LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಹೊರಟ್ಟಿ ಯುಟರ್ನ್

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ



ಬೆಂಗಳೂರು: ವಿಧಾನಸಭೆ ಸಭಾಪತಿ ಸ್ಥಾನದ ಸಂಬAಧ ತಾವು ರಾಜೀನಾಮೆ ನೀಡಬೇಕೋ ಬೇಡವೋ ಎಂಬ ಗೊಂದಲದಲ್ಲಿರುವ ಹೊರಟ್ಟಿ ಅವರು ಇಂದು ಪುನಃ ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಮೊನ್ನೆ ನೀಡಿದ ಹೇಳಿಕೆಗೆ ಬದ್ಧನಿರುವುದಾಗಿ ಘೋಷಿಸಿದ್ದಾರೆ. 
ಇಂದು ಪುನಃ ಮುಖ್ಯಮಂತ್ರಿ ಡಿ.ಕೆಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದ ಹೊರಟ್ಟಿ ಅವರು ಕೆಲ ಕಾಲ ಸಿಎಂ ಅವರೊಂದಿಗೆ ಮಾತನಾಡಿ ಅವರ ಮನೆಯಿಂದ ಹೊರ ಬಂದು ತೀವ್ರ ಅಸಮಾಧಾನದಿಂದಲೇ ಹೊರ ಹೋಗಿದ್ದಾರೆ. ಒಂದು ಹಂತದಲ್ಲಿ ಮುಖ್ಯಮಂತ್ರಿಯವರು ಅವರ ನಿವಾಸದ ಗೇಟ್‌ವರೆಗೂ ಸಭಾಪತಿ ವರೆಗೆ ಬೀಳ್ಕೊಡಲು ಬಂದರು ಅವರನ್ನು ಹಿಂತಿರುಗಿ ನೋಡದೆ ಸರಸರನೇ ಹೇ ತನ್ನ ಕಾರು ಎಲ್ಲಿದೆ ಎಂದು ತಮ್ಮ ಸಿಬ್ಬಂದಿಯನ್ನು ಏರುಧ್ವನಿಯಲ್ಲಿ ಕೇಳಿ ನಡೆದಿದ್ದಾರೆ. ಅವರ ಕಾರ್ ಬಳಿಬಂದ ಸುದ್ದಿಗಾರರು ಮಾತನಾಡಿಸಿದಾಗ ಅವರು ಏನು ಬೇಕಾದರೂ ಮಾಡಿಕೊಳ್ಳಲು ಅವಿಶ್ವಾಸ ನಿರ್ಣಯವನ್ನು ಮಂಡಿಸಲಿ, ಕಾನೂನು ಪ್ರಕಾರ ಏನಾದರೂ ಮಾಡಲಿ, ನಾನು ಮೊನ್ನೆ ನೀಡಿದ ಹೇಳಿಕೆಗೆ ಬದ್ಧನಿದ್ದೇನೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಶಿವಕುಮಾರ್ ಅವರೊಂದಿಗೆ ಮಾತನಾಡಿದಾಗ ಹೊರಟ್ಟಿಯವರು ರಾಜೀನಾಮೆ ನೀಡಲು ಸಮಯಾವಕಾಶ ಕೋರಿದರಂತೆ ಅವರ ಕೋರಿಕೆಗೆ ಮುಖ್ಯಮಂತ್ರಿಯವರು ಒಪ್ಪದಿದ್ದಾಗ ಅಸಮಾಧಾನಗೊಂಡರು ಎಂದು ಮೂಲಗಳು ತಿಳಿಸಿವೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಕೆಲ ಸಚಿವರ ಶಾಸಕರ ಎದರಿನಲ್ಲಿ ಈ ತಿಂಗಳ 14ರಂದು ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದ ಅವರು ಇಂದು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇಂದು ಕಾಂಗ್ರೆಸ್‌ನವರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸ್ಪೀಕರ್ ಅವರು ಪಕ್ಷಪಾತ ದೋರಣೆ ಅನುಸರಿಸುತ್ತಿದ್ದಾರೆ. ಬಿಜೆಪಿ ನಾಯಕರ ಮಾತುಗಳಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಜತೆಜತೆಗೆ ವಿಧಾನಪರಿಷತ್ ಸಿಬ್ಬಂದಿ ನೇಮಕಾತಿಯಲ್ಲಿ ಲೋಪವೆಸಗಿದ್ದಾರೆ. 8 ಮಂದಿಯನ್ನು ಅಕ್ರಮವಾಗಿ ನೇಮಕ ಮಾಡಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಿ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ನೋಟಿಸ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರ ಬಳಿ ಅಕ್ರಮ ನೇಮಕಾತಿ ಸಂಬAಧ ದಾಖಲಾತಿ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಸಭಾಪತಿ ಅವರು ರಾಜೀನಾಮೆ ವಿಷಯವೀಗ ರಾಜಕೀಯ ವಲಯದಲ್ಲಿ ಗೊಂದಲದ ಗೂಡಾಗಿ ನಾನಾ ಚರ್ಚೆಗೆ ಕಾರಣವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST