LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ: ಗುರುಗಳಿಗೆ ಅಭಿನಂದನೆ ಸಲ್ಲಿಸಿದ 1992/93ನೇ ಸಾಲಿನ ವಿದ್ಯಾರ್ಥಿಗಳು

ತುಮಕೂರು: ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟ ಶಿಕ್ಷಕ ಬಳಗ ಇಡೀ ಸಮಾಜಕ್ಕೆ ಆದರ್ಶ ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ ಉಳಿಯುವುದು ಇಂತಹ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದು ಉದ್ಯಮಿ ಪ್ರಗತಿ ಎಂಟರ್ಪ್ರೈಸಸ್ ಮಾಲೀಕರಾದ ವಿ ಜಿ ತೋಪೇಗೌಡ ಅಭಿಪ್ರಾಯಪಟ್ಟರು.ಗೂಳೂರು ಹೋಬಳಿ ಮಸ್ಕಲ್ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1992/93ನೇ ಸಾಲಿನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ.

ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದ್ದೇವೆ ಎಂದರು.
ಹಳೇ ವಿದ್ಯಾರ್ಥಿಯಶೋದಾಮಸ್ಕಲ್ ಮಾತನಾಡಿ ಗುರುಗಳು ನಮ್ಮ ಪಾಲಿಗೆ ದೇವರಿದ್ದಂತೆ. ಇಂದಿನ ಯುವ ಪೀಳಿಗೆ ಗುರುಗಳ ಮಾರ್ಗದಲ್ಲಿ ನಡೆದಾಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಶಿಕ್ಷಕರಾದ ಜಿ. ಡಿ ಹನುಮಂತರಾ ಯಪ್ಪ ಮಾತನಾಡಿ ಶಿಕ್ಷಕವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು ಈ ಗುರುವಂದನಾ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದ್ದು ಸದಾ ಸ್ಮರಿಸುವ ದಿನವಾಗಿರುತ್ತದೆಮಕ್ಕಳನ್ನು ಉರಿದುಂಬಿಸಿ ಪ್ರೊಸ್ತಾಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣಮಾಡುವವರು ಶಿಕ್ಷಕರಾಗುತ್ತಾರೆ ಎಂದರು.
ಬಿಜೆಪಿ ಮುಖಂಡ ಬಿದರಕಟ್ಟೆಸಿದ್ದೇಗೌಡ ಮಾತನಾಡಿ ನಾವು ಸಮಾಜದಲ್ಲಿ ಇಂದು ಗುರುತಿಸಿಕೊಂಡು ಮೇಲ್ಪoಕ್ತಿಹಾಕಿ ಬೆಳೆಯಲು ಕಾರಣರಾದವರೇ ನಮಗೆ ಶಿಕ್ಷಣ ಕೊಟ್ಟ ಗುರುಗಳು ಎಂದರು.

ಗುರುವಂದನಾ ಕಾರ್ಯಕ್ರಮ ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಮೊದಲಿಗೆ ವಿದ್ಯಾರ್ಥಿಗಳು ಜೊತೆಗೂಡಿ ಶಿಕ್ಷಕರನ್ನು ಸರೋಟಿನಲ್ಲಿ ಕುಳ್ಳಿರಿಸಿಕೊಂಡು ವೀರಗಾಸೆ, ತಮಟೆ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಪೂರ್ಣ ಕುಂಭ ಸ್ವಾಗತ ದೊಂದಿಗೆ ವೇದಿಕೆಗೆ ಕರೆತರಲಾಯಿತು. ನಂತರವೇದಿಕೆ ಮೇಲೆ ಭರತ ನಾಟ್ಯ,ಕರಾಟೆ, ಮಿಮಿಕ್ರಿ. ಇನ್ನುಮುಂತಾದ ಮನರಂಜನೆ ಕಾರ್ಯಕ್ರಮ ನೆಡೆದವು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದವರಿಗೆ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು,

ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ತಮ್ಮಡಿಹಳ್ಳಿ ಮಠದ ಸಿದ್ದಲಿಂಗದೇಶಿಕೇಂದ್ರಸ್ವಾಮೀಜಿ ಭೂಮಿ ದಾನಿಗಳಾದ ಜಿ ಮಡಿಯಪ್ಪ ಹಾಗೂ ಕುಟುಂಬಸ್ಥರು, ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಕೋದಂಡರಾಮಯ್ಯ, ಹೆಗ್ಗೆರೆ ನರಸಿಂಹಮೂರ್ತಿ, ವೀರಸಾಗರ ವಿ.ಎನ್.ದೇವರಾಜು,ಶ್ರೀಪತಿಹಳ್ಳಿನಟರಾಜು, ಸುಬ್ರಮಣ್ಯ, ಪದ್ಮರಾಜು ಮಮತ, ಕೆಂಪಹನುಮಯ್ಯ, ರಂಜನಾ ಉಮೇಶ್ ನಾಯಕ್, ಗಂಗಸಿದ್ದಯ್ಯ ಹಾಗೂ ಹಳೇ ವಿದ್ಯಾರ್ಥಿಗಳಾದ ಶ್ರೀನಿವಾಸ್, ಶ್ರೀಧರ್, ಕೆ ಆರ್ ಚಿಕ್ಕಣ್ಣ, ಕೆ.ಸಿ.ಚಿಕ್ಕಣ್ಣ, ಕೆ ಹನುಮಂತರಾಜು, ಪೂರ್ಣಿಮಾ, ಮಂಜುಳಾ, ಭಾಗ್ಯಮ್ಮ, ಎಂ. ಪಿ ಮಂಜುನಾಥ್, ಇತರರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು