ಕೋಲಾರ : ಜಿಲ್ಲೆಯಾದ್ಯಂತ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಉಳಿಯಬಾರದು ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಗೆ ದಾಖಲಾಗಬೇಕು ಹಾಜರಾಗಬೇಕು ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಅಲ್ಮಾಸ್ ಪರ್ವೀನ್ ತ್ರಾಜ್ ತಿಳಿಸಿದರು ಕೋಲಾರ ತಾಲೂಕಿನ ನರಸಾಪುರದಲ್ಲಿಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ದಾಖಲಾತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಅರ್ಹವಯ್ಸಿನ ಪ್ರತಿಯೊಬ್ಬ ಮಗುವು ಶಾಲೆಗೆ ಹಾಜರಾಗಬೇಕು ನಿಯಮಿತವಾಗಿ ದಾಖಲಾಗ ಬೇಕು. ಈ ನಿಟ್ಟಿನಲ್ಲಿ ಕೇವಲ ಶಿಕ್ಷಕರೇ ಅಲ್ಲದೆ ಪೋಷಕರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಯ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಕಲಿಕಾ ವಾತಾವರಣವನ್ನು ಪ್ರತಿ ಶಾಲೆಯಲ್ಲಿ ನಿರ್ಮಿಸಿದ್ದು ಅಗತ್ಯ ಪೀಠೋಪಕರಣ ಶಿಕ್ಷಕರನ್ನು ಒದಗಿಸಿ, ವಿದ್ಯಾರ್ಥಿಗಳನ್ನು ಪ್ರಭುತ್ವ ನಾಗರಿಕರನ್ನಾಗಿ ತಯಾರು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಕೇವಲ ಶಿಕ್ಷಕರಷ್ಟೇ ಜವಾಬ್ದಾರರಲ್ಲದೆ ಅವರನ್ನು ಪೋಷಣೆ ಮಾಡುತ್ತಿರುವ ಪೋಷಕರು ಈ ಜವಾಬ್ದಾರಿಯನ್ನು ಹೊರಬೇಕು. ಈ ದಿಸೆಯಲ್ಲಿ ತಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತಯಾರು ಮಾಡುವ ಹೊಣೆಗಾರಿಕೆಯನ್ನು ಹೊರಬೇಕು ಎಂದರು.
ಸರ್ವ ಶಿಕ್ಷಣ ಅಭಿಯಾನ ತಾಲೂಕು ಸಮನ್ವಯಾಧಿಕಾರಿ ರಾಧಮ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಗತಿಗೆ ಎಲ್ಲಾ ರೀತಿಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಶಾಲಾ ಆರಂಭಕ್ಕೂ ಮುನ್ನವೇ ದಾಖಲಾತಿಯ ಬಗ್ಗೆ ಅರಿವನ್ನು ಉಂಟುಮಾಡುವ ಕಾರ್ಯವನ್ನು ಶಿಕ್ಷಕರೇ ಅಲ್ಲದೆ ಪೋಷಕರು ಭಾಗಿಗಳಾಗಿ ವಿದ್ಯಾರ್ಥಿಗಳ ದಾಖಲಾತಿಗೆ ಸ್ಪಂದಿಸಬೇಕು ಎಂದರು.ಆಂದೋಲನದಲ್ಲಿ ಬಿಆರ್ಸಿ ಸಂಯೋಜಕಿ ರಾಧಮ್ಮ, ಇಸಿಒ ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ, ಮುಖ್ಯೋಪಾದ್ಯಾಯ ಜಗನ್ನಾಥ್, ಕೆಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳ, ಬಿಆರ್ಪಿ ಮಲ್ಲಿಕಾರ್ಜುನ್, ಹನುಮಾನ್ ಸಿಂಗ್, ಶ್ರೀರಾಮಯ್ಯ, ವೆಂಕಟರವಣ, ಶೈಲಜಾ, ಹಂಸವೇಣಿ, ಭಾರತಿ, ಸೌಮ್ಯಾ, ಕೋಮಲ, ನಾರಾಯಣಮ್ಮ, ಮನುಜ, ರೇಣುಕಾ, ಅರ್ಚನಾ ಹಾಗೂ ಸಿಬ್ಬಂದಿ ವರ್ಗ ಭಾಗಿಯಾಗಿದ್ದರು.
ಕರ್ನಾಟಕ ಪಬ್ಲಿಕ್ ಶಾಲೆಯಿಂದ ದಾಖಲಾತಿ ಆಂದೋಲನ



