LