ಡಾ.ಜಿ.ವೈ. ಪದ್ಮನಾಗರಾಜು
ಬೆಂಗಳೂರು: ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು ರಾಜ್ಯದ ಕೋಟ್ಯಂತರ ಜನರ ಸಮಸ್ಯೆಗಳನ್ನು ಚರ್ಚಿಸಿ, ಸರ್ಕಾರವನ್ನು ಪ್ರಶ್ನಿಸಿ, ಕಾನೂನು ರೂಪಿಸಿ ಮತ್ತು ಆಡಳಿತವನ್ನು ಪ್ರಜಾ ಸೇವೆಗಾಗಿ ಮುಡಿಪಿಡುವ ಪ್ರಮುಖ ಪ್ರಜಾಪ್ರಭುತ್ವದ ವೇದಿಕೆಗಳು. ಆದರೆ ಕಳೆದ ಒಂದು ವಾರದಿಂದ ಅಧಿವೇಶನದಲ್ಲಿ ಗದ್ದಲ, ಘೋಷಣೆ, ಪ್ರತಿಭಟನೆ ಮತ್ತು ನಿರಂತರ ಮುಂದೂಡಿಕೆಗಳಿಂದ ಕಲಾಪಕ್ಕೆ ಅಡ್ಡಿಯಾಗಿರುವ ಘಟನೆಗಳು ಮತ್ತೊಮ್ಮೆ ``ಜನರಿಗಾಗಿ ಮೀಸಲಾದ ಸದನದ ಸಮಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಮತ್ತು ಅದರಲ್ಲಿ ಸಮರ್ಪಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಎಷ್ಟು ಸಾರ್ಥಕತೆಯನ್ನು ಕಂಡಿದೆ. ಎಂಬ ಪ್ರಶ್ನೆ ಶ್ರೀಸಾಮಾನ್ಯರನ್ನು ಕಾಡತೊಡಗಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ ಎರಡೂ ಸದನಗಳ ಕಾರ್ಯಕಲಾಪಗಳು ಅಸ್ತವ್ಯಸ್ತಗೊಳ್ಳುತ್ತ ಸಮಯ ಹಣ ಮತ್ತು ಪ್ರಜಾಪ್ರಭುತ್ವದ ಗಂಭೀರತೆಯನ್ನು ಹಾಳುಮಾಡುತ್ತಿದೆ.ಜನರ ಸಮಸ್ಯೆಗಳಿಗಿಂತ ರಾಜಕೀಯ ಗದ್ದಲವೇ ಮುಖ್ಯವಾಗಿ ಸದನದಲ್ಲಿ ಕೂಗಾಟ ಕಿರುಚಾಟ ಏರು ಧ್ವನಿಯಲ್ಲಿ ಆಡಳಿತ ಪಕ್ಷವನ್ನು ಟೀಕಿಸುತ್ತ. ಸಿನಿಮಾ ಶೈಲಿಯ ಸ್ವರಚಿತ ಕಾವ್ಯಗಳಿಂದ ಹಾಡುಗಳಿಂದ ಸದನದ ಕಲಾಪಕ್ಕೆ ಇನ್ನಿಲ್ಲದಂತೆ ತೊಂದರೆ ಆಗುತ್ತಿದೆ. ವಿರೋಧ ಪಕ್ಷಗಳ ಕೆಲಸವನ್ನು ಸಾರ್ಥಕವಾಗಿ ಮಾಡುತ್ತಿವೆ ಎಂದು ಭಾವಿಸುವುದೇ ಆದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯವನ್ನು ಪ್ರತಿಷ್ಠೆಗಾಗಿ ಮೀಸಲಿಡುವುದು ರಾಜ್ಯದ ಜನತೆಗೆ ಮಾಡುತ್ತಿರುವ ಬಹುದೊಡ್ಡ ಅನ್ಯಾಯವೇ ಸರಿ.
