‘ರಾಮರಸ’ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಚಿತ್ರಕ್ಕೆ ಇದೀಗ ಮತ್ತೊಂದು ದೊಡ್ಡ ಸರ್ಪೈಸ್ ಸೇರ್ಪಡೆಯಾಗಿದೆ. ತಾರೆ ಅನುಷಾ ರೈ ‘ರಾಮರಸ’ ತಂಡವನ್ನು ಸೇರಿಕೊಂಡಿದ್ದಾರೆ.ಮೌನವೇ ಮಾತಾಗಿರುವ ಸುಂದರಿ - ಆತ್ಮೀಯ ಜೀವನವನ್ನು ಹೊಂದಿರುವ ಸೌಮ್ಯ ಶಿಕ್ಷಕಿ*ಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರವು ಕಥೆಗೆ ಭಾವನೆ, ಆಳ ಮತ್ತು ಶಾಂತತೆಯನ್ನು ತರುತ್ತದೆ ಮತ್ತು ಚಿತ್ರದ ಅತ್ಯಂತ ಸ್ಮರಣೀಯ ಅಂಶಗಳಲ್ಲಿ ಒಂದಾಗಲಿದೆ. ಎನ್ನುತ್ತಾರೆ ನಿರ್ದೇಶಕರು.
ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್, ಶರಣ್ ಮತ್ತು ಹೆಬಾ ಪಟೇಲ್ ಮುಂತಾದ ತಾರಾಬಳಗವಿದೆ.
ಗುರು ದೇಶಪಾಂಡೆ ಮತ್ತು ವಿಕ್ರಮ್ ಆರ್ಯ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಅಧಿಕೃತ ಟೀಸರ್ ಮತ್ತು ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.