ಮುಂಬೈ: ಸಂಜು ಸ್ಯಾಮ್ಸನ್ಅವರ ಎರಡನೇ ಸ್ಫೋಟಕ ಶತಕ ಮತ್ತು ಹೊಸೈನ್ ಅವರ ಸ್ಪಿನ್ ಕೈಚಳಕದ ನೆರವಿನಿಂದ ತವರಿನಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಮುಂಬೈ 19 ಓವರ್ಗಳನ್ನು 104 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಟೂರ್ನಿಯಲ್ಲಿ ಐದನೇ ಸೋಲು ಕಂಡಿತು.
ಈ ಪಂದ್ಯಕ್ಕೂ ಮೊದಲು ಚೆನ್ನೈ 8ನೇ ಸ್ಥಾನದಲ್ಲಿತ್ತು. ಇಂದಿನ ಭರ್ಜರಿ ಜಯದಿಂದಾಗಿ ಚೆನ್ನೈ ನೆಟ್ ರನ್ ರೇಟ್ 0.118 ಕ್ಕೆ ಏರಿದ್ದರಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 7ನೇ ಸ್ಥಾನದಲ್ಲಿದ್ದ ಮುಂಬೈ 4 ಅಂಕಗಳೊAದಿಗೆ 8ನೇ ಸ್ಥಾನಕ್ಕೆ ಜಾರಿದೆ.
ಮುಂಬೈ 11 ರನ್ ಗಳಿಸುವಷ್ಟರಲ್ಲೇ ಕ್ವಿಂಟಾನ್ ಡಿ ಕಾಕ್, ನಮನ್ ಧಿರ್, ನಿಶ್ ಮಾಲೆವಾರ್ ಅವರ ವಿಕೆಟ್ ಕಳೆದುಕೊಂಡಿತು. ಈ ಸಮಯದಲ್ಲಿ ನಾಲ್ಕನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ 56 ಎಸೆತಗಳಲ್ಲಿ 73 ರನ್ ಜೊತೆಯಾಟವಾಡಿದರು.
84 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ನಂತರ 3 ರನ್ ಗಳಿಸುವಷ್ಟರಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರುದರ್ಪೋರ್ಡ್, ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಳೆದಕೊಳ್ಳುವ ಮೂಲಕ ಸೋಲಿನತ್ತ ಮುಖ
ಮಾಡಿತು.
ತಿಲಕ್ ವರ್ಮಾ 37 ರನ್(29 ಎಸೆತ, 5 ಬೌಂಡರಿ,)ಸೂರ್ಯಕುಮಾರ್ ಯಾದವ್ 35 ರನ್(30 ಎಸೆತ, 5 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ಚೆನ್ನೈ ಪರ ಹೊಸೈನ್ 4 ವಿಕೆಟ್, ನೂರ್ ಅಹ್ಮದ್ 2 ವಿಕೆಟ್ ಪಡೆದರು.
ಚೆನ್ನೈ ಸೂಪರ್ ಆಟಕ್ಕೆ ಮುಂಬೈ ಪಲ್ಟಿ 5ನೇ ಸ್ಥಾನಕ್ಕೆ ಹೈಜಂಪ್



