ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಫಲಿತಾಂಶ ವಿಳಂಬವಾಗಿದ್ದು, ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಮುಂದೇನು ಮಾಡಬೇಕು? ಎಂಬುದು ದಿಕ್ಕು ತೋಚದೇ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಒಬ್ಬರೋ, ಇಬ್ಬರೋ ಅಭ್ಯರ್ಥಿಗಳ ಸಮಸ್ಯೆಯಲ್ಲ. ಬರೋಬ್ಬರಿ 900 ಅಭ್ಯರ್ಥಿಗಳದ್ದು ಇದೇ ಸಮಸ್ಯೆ. ಫೆಬ್ರವರಿ 2024 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ್ದ ಅಧಿಸೂಚನೆಯಲ್ಲಿ ಗೆಜೆಟೆಡ್ ಪ್ರೋಬೆಷನರಿಯ ಎ ಮತ್ತು ಬಿ ಗ್ರೂಪ್‌ಗಳಲ್ಲಿ ಒಟ್ಟು 384 ಹುದ್ದೆಗಳು ಖಾಲಿಯಾಗಿದ್ದು ಅದಕ್ಕೆ ನೇಮಕಾತಿ ಮಾಡಬೇಕಾಗಿತ್ತು. ಆಗ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡಿದ ಪರಿಣಾಮ, ಕೆಪಿಎಸ್‌ಸಿ ಪರೀಕ್ಷೆಯಲ್ಲಿನ ಫಲಿತಾಂಶದ ಮೇಲೆ ನೇರ ಹೊಡೆತ ಬಿತ್ತು ಎಂಬ ಆರೋಪಗಳು ಕೇಳಿ ಬಂದಿದೆ.ಅಷ್ಟಕ್ಕೂ ಇಲ್ಲಿ ನಡೆದಿರುವುದೇನು?
ಏಂS ಫಲಿತಾಂಶ ವಿಳಂಬ: ಯಾರಿಗೂ ಗೋಚರಿಸದ ಅಭ್ಯರ್ಥಿಗಳ ಆಕ್ರಂದನಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ನಿರಂತರ ವಿಳಂಬವಾಗುತ್ತಿದ್ದು ಉದ್ಯೋಗಾಕಾಂಕ್ಷಿಗಳಲ್ಲಿ ತೀವ್ರ ಆತಂಕ ಹಾಗೂ ಅಸಹಾಯಕತೆ ಮೂಡಿಸಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.ಪ್ರಶ್ನೆ 1: ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆ ಮತ್ತು ವಿಳಂಬವೇನು?
ಉತ್ತರ: ಫೆಬ್ರವರಿ 26, 2024 ರಂದು ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಕಟವಾಗಿ 900ಕ್ಕೂ ಅಧಿಕ ದಿನಗಳು ಕಳೆದಿದ್ದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪರೀಕ್ಷೆಯ ಅಂತಿಮ ಹಂತವಾದ ಸಂದರ್ಶನವು ಜೂನ್ 12ರಂದೇ ಮುಕ್ತಾಯಗೊಂಡಿದ್ದು 90 ದಿನಗಳು ಕಳೆದರೂ ಅಂತಿಮ ಫಲಿತಾಂಶ ಹೊರಬಂದಿಲ್ಲ.
ಪ್ರಶ್ನೆ 2: ಫಲಿತಾಂಶ ಪ್ರಕಟಣೆಗೆ ಇರುವ ನಿಯಮಗಳು ಮತ್ತು ಆಯೋಗದ ನಡೆಯೇನು? ಉತ್ತರ: ಹೋಟಾ ಸಮಿತಿ ಶಿಫಾರಸು: ಸಂದರ್ಶನ ಪೂರ್ಣಗೊಂಡ 2 ರಿಂದ 7 ದಿನಗಳ ಒಳಗೆ ಫಲಿತಾಂಶ ಪ್ರಕಟಿಸಬೇಕು. ಅಧಿಸೂಚನೆ ನಿಯಮ: ಸಂದರ್ಶನ ಮುಗಿದ 2 ವಾರಗಳಲ್ಲಿ (14 ದಿನಗಳು) ಫಲಿತಾಂಶ ಪ್ರಕಟಿಸಬೇಕು.ಆಯೋಗದ ಹೇಳಿಕೆ: ಜನವರಿ 10ರಂದು ಪತ್ರಿಕಾ ಪ್ರಕಟಣೆ ನೀಡಿ ಎರಡು ದಿನಗಳಲ್ಲಿ ಫಲಿತಾಂಶ ನೀಡುವುದಾಗಿ ತಿಳಿಸಲಾಗಿತ್ತು. ಆದರೂ 3 ತಿಂಗಳು ಕಳೆದರೂ ಫಲಿತಾಂಶ ಹೊರಬಾರ ದಿರುವುದು ಪಾರದರ್ಶಕತೆಯ ಕುರಿತು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ.
ಪ್ರಶ್ನೆ 3: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸ್ಪಂದನೆ ಹೇಗಿದೆ? ಉತ್ತರ: ಅಭ್ಯರ್ಥಿಗಳು ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಅಧಿಕೃತ ಹಾಗೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇದು ಆಕಾಂಕ್ಷಿಗಳ ಆತಂಕವನ್ನು ಇಮ್ಮಡಿಗೊಳಿಸಿದೆ.
ಪ್ರಶ್ನೆ 4: ಮೀಸಲಾತಿ ಗೊಂದಲವೇ ಫಲಿತಾಂಶಕ್ಕೆ ಅಡ್ಡಿಯಾಗಿದೆಯೇ? ಉತ್ತರ: ಹೌದು, 2022ರ ಪರಿಶಿಷ್ಟ ಜಾತಿ (15% ರಿಂದ 17%) ಮತ್ತು ಪರಿಶಿಷ್ಟ ಪಂಗಡ (3% ರಿಂದ 7%) ಮೀಸಲಾತಿ ಹೆಚ್ಚಳದಿಂದ ಒಟ್ಟು ಮೀಸಲಾತಿ ಪ್ರಮಾಣ 50% ರಿಂದ 56% ಕ್ಕೆ ಏರಿಕೆಯಾಗಿದ್ದು, ಈ ವಿಚಾರ ಹೈಕೋರ್ಟ್ನಲ್ಲಿದೆ. ಆದರೆ, ಇದೇ 56% ಮೀಸಲಾತಿಯಡಿ ಕಳೆದ ನಾಲ್ಕು ವರ್ಷಗಳಲ್ಲಿ ಗ್ರಾಮೀಣಾಡಳಿತಾಧಿಕಾರಿ, Pಆಔ, ಸಿವಿಲ್ ಜಡ್ಜ್ ಸೇರಿದಂತೆ ಹಲವು ನೇಮಕಾತಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇತರೆ ಹುದ್ದೆಗಳಿಗೆ ಬಾರದ ಅಡ್ಡಿ ಕೇವಲ ಏಂS ಹುದ್ದೆಗಳಿಗೆ ಮಾತ್ರ ಎದುರಾಗುತ್ತಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆಪ್ರಶ್ನೆ 5: ಅಭ್ಯರ್ಥಿಗಳ ಮುಂದಿನ ನಿರೀಕ್ಷೆ ಏನು? ಉತ್ತರ: ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಈ ಪ್ರಕರಣದಲ್ಲಿ ಅಡ್ವಕೇಟ್ ಜನರಲ್ ಹಾಗೂ ಸಂಬAಧಪಟ್ಟ ಸಚಿವರು ವಿಶೇಷ ಗಮನಹರಿಸಿ, ಫಲಿತಾಂಶ ಪ್ರಕಟಣೆಗೆ ಅನುಮತಿ ದೊರಕಿಸಿಕೊಡಬೇಕು. ಸರ್ಕಾರವು ತ್ವರಿತವಾಗಿ ಮಧ್ಯಪ್ರವೇಶಿಸಿ ಯುವಜನರ ನಿರುದ್ಯೋಗ ಮತ್ತು ಆತಂಕವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ.ಇನ್ನು, ಪರಿಶಿಷ್ಟ ಜಾತಿ ಹಾಗೂ ಪಂಗಡದಲ್ಲಿನ ಮೀಸಲಾತಿಯನ್ನು ಶೇ.15% ರಿಂದ ಶೇ.17%ಕ್ಕೂ ಹಾಗೂ ಶೇ. 3% ರಿಂದ ಶೇ.7% ಕ್ಕೂ ಕ್ರಮವಾಗಿ ಏರಿಕೆ ಮಾಡಿದ್ದರ ಪರಿಣಾಮ ಫಲಿತಾಂಶ ವಿಳಂಬವಾಗಿದ್ದು ಈಗ ಪರೀಕ್ಷೆ ಬರೆದಿರುವ 900 ಅಭ್ಯರ್ಥಿಗಳ ಭವಿಷ್ಯ ಅತಂಕವಾಗಿದೆ.ಇನ್ನು ಈ ರೀತಿ ಫಲಿತಾಂಶ ವಿಳಂಬಕ್ಕೆ ಕಾರಣ ಹುಡುಕಿದ್ರೆ, ಕೆಪಿಎಸ್‌ಸಿ ಮಾಡಿರುವ ಎಡವಟ್ಟುಗಳೇ ಕಣ್ಣಿಗೆ ಬೀಳುವುದು. ಅಭ್ಯರ್ಥಿಗಳ ಸಂದರ್ಶನ ಮುಗಿದ 2 ರಿಂದ 7 ದಿನಗಳಲ್ಲಿ ಫಲಿತಾಂಶ ಹೊರಬರಬೇಕಾಗಿದ್ದು, ಈವರೆಗೂ ಫಲಿತಾಂಶ ಹೊರಗೆ ಬಂದಿಲ್ಲ. ಇದಕ್ಕೆ ಕಾರಣ ಕೇಳಿದ್ರೆ ಒಂದಲ್ಲ ಒಂದು ಸಮಸ್ಯೆಗಳನ್ನು ಉಲ್ಲೇಖಿಸಿ ಆಯೋಗ ನುಣುಚಿಕೊಳ್ಳುತ್ತಿದೆ. ಈಗ ಮಾತನ್ನಾಡುತ್ತಿರುವುದು ಗೆಜೆಟೆಡ್ ಪ್ರೋಬೆಷನರಿ ಎ ಮತ್ತು ಬಿ ಹುದ್ದೆಯ ಬಗ್ಗೆಯಾದ್ರೆ, ಸದ್ಯ ದೊಡ್ಡ ಪ್ರಮಾಣದಲ್ಲಿ ಕೆಪಿಎಸ್‌ಸಿಯಲ್ಲಿ ಸದ್ದು ಮಾಡುತ್ತಿರುವ ಪಶುವೈದ್ಯರ ನೇಮಕಾತಿ ಹಗರಣದ ಬಗ್ಗೆ.ಸದಾಕಾಲ ಒಂದಲ್ಲೊAದು ಹಗರಣದಲ್ಲಿ ಸಿಲುಕುವ ಕೆಪಿಎಸ್‌ಸಿ ಈಗ ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿದೆ. 900 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಿಲ್ಲದೇ, ಸೂತ್ರವಿಲ್ಲದ ಗಾಳಿಪಟದಂತಾಗಿದ್ದು, ಇದಕ್ಕೆ ಕೆಪಿಎಸ್‌ಸಿ ಉತ್ತರ ಕೋಡಬೇಕಿದೆ. ಇನ್ನು ಸದ್ಯ ಇದೇ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಹಂತ ಹಂತವಾಗಿ ನಡೆಯುತ್ತಿದೆ. ಸದ್ಯ ಮುಂದಿನ ಮಂಗಳವಾರ ಈ ಪ್ರಕರಣ ಕೋರ್ಟ್ನಲ್ಲಿ ಮತ್ತೆ ಬರಲಿದ್ದು, ಮುಂದೆ ಯಾವ ದಿಕ್ಕಿನತ್ತ ಇದು ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.