LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಕಿಂಗ್ ಸ್ಟಾರ್ ಅಬ್ಬರ ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್


ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 140 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡಿದೆ.ಭಾರತದಲ್ಲಿ ಈ ಚಿತ್ರ 120.75 ಕೋಟಿ ರೂ., ವಿದೇಶಗಳಲ್ಲಿ 20 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಬಹುತೇಕ ಫ್ಯಾನ್ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.ಈ ವರ್ಷ ರಿಲೀಸ್ ಆದ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ `ಟಾಕ್ಸಿಕ್’ ಪಾತ್ರವಾಗಿದೆ. ಈ ಸಾಲಿನಲ್ಲಿ ಮೊದಲ ದಿನ 146 ಕೋಟಿ ರೂ. ಗಳಿಸಿದ್ದ `ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, `ಟಾಕ್ಸಿಕ್’ ಎರಡನೇ ಸ್ಥಾನ ಪಡೆದುಕೊಂಡಿದೆ.ಬೆಂಗಳೂರು ನಗರವೊಂದರಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಸಿನಿಮಾಗೆ ಹೌಸ್‌ಫುಲ್ ಓಪನಿಂಗ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್ಗಳಲ್ಲೂ ಶೇ.55ಕ್ಕೂ ಹೆಚ್ಚು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ `ಕೆಜಿಎಫ್ 2’ ಮೂಲಕ ಈ ರೀತಿಯ ಬಿಗ್ ಓಪನಿಂಗ್ ದಾಖಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿರುವ ಯಶ್, ತಮ್ಮದೇ ದಾಖಲೆಯನ್ನು ಮುಂದುವರಿಸಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST