LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ವಿಜಯೇಂದ್ರ ವಿರುದ್ಧ ತಂಗಡಗಿ ವಾಗ್ದಾಳಿ


ಬೆಂಗಳೂರು: ಪೋಕ್ಸೋ ಪರಾಕ್ರಮಿಯ ಪುತ್ರ ವಿಜಯೇಂದ್ರ ಅವರೇ..! ನನ್ನ ದುರಹಂಕಾರಿ ಎಂದಿದ್ದೀರಿ, ಏಕ ವಚನದಲ್ಲಿ ಸಂಬೋಧಿಸಿ ಅಹಂಕಾರ ಮೆರೆದಿದ್ದೀರಿ, ನಮ್ಮಪ್ಪನ ಬಗ್ಗೆ ಮಾತನಾಡಿದ್ದೀರಿ, ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ರಾಜಕೀಯ ಬೂಟಾಟಿಕೆ ಪ್ರದರ್ಶಿಸಿದ್ದೀರಿ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿವೇಕಕ್ಕೆ ಅಂಗಿ ಹಾಕಿದರೆ ಹಾದಿಯಲ್ಲಿ ಬೆತ್ತಲಾದಂತಿತ್ತು ನಿಮ್ಮ ಕೀಳು ಹಾಗೂ ಆಧಾರರಹಿತ ಭಾಷಣ. ಹಾಗೂ ವ್ಯರ್ಥ ಪ್ರಲಾಪ, ಭ್ರಷ್ಟಾಚಾರದ ಪಿತಾಮಹರು, ಹಗರಣಗಳ ಧುರೀಣರು, ಅವ್ಯವಹಾರಗಳ ಆದಿಪುರುಷರನ್ನ ಕಂಕುಳಲ್ಲೇ ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಚೀರಾಡುತ್ತಿದ್ದೀರಿ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲುಗಾಡುತ್ತಿರುವ ನಿಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹೊರಬಂದ ನಿಮ್ಮ ಆರ್ತನಾದ, ಸ್ಮಶಾನ ರೋದನೆ ನನಗೆ ಅರ್ಥವಾಗಿದೆ. ವಯಸ್ಸು, ರಾಜಕೀಯ ಅನುಭವ, ಜನಸೇವೆಯಲ್ಲಿ ನಾನು ನಿಮಗಿಂತ ಹಿರಿಯ. ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ವಯಸ್ಸಿನಲ್ಲಿ ದೊಡ್ಡವರಿಗೆ ಏಕವಚನದಲ್ಲಿ ಮಾತನಾಡಿದರೆ, ತಾವು ರಾಜಕೀಯವಾಗಿ ದೊಡ್ಡವರಾಗಬಹುದು ಎಂದುಕೊAಡಿದ್ದೀರಿ. ಇದು ನಿಮ್ಮ ದಡ್ಡತನದ ಪ್ರದರ್ಶನ. ವಿಷಯಾಧಾರಿತವಾಗಿ ಮಾತನಾಡಲು ಧೈರ್ಯವಿಲ್ಲದವರು  ವೈಯಕ್ತಿಕ ಟೀಕೆಯ ಮೊರೆ ಹೋಗುತ್ತಾರೆ. ನಿಮ್ಮದೂ ಅದೇ ಅಸಹಾಯಕ ಸ್ಥಿತಿ. ನಿಮ್ಮ ಮಾನಸಿಕ ಸ್ಥಿತಿ ಬಗ್ಗೆ ಮರುಕ ಇದೆ. ನಾನು ನಿಮಗಿಂತ ಕೀಳು ಭಾಷೆಯಲ್ಲಿ ಮಾತನಾಡಬಲ್ಲೆ. ಆದರೆ ನನಗೆ ಸಂಸ್ಕಾರ ಇದೆ. ಹೀಗಾಗಿ ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡಲಾರೆ. ಮುಖ್ಯವಾಗಿ ನನ್ನ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿರುವುದು ಜನಸೇವೆಗೆ ಹೊರತು ಹೊಲಸು ಮಾತಿಂದ ಬಾಯಿ ನಂಜು ಮಾಡಿಕೊಳ್ಳಲು ಅಲ್ಲ ಎಂಬ ಕನಿಷ್ಠ ಪ್ರಜ್ಞೆ ನನಗೆ ಇದೆ. ನಿಮ್ಮ ಪಶ್ಚಾತ್ತಾಪ ಯಾತ್ರೆ ಟೇಕಾಫ್ ಆಗಿಲ್ಲ. ನಮ್ಮ ಭಾಗದಲ್ಲಿ ನಿಮಗೆ ಇಮೇಜ್ ಇಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ರಾಜಕೀಯ ಯಾತ್ರೆಗೆ ಸ್ವಲ್ಪ ಮೈಲೇಜ್ ಬರಬಹುದು ಎಂಬ ನಿಮ್ಮ ಪ್ರಯತ್ನ ಸರಿ ಇದೆ. ರಾಜಕೀಯ ಕೆಸರೆರಚಾಟದ ಮೇಲೆ ನನಗೆ ಆಸಕ್ತಿ ಇಲ್ಲ. ಆದರೂ ನಿಮ್ಮ ಆರೋಪಗಳಿಗೆ ಉತ್ತರ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಮೊದಲನೇಯದಾಗಿ, ರೈತರಿಗೆ ನೀರು ಕೊಟ್ಟ ವಿಚಾರದಲ್ಲಿ ನನ್ನ ವಿರುದ್ಧ ಮಾತನಾಡಿದ್ದೀರಿ. ನೀರು ನಿಮ್ಮಪ್ಪನದ್ದೂ ಅಲ್ಲ, ನಮ್ಮಪ್ಪನದ್ದೂ ಅಲ್ಲ ಎಂದಿದ್ದೀರಿ. ಸಂಕಷ್ಟದ ಸಂದರ್ಭ ಹಾಗೂ ಅಳೆದು ತೂಗಿ ನೀರು ಬಿಡುವ ಪರಿಸ್ಥಿತಿಯಲ್ಲೂ ರೈತರಿಗಾಗಿ ನೀರು ಒದಗಿಸಿದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನಾನು. ನೀವು ರೈತರಿಗಾಗಿ ಏನು ಮಾಡಿದ್ದೀರಿ ಎಂಬುದನ್ನು ಮೊದಲು ಹೇಳಿ ಎಂದರು. ಕೇಂದ್ರ ಸರ್ಕಾರವು 2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ರೂ.5,300 ಕೋಟಿ ಅನುದಾನ ಇದುವರೆಗೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರಶ್ನಿಸಿ ಮೊದಲು ಅನುದಾನ ತನ್ನಿ. ಅಧಿಕಾರ ಕೊಟ್ಟರೆ 24 ಗಂಟೆಯಲ್ಲಿ ಮಹದಾಯಿ ಯೋಜನೆಗೆ ಅಂಗೀಕಾರ ಕೊಡಿಸುತ್ತೇನೆ ಎಂದವರ ಪುತ್ರ ತಾವು. ಮೊದಲು ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿAದ ಅಂಗೀಕಾರ ಕೊಡಿಸಿ. ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದವರು ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪ. ಡಿನೋಟಿಫಿಕೇಷನ್, ಪ್ರೇರಣಾ ಟ್ರಸ್ಟ್ ಗಳು ನಿಮಗೆ ನೀಡಿದ ಪ್ರೇರಣೆ ಇಡೀ ರಾಜ್ಯಕ್ಕೆ ಗೊತ್ತಿದೆ. ಗಟಿ ಲೂಟಿ ಮಾಡಿ ಜೈಲಿಗೆ ಹೋದ ಗಾಲಿ ಜನಾರ್ದನರೆಡ್ಡಿ, ಶ್ರೀರಾಮುಲು ಅಕ್ರಮ, ಅಶೋಕ್ ಭೂ ಹಗರಣ, ಅಶ್ವತ್ಥನಾರಾಯಣ ಮತಗಳ ಚಿಲುಮೆ ಎಲ್ಲವೂ ಒಂದಕ್ಕಿAತ ಒಂದು ಅದ್ಭುತ. ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನರಿಗೆ ವಾಕರಿಕೆ ಬಂದAತಾಗುತ್ತದೆ. ವಿಧಾನಸಭೆಯಲ್ಲಿ ರಾಜ್ಯದ ಬರಗಾಲ, ರೈತರ ಸಂಕಷ್ಟದ ಬಗ್ಗೆ ಚರ್ಚೆ ಮಾಡಿಲ್ಲ. ಈಗ ಪಾದಯಾತ್ರೆ ಮಾಡಿ ಜನರನ್ನು ಮರುಳು ಮಾಡಬಹುದು ಎಂದುಕೊಳ್ಳಬೇಡಿ.ಜನರಿಗಾಗಿ ಕೆಲಸಮಾಡುವವರಿಗೂ, ರಾಜಕೀಯಕ್ಕಾಗಿ ನಾಟಕ ಮಾಡುವವರಿಗೂ ಇರುವ ವ್ಯತ್ಯಾಸ ಜನರಿಗೆ ಗೊತ್ತಿದೆ. ಇನ್ನಾದರೂ ರಾಜ್ಯ ಸರ್ಕಾರದ ಬಗ್ಗೆ ಸುಳ್ಳು ಆರೋಪ ಬಿಡಿ. ರಾಜ್ಯದ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರವನ್ನು  ಒತ್ತಾಯಿಸಿ. ಅದು ಬಿಟ್ಟು ಬರೀ ಕಾಮಿಡಿ ಭಾಷಣ ಮಾಡುತ್ತಿದ್ದರೆ ಇದು ಹೋರಾಟ ಆಗಲ್ಲ, ಬದಲಿಗೆ ಮಜಾಭಾರತದ ಎಪಿಸೋಡ್ ಅಥವಾ ಮತ್ತೊಂದು ಕಾಮಿಡಿ ಕಿಲಾಡಿಗಳ ಶೋ ಆಗುತ್ತದೆ ಅಷ್ಟೇ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST