ, ಪರಿಶೀಲನೆ ಅಥವಾ ಪ್ರಶ್ನೆ ಆಗದೆ ಇರುವುದು ರಾಜ್ಯದ ಭದ್ರತಾ ವ್ಯವಸ್ಥೆಯ ಸ್ಪಷ್ಟ ವೈಫಲ್ಯ ಆಗಿದ್ದು, ಇದು ನಿರ್ಲಕ್ಷ್ಯವಷ್ಟೇ ಅಲ್ಲ, ಅಪರಾಧಕ್ಕೆ ಪೂರಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಣಿಸುತ್ತದೆ. ಆದ್ದರಿಂದ. ಈ ಪ್ರಕರಣವನ್ನು ಅತಿ ಗಂಭೀರವಾಗಿ ಪರಿಗಣಿಸಿ ಕೆಳಕಂಡ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು:ಈ ಪ್ರಕರಣವನ್ನು ತಕ್ಷಣ ಮಾನವ ಕಳ್ಳಸಾಗಣೆ ಶಂಕೆಯಡಿ ಎಫ್ಐಆರ್ ದಾಖಲಿಸಬೇಕು. ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ತಕ್ಷಣಬಂಧನದಲ್ಲಿರಿಸಿ, ಕಸ್ಟೋಡಿಯಲ್ ವಿಚಾರಣೆ ನಡೆಸಬೇಕು.ಈ ಪ್ರಕರಣದ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು. ಎಲ್ಲಾ ಮಕ್ಕಳ ಗುರುತು. ಪೋಷಕರ ಮಾಹಿತಿ, ಮೂಲಸ್ಥಾನಗಳನ್ನು ರಾಜ್ಯಾಂತರ ಸಮನ್ವಯದ ಮೂಲಕ ಪರಿಶೀಲಿಸಬೇಕು. ಮಕ್ಕಳ ಬಳಿ ಇರುವ ಎಲ್ಲಾ ದಾಖಲೆಗಳನ್ನು ಫರೆನ್ಸಿಕ್ ಪರಿಶೀಲನೆಗೆ ಒಳಪಡಿಸಬೇಕು. ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಂತರದಲ್ಲಿ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಪ್ರಕರಣವು ಸಾಮಾನ್ಯ ಘಟನೆ ಅಲ್ಲ: ಇದು ರಾಜ್ಯದ ಭದ್ರತೆ, ಮಕ್ಕಳ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸವಾಲಾಗಿದೆ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಆರೋಪಿಗಳನ್ನು ಬಂಧಿಸಿ, ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ನಾಟಕ ಒತ್ತಡ ಮಾಡಿದರೆ ನಾವು ಹಿಂದೂ ಸಂಘಟನೆಗಳು ಜಿಲ್ಲೆ, ರಾಜ್ಯದ್ಯಾಂತ ಬಂಗಾರಪೇಟೆ ಚಲೋ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ವಿಭಾಗೀಯ ಅಧ್ಯಕ್ಷರು ರಾಜ್ ಅರಸ್. ನಗರ ಅಧ್ಯಕ್ಷರು ಅರುಣ್, ಜಿಲ್ಲಾಧ್ಯಕ್ಷರು ವೆಂಕಟಸ್ವಾಮಿ, ಚಿನ್ನಪ್ಪ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಇನ್ನು ಮೊದಲಾದವರು ಹಾಜರಿದ್ದರು.
ದೇಶದಲ್ಲಿ ಮದರಸಾ ಹೆಸರಲ್ಲಿ ಮುಸ್ಲೀಮರು ಎಲ್ಲಾ ಕಡೆ ನುಗ್ಗುತ್ತಿದ್ದಾರೆ: ವಿಷಕಾರಿ ಜಂತುಗಳ ನಾಶಪಡಿಸಬೇಕಾಗಿದೆ-ಮುತಾಲಿಕ್