ವಿರೋಧ ಪಕ್ಷಕ್ಕೆ ಸರ್ಕಾರವನ್ನು ಪ್ರಶ್ನಿಸುವುದು, ಆರೋಪಗಳನ್ನು ಎತ್ತುವುದು ಮತ್ತು ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಪ್ರತಿಭಟನೆಯ ಉದ್ದೇಶವೇ ಸದನವನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸದಂತೆ ಮಾಡುವುದು ಆಗಬಾರದು. ಗದ್ದಲದ ನಡುವೆಯೂ ಪ್ರಶ್ನೋತ್ತರ, ಬರಗಾಲದ ಚರ್ಚೆ ಹಾಗೂ ಕೆಲವು ಮಸೂದೆಗಳ ಅಂಗೀಕಾರ ಮುಂದುವರಿದು ಅದು ಕಡತಗಳನ್ನು ಸೇರಿದೆ. ವಿಧಾನಮಂಡಲದ ಪ್ರಶ್ನೋತ್ತರ ಅವಧಿ ಕೇವಲ ಶಾಸಕರ ಪ್ರಶ್ನೆಗಳ ಕಾರ್ಯಕ್ರಮವಲ್ಲ ಅದು ಜನರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವ ಮತ್ತು ಆ ಮೂಲಕ ಉತ್ತರವನ್ನು ಪಡೆಯುವ ಪ್ರಮುಖ ವ್ಯವಸ್ಥೆ. ಕುಡಿಯುವ ನೀರು, ರಸ್ತೆ, ರೈತರ ಸಮಸ್ಯೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಸರ್ಕಾರಿ ಯೋಜನೆಗಳು ಮತ್ತು ಜಿಲ್ಲೆಗಳ ಅಭಿವೃದ್ಧಿ ಕುರಿತು ಶಾಸಕರು ಪ್ರಶ್ನೆ ಕೇಳುತ್ತಾರೆ. ಗದ್ದಲದಿಂದ ಪ್ರಶ್ನೋತ್ತರ ಅವಧಿ ಅಸ್ತವ್ಯಸ್ತವಾದಾಗ, ಆ ಪ್ರಶ್ನೆಯ ಹಿಂದೆ ನಿಂತಿರುವ ಜನರ ಸಮಸ್ಯೆಯೇ ಚರ್ಚೆಯಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಈ ವಿಚಾರವನ್ನು ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿದ್ದರೂ ಅರ್ಥೈಸಿಕೊಳ್ಳುವುದು ಬಹಳ ಮುಖ್ಯವಾಗಿದೆ.ಕಾನೂನು ರೂಪಿಸುವುದು ಎಂದರೆ ಕೇವಲ ಮಸೂದೆ ಅಂಗೀಕರಿಸುವುದಲ್ಲ ಅದರ ಪರಿಣಾಮಗಳನ್ನು ಪರಿಶೀಲಿಸುವುದು, ಸದಸ್ಯರ ಅಭಿಪ್ರಾಯಗಳನ್ನು ಆಲಿಸುವುದು ಮತ್ತು ಅಗತ್ಯ ತಿದ್ದುಪಡಿಗಳನ್ನು ಚರ್ಚಿಸುವುದೂ ಅಷ್ಟೇ ಮುಖ್ಯ. ಆದ್ದರಿಂದ ಗದ್ದಲದ ನಡುವೆ ಮಸೂದೆಗಳು ಅಂಗೀಕಾರವಾಗುವ ಪರಿಸ್ಥಿತಿ ಉಂಟಾದರೆ, ``ಮಸೂದೆ ಪಾಸಾಯಿತು'' ಎಂಬುದಕ್ಕಿಂತ ``ಅದನ್ನು ಸಮರ್ಪಕವಾಗಿ ಚರ್ಚಿಸಲಾಯಿತೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಸರ್ಕಾರಿ ಕೆಲಸಗಳು ಸಮರ್ಪಕವಾಗಿ ನಡೆಯಬೇಕು ಎಂದರೆ ಸದನದಲ್ಲಿ ಅಂಗೀಕಾರವಾಗುವುದು ಬಹಳ ಮುಖ್ಯವಾಗಿದೆ. ಕೆಲವೊಮ್ಮೆ ರಾಜಕೀಯ ಪಕ್ಷಗಳ ಮತ್ತು ಅಧಿಕಾರಿಗಳ ವಿವೇಚನೆಯ ಮೇರೆಗೆ ಒಂದಷ್ಟು ಕೆಲಸಗಳು ಆಗುತ್ತವೆ.