ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ, ಮಿಚೆಲ್ ಸ್ಟಾರ್ಕ್, ಲುಂಗಿ ಎನ್ ಗಿಡಿ ಮತ್ತು ಮಿಚೆಲ್ ಸ್ಟಾರ್ಕ್ ಬಿಗು ಬೌಲಿಂಗ್ ನ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2026ರ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 40 ರನ್ ಗಳಿಂದ ಜಯಿಸಿದೆ. ಈ ಮೂಲಕ ಸೀಸನ್ ಗೆ ಶುಭವಿದಾಯ ಹೇಳಿದೆ. ಇದೇವೇಳೆ ರಾಜಸ್ಥಾನ ರಾಯಲ್ಸ್ ಗೆಲುವಿನಿಂದಾಗಿ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪಂದ್ಯವನ್ನೂ ಸೋಲುವ ಮೂಲಕ ಸಪ್ಪೆ ಮೋರೆ ಹಾಕಿತು.
ಕೋಲ್ಕತಾ ನಗರದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 203 ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ 18.4 ಓವರ್ ಗಳಲ್ಲಿ 163 ರನ್ ಗಳಿಗೆ ಸರ್ವಪತನ ಕಂಡಿತು. ಕೋಲ್ಕತಾ ತಂಡದ 3 ಪ್ರಮುಖ ವಿಕೆಟ್ ಗಳನ್ನು ಪಡೆದ ಕುಲ್ದೀಪ್ ಯಾದವ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಲುಂಗಿ ಎನ್ ಗಿಡಿ, ಮಿಚೆಲ್ ಸ್ಟಾರ್ಕ್ ಮತ್ತು ಕುಲ್ದೀಪ್ ಯಾದವ್ ಅವರ ಅತ್ಯುತ್ತಮ ಬೌಲಿಂಗ್ ನಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್ ಗಳು ಅಕ್ಷರಶಃ ತತ್ತರಿಸಿದರು. ನಾಯಕ ಅಜಿಂಕ್ಯ ರಹಾನೆ (39 ಎಸೆತದಿಂದ 63 ರನ್) ಅವರನ್ನು ಹೊರತುಡಿಸಿದರೆ ಬೇರಾವ ಬ್ಯಾಟರ್ ಸಹ ಪ್ರತಿರೋಧ ತೋರಲಿಲ್ಲ. ಹೀಗಾಗಿ ಡೆಲ್ಲಿ ಸುಲಭ ಜಯ ಸಂಪಾದಿಸಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಾಯಕ ಅಜಿಂಕ್ಯ ರಹಾನೆ(39 ಎಸೆತದಲ್ಲಿ 63 ರನ್) ಮತ್ತು ಫಿನ್ ಅಲೆನ್ (13 ಎಸೆತದಲ್ಲಿ 20 ರನ್) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್(25 ಎಸೆತದಲ್ಲಿ 39 ರನ್) ಮತ್ತು ಡೇವಿಡ್ ಮಿಲ್ಲರ್ (19 ಎಸೆತದಲ್ಲಿ 28 ರನ್) ಅವರ ಉತ್ತಮ ಪ್ರದರ್ಶನದಿಂದಾಗಿ 200ರ ಗಡಿ ದಾಟಿತು.
ಕುಲ್ದೀಪ್ ಮಾಂತ್ರಿಕ ಬೌಲಿಂಗ್ಗೆ ತತ್ತರಿಸಿದ ಕೋಲ್ಕತಾ ಡೆಲ್ಲಿ ಕ್ಯಾಪಿಟಲ್ಸ್ ನಿಂದ ಗೆಲುವಿನ ವಿದಾಯ



