ಐಪಿಎಲ್ 2026ರ ಸೀಸನ್ ನಲ್ಲಿ ಈವರೆಗೂ ಒಂದೇ ಒಂದು ಗೆಲುವು ಕಾಣದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಇದೀಗ ಗೆಲುವಿನ ಹಾದಿ ಕಂಡುಕೊಂಡಿರುವ ಗುಜರಾತ್ ಟೈಟಾನ್ಸ್ ತಂಡ ಏಪ್ರಿಲ್ 17ರ ಶುಕ್ರವಾರದಂದು ಮುಖಾಮುಖಿಯಾಗಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಅತ್ಯಂತ ಪೈಪೋಟಿಯಿಂದ ಕೂಡಿರಬಹುದು ಎಂದು ನಿರೀಕ್ಷಿಸಲಾಗಿದೆ.ಪ್ರಾರಂಭದ ಎರಡು ಪಂದ್ಯಗಳನ್ನು ಸೋತರೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ಗಳ ರೋಮಾಂಚಕ ಮತ್ತು ಲಖನೌ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ನಾಯಕ ಶುಭ್ ಮನ್ ಗಿಲ್ ಅವರು ಈ ಹಿಂದಿನ ಪಂದ್ಯದಲ್ಲಿ ಸೊಗಸಾದ ಅರ್ಧಶತಕದೊಂದಿಗೆ ಫಾರ್ಮ್ ಕಂಡುಕೊAಡಿದ್ದಾರೆ. ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಸಹ ಜವಾಬ್ದಾರಿಯುತ ಬ್ಯಾಟಿಂಗ್ ಆಡುತ್ತಿದ್ದಾರೆ ಸಿರಾಜ್, ರಬಾಡಾ, ಪ್ರಸಿದ್ದ ಕೃಷ್ಣ ಅವರನ್ನೊಳಗೊಂಡ ಬೌಲಿಂಗ್ ವಿಭಾಗವಂತೂ ಬಹಳ ಬಲಿಷ್ಛವಾಗಿದೆ.ಮತ್ತೊಂದೆಡೆ, ಅಜಿಂಕ್ಯ ರಹಾನೆ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಈ ಟೂರ್ನಿಯಲ್ಲಿ ತನ್ನ ಚೊಚ್ಚಲ ಗೆಲುವಿಗಾಗಿ ಹೋರಾಡುತ್ತಿದೆ. ತಂಡ ಯಾವುದೂ ಅಂದುಕೊAಡAತೆ ನಡೆಯುತ್ತಿಲ್ಲ. ಅಜಿಂಕ್ಯ ರಹಾನೆ ಸೇರಿದಂತೆ ಯಾರಿಂದಲೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಬರುತ್ತಿಲ್ಲ. ಅಂಗ್ಕಿçಷ್ ರಘುವಂಶಿ ಮಾತ್ರ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡುವುದನ್ನು ತಂಡದ ಮ್ಯಾನೇಜ್ ಮೆಂಟ್ ಎದುರು ನೋಡುತ್ತಿದೆ. ಕನ್ನಡಿಗ ಮನೀಷ್ ಪಾಂಡೆ ಅವರಿಗೆ ಈವರೆಗೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ದೊರೆತಿಲ್ಲ. ಈ ಪಂದ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಕೆಕೆಆರ್ ಈವರೆಗೆ ಆಡಿರುವ ಪಂದ್ಯಗಳಲ್ಲಿ ಗೆಲುವು ಕಾಣದ ಏಕೈಕ ತಂಡವಾಗಿದ್ದು ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೋಲ್ಕತಾ ತಂಡ ಆಡಿರುವ 5 ಪಂದ್ಯಗಳಲ್ಲಿ 4ನ್ನು ಸೋತಿದ್ದು ಒಂದು ಪಂದ್ಯ ರದ್ದಾಗಿದೆ.
ಪಿಚ್ ವರದಿ ಮತ್ತು ಹವಾಮಾನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕ ಬ್ಯಾಟಿಂಗ್ಗೆ ಹೆಚ್ಚಿನ ನೆರವು ನೀಡುತ್ತದೆ. ಹಾಗೆಂದು ವಾಂಖೆಡೆ, ಚಿನ್ನಾಸ್ವಾಮಿ ಕ್ರೀಡಾಂಗಣಗಳAತೆ ಕಣ್ಣಮುಚ್ಚಿ ಚೆಂಡನ್ನು ಸಿಕ್ಸರ್ ಗೆತ್ತಿ ಹಾಕುವ ಸೀನ್ ಖಂಡಿತಾ ಇಲ್ಲ. ಯಾಕೆಂದರೆ ದೊಡ್ಡ ಬೌಂಡರಿಗಳಿರುವುದರಿAದ ಬ್ಯಾಟರ್ ಈ ಬಗ್ಗೆ ಜಾಗ್ರತೆಯಿರಬೇಕಾಗುತ್ತದೆ. ಪಿಚ್ ಪ್ರಾರಂಭದಲ್ಲಿ ಬೌಲರ್ ಗಳಿಗೆ ಅನುಕೂಲ ಮಾಡಿಕೊಟ್ಟರೂ ಹೊತ್ತು ಹೋದಂತೆ ಬ್ಯಾಟರ್ಗಳು ಒಮ್ಮೆ ಕ್ರೀಸ್ಗೆ ಹೊಂದಿಕೊಂಡರೆ ರನ್ ಮಳೆ ಹರಿಸುವುದು ಸುಲಭ.
ಗೆಲುವನ್ನೇ ಕಾಣದ ಕೊಲ್ಕತ್ತಾ ಗುಜರಾತ್ ವಿರುದ್ಧವಾದರೂ ಗೆಲ್ಲುತ್ತಾ?