ವಿಧಾನಮಂಡಲದ ಅಧಿವೇಶನ ನಡೆಸಲು ಕಟ್ಟಡ, ಭದ್ರತೆ, ಸಿಬ್ಬಂದಿ, ತಾಂತ್ರಿಕ ವ್ಯವಸ್ಥೆ, ವಿದ್ಯುತ್, ಪ್ರಸಾರ, ಆಡಳಿತಾತ್ಮಕ ವ್ಯವಸ್ಥೆ ಸೇರಿದಂತೆ ಹಲವು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಲಾಗುತ್ತದೆ. ಆದ್ದರಿಂದ ಕಲಾಪ ನಡೆಯದೆ ಹೋದಾಗ ಪ್ರತಿ ದಿನಕ್ಕೆ ಒಂದಷ್ಟುಕೋಟಿ ರೂಪಾಯಿ ನಷ್ಟ ಆಗುತ್ತದೆ. ಅದು ಜನರ ತೆರಿಗೆಯ ಹಣ ಎಂಬುದು ನೆನಪಿರಲಿ.ಸದನದಲ್ಲಿ ಕೇಳಲಿರುವ ಪ್ರಶ್ನೆಗಳಿಗೆ ಉತ್ತರಿಸಲು ಇಲಾಖೆಗಳು ಮುಂಚಿತವಾಗಿ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಸಚಿವರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ. ಕಲಾಪ ಮುಂದೂಡಲ್ಪಟ್ಟರೆ ಅಥವಾ ನಿಗದಿತ ಚರ್ಚೆ ನಡೆಯದಿದ್ದರೆ, ಸಿದ್ಧತೆಯು ಶಾಸನಾತ್ಮಕ ಪ್ರಾಮುಖ್ಯತೆ ಪಡೆಯುವುದಿಲ್ಲ. ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡುವುದು ಸಂಸದೀಯ ಪ್ರಕ್ರಿಯೆಯಲ್ಲಿರುವ ಒಂದು ವಿಧಾನ. ಅದನ್ನು ಪ್ರತಿಯೊಂದು ಸಂದರ್ಭದಲ್ಲೂ ತಪುö್ಪ ಎಂದು ಕರೆಯಲಾಗುವುದಿಲ್ಲ. ಆದರೆ ರಾಜಕೀಯ ಸಂಘರ್ಷದಿAದ ಅಧಿವೇಶನದ ಪರಿಣಾಮಕಾರಿ ಕಾರ್ಯದಿನಗಳು ಕಡಿಮೆಯಾಗುವ ಪರಿಸ್ಥಿತಿ ಪ್ರಜಾಪ್ರಭುತ್ವದ ದೃಷ್ಟಿಯಿಂದ ಆತಂಕಕಾರಿ. ಏಕೆಂದರೆ ಸದನದ ಸಮಯವನ್ನು ಬಳಸಿಕೊಂಡು ಜನರ ಸಮಸ್ಯೆಗಳನ್ನು ಚರ್ಚಿಸುವ ಅವಕಾಶವೇ ಕಡಿಮೆಯಾಗುತ್ತದೆ. ಜನರು ಯಾವುದನ್ನು ಪ್ರಶ್ನಿಸುವುದಿಲ್ಲ ಎಂದು ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಮುಂದಿಟ್ಟುಕೊAಡು ನಡೆದುಕೊಳ್ಳಬಾರದು. ಒಂದಲ್ಲ ಒಂದು ದಿನ ಬೀದಿಯಲ್ಲಿ ನಿಂತು ಜನ ಇದನ್ನು ಪ್ರಶ್ನಿಸುವ ದಿನ ಬರಬಹುದು. ಅದರ ಪ್ರಜ್ಞೆ ರಾಜಕೀಯ ಪಕ್ಷಗಳಿಗೆ ಇರಬೇಕಾಗುತ್ತದೆ.