ಬೆಂಗಳೂರು: ಅತೀ ಪುರಾತನ ಇತಿಹಾಸ ಹೊಂದಿರುವ ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿ, ಸಂಸ್ಕಾರ, ಕಲೆ, ಧಾರ್ಮಿಕತೆ ಪರಂಪರೆ ಜೊತೆಗೆ ಜೀವನ ಪದ್ಧತಿಯೂ ಹೊಂದಿದೆ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಈಚಿನ ದಿನಗಳಲ್ಲಿ ಯುವಜನತೆ ಕನ್ನಡ ಸಾಹಿತ್ಯದತ್ತ ಒಲವು ತೋರುತ್ತಿರುವುದು ಹರ್ಷದಾಯಕ ಸಂಗತಿ ಎಂದು ಖ್ಯಾತ ಹಾಸ್ಯ ಲೇಖಕ ಶ್ರೀ ಎಂ ಎಸ್ ನರಸಿಂಹ ಮೂರ್ತಿಯವರು ಅಭಿಪ್ರಾಯಪಟ್ಟರು..
ಎಂ.ಎಸ್. ನರಸಿಂಹಮೂರ್ತಿಯವರು ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ಇದೆ. ತನ್ನದೇಯಾದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಪಡೆದುಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ, ಭಾಷೆಯಾಗಿ ಉಳಿಯದೇ ನಡೆ, ನುಡಿ, ಸಂಸ್ಕೃತಿಯಲ್ಲಿ ಅದು ಬಿಂಬಿತವಾಗಿದೆ ಎಂದರು.
ಕೆನರಾ ಬ್ಯಾಂಕ್ ನ ವಿಭಾಗೀಯ ಮ್ಯಾನೇಜರ್ ಪ್ರಹ್ಲಾದ್ ರಾವ್ ರವರು ಮಾತನಾಡಿ, ಕೆನರಾ ಬ್ಯಾಂಕ್ ಕನ್ನಡ ಭಾಷೆಗೆ ಮೊದಲಿನಿಂದಲೂ ಹೆಚ್ಚಿನ ಪ್ರಾಶಸ್ತ್ಯ ವನ್ನು ಕೊಡುತ್ತಾ ಬರುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ಜವಾಬ್ದಾರಿ ನಮ್ಮ ಕೈಲಿದೆ ಎಂದರು.
ಯೂತ್ಸ್ ಫಾರ್ ಬ್ಯಾಂಕ್ ಜಾಬ್ಸ್ ನ ಅಧ್ಯಕ್ಷರಾದ ಶ್ರೀ ವೆಂಕಟೇಶ ಶೇಷಾದ್ರಿಯವರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು ಮತ್ತು ಕರ್ನಾಟಕ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಂಸ್ಥೆಯ ನಿರ್ದೇಶಕ ಶ್ರೀ ರಾಘವೇಂದ್ರ ರವರು ಸ್ವಾಗತಿಸಿದರು ಮತ್ತು ಸಂಸ್ಥೆಯ ಸಾಧನೆಯ ಬಗ್ಗೆ ಪೂರ್ಣ ವಿವರ ನೀಡಿದರು.
ಕುಮಾರಿ ಅಕ್ಷತಾ ಕಾರ್ಯಕ್ರಮವನ್ನು ರೂಪಿಸಿದರು. ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ ಶ್ರೀ ಶ್ರವಣ್, ಚಂದನ್ ಕುಮಾರ್ , ಕರಿಬಸಪ್ಪ, ಕುಸುವ, ಸಿಂಚನಾ, ತೇಜಸ್ವಿನಿ, ಸೌಮ್ಯ ಮತ್ತು ಧನುಶ್ರೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ವೆಂಕಟೇಶ ಬಾಬು ಮತ್ತು ಅನುಶ್ರೀ ರವರು ಉಪಸ್ಥಿತರಿದ್ದರು.