ದೊಡ್ಡಬಳ್ಳಾಪುರ: ಸಾರ್ವಜನಿಕ ವಲಯದಲ್ಲಿ ಯಾವುದೇ ಉದ್ಯಮ ನಡೆಸುವುದು ಅಥವಾ ಸೇವೆ ಸಲ್ಲಿಸುವುದು ಸವಾಲಿನ ಕೆಲಸವಾಗಿದೆ ಎಂದು ಮಂಜುನಾಥ ಗ್ಯಾಸ್ ಏಜೆನ್ಸಿ ಮಾಲಿಕ ದಯಾನಂದ್ ಅಭಿಪ್ರಾಯ ಪಟ್ಟರು.
ನಗರದ ಕೇಂದ್ರ ಭಾಗದಲ್ಲಿರುವ ನಮ್ಮ ಏಜನ್ಸಿಯು ನಿರಂತರವಾಗಿ ಸಾರ್ವಜನಿಕರ ಅಗತ್ಯಗಳಿಗೆ ತಕ್ಕಂತೆ ಗ್ಯಾಸ್ ಪೂರೈಕೆ ಮಾಡುವ ಮೂಲಕ 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಸಂತಸದ ಸಂಗತಿ ನಮ್ಮ ಸಂಸ್ಥೆಯ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡುವ ಮೂಲಕ ನಮ್ಮ ಸಂಸ್ಥೆಗೆ ಉತ್ತಮ ಹೆಸರು ಬಂದಿದೆ ಎಂದರು.
ಈ ಸಮಯದಲ್ಲಿ ಮತ್ತೊಬ್ಬ ಮಾಲಿಕರಾದ ನಂದಕುಮಾರ್, ಸಿಬ್ಬಂದಿ ವರ್ಗದವರಾದ ರವಿಚಂದ್ರ, ಗಿರೀಶ್ ಹಾಗೂ ಕಾರ್ಮಿಕ ವರ್ಗದವರು ಈ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.