ವಿರೋಧ ಪಕ್ಷವು ಗಂಭೀರ ಆರೋಪಗಳನ್ನು ಎತ್ತಿದರೆ ಸರ್ಕಾರ ಉತ್ತರಿಸಬೇಕು. ಸರ್ಕಾರದ ವಿರುದ್ಧದ ಆರೋಪಗಳು ಸತ್ಯವೇ, ಸುಳ್ಳೇ ಎಂಬುದರ ನಿಖರವಾದ ಸತ್ಯಾಸತ್ಯತೆ ಗ್ರಹಿಸಿ ಪ್ರತಿಭಟಿಸಬೇಕು. ಸರ್ಕಾರವೂ ಸಹ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸದೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಬಾರದು.ವಿರೋಧ ಪಕ್ಷವೂ ಜನರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ನೀಡುವುದು ಉತ್ತಮ ರಾಜಕೀಯ ತಂತ್ರಗಾರಿಕೆ ಎಂಬುದು ನಮ್ಮ ಆಶಯ.ವಿಧಾನಸಭೆ ಮತ್ತು ವಿಧಾನ ಪರಿಷತ್ತು ಯಾವುದೇ ಒಂದು ಪಕ್ಷದ ಸ್ವತ್ತುಗಳಲ್ಲ; ಅವು ಕರ್ನಾಟಕದ ಜನರ ಸ್ವತ್ತುಗಳು. ಅಧಿಕಾರ ಪಕ್ಷಕ್ಕೆ ಆಡಳಿತದ ಜವಾಬ್ದಾರಿ ಇರುವಂತೆ, ವಿರೋಧ ಪಕ್ಷಕ್ಕೆ ಸರ್ಕಾರವನ್ನು ಪ್ರಶ್ನಿಸುವ ಜವಾಬ್ದಾರಿಯೂ ಇದ್ದೇ ಇರುತ್ತದೆ ಅದು ಸಂವಿಧಾನ ನೀಡಿರುವ ಸರ್ವ ಸ್ವಾತಂತ್ರ÷್ಯ. ಆದರೆ ಎರಡೂ ಪಕ್ಷಗಳ ರಾಜಕೀಯ ಹೋರಾಟದ ಮಧ್ಯೆ ಜನರ ಸಮಸ್ಯೆಗಳು, ಸಮಸ್ಯೆಗಳಾಗಿ ಉಳಿಯಬಾರದು. ಕಾನೂನಿನ ಚೌಕಟ್ಟಿನಲ್ಲಿ ಸರ್ವರಿಗೂ ಸಮಪಾಲು ಸಿಗಬೇಕು.ಸದನದಲ್ಲಿ ಗದ್ದಲಕ್ಕಿಂತ ಚರ್ಚೆ, ಘೋಷಣೆಗಿಂತ ಉತ್ತರ, ಆರೋಪಕ್ಕಿಂತ ದಾಖಲೆ, ರಾಜಕೀಯ ಹಠಕ್ಕಿಂತ ಜನಹಿತ, ಇವೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ.``ಸದನ ನಡೆಯುವುದು ಪಕ್ಷಕ್ಕಾಗಿ ಅಲ್ಲ ಜನರಿಗಾಗಿ.'' ಈ ಅರಿವು ಬರಬೇಕಾಗಿದೆ ಎಲ್ಲ ರಾಜಕೀಯ ಪಕ್ಷಗಳಿಗೆ. ಇದರಲ್ಲಿ ಸಂವಿಧಾನಿಕವಾದ ಕಳಕಳಿ ಇದೆ ಮತ್ತು ಅದೇ ಸಂವಿಧಾನಿಕವಾದ ಬಹುದೊಡ್ಡ ಪ್ರಜಾಪ್ರಭುತ್ವದ ಆಶಯವಿದೆ. ಪಕ್ಷಗಳು ಪ್ರತಿಷ್ಠೆಯನ್ನು ಬದಿಗೊತ್ತಿ ಕೇವಲ ಪ್ರಜೆಗಳಿಗಾಗಿ ಕಾಯ, ವಾಚ, ಮನಸ ರಾಜಕೀಯ ಮಾಡಿದರೆ. ಅದು ಪ್ರಜಾಪ್ರಭುತ್ವದ ನಿಜವಾದ ಸಾರ್ಥಕತೆ.