ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗಂಗಾನದಿ ತಟದಲ್ಲಿ ದೋಣಿ ವಿಹಾರನಡೆಸಿದ್ದಾರೆ. ಏ.29ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ದೋಣಿ ವಿಹಾರ ನಡೆಸುತ್ತಿರುವ ಕೆಲವು ಫೋಟೋಗಳನ್ನು ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಇಂದು ಬೆಳಿಗ್ಗೆ ಕೋಲ್ಕತ್ತಾದ ಗಂಗಾ ನದಿಯ ಉಪನದಿಯಾಗಿರುವ ಹೂಗ್ಲಿ ನದಿಯಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ದೋಣಿ ವಿಹಾರವನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಪ್ರತಿಯೊಬ್ಬ ಬಂಗಾಳಿಗನಿಗೂ, ಗಂಗಾ ನದಿ ಬಹಳ ವಿಶೇಷ ಹಾಗೂ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಗಂಗಾ ಕೇವಲ ನದಿಯಾಗಿರದೇ ಇಲ್ಲಿನ ಸಂಸ್ಕೃತಿ, ಇತಿಹಾಸ, ಜೀವನಶೈಲಿಯನ್ನು ಎತ್ತಿತೋರಿಸುವ ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ. ಇಲ್ಲಿನ ನೀರು ನಾಗರಿಕತೆಯ ಚೆತನ್ಯವನ್ನು ಹೊತ್ತೊಯ್ಯುತ್ತದೆ. ಇಂದು ಬೆಳಿಗ್ಗೆ ನಾನು ಕೋಲ್ಕತ್ತಾದ ಹೂಗ್ಲಿ ನದಿಯ ದಡದಲ್ಲಿ ಸ್ವಲ್ಪ ಸಮಯ ಕಳೆದು, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದೆ.
ಇದೇ ವೇಳೆ ವಿದ್ಯಾಸಾಗರ್ ಸೇತು ಹಾಗೂ ಹೌರಾ ಸೇತುವೆ ಕಣ್ತುಂಬಿಕೊAಡೆ. ಹೂಗ್ಲಿ ನದಿಯ ದಡದಲ್ಲಿ ನಿಂತು, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗರ ಸಮೃದ್ಧಿಗಾಗಿ ಶ್ರಮಿಸುವ ನಮ್ಮ ಭರವಸೆಯನ್ನು ಒತ್ತಿ ಹೇಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರಕ್ಕಾಗಿ ಭೇಟಿ ನೀಡಿರುವ ಅವರು ಇಂದು ಹೂಗ್ಲಿ ಹಾಗೂ ಗಂಗಾನದಿ ಸಂಗಮದ ಮಧ್ಯೆ ದೋಣಿ ವಿಹಾರ ನಡೆಸಿ ಕೆಲಕಾಲ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ
ಗಂಗಾ ತೀರದಲ್ಲಿ ಮೋದಿ ದೋಣಿವಿಹಾರ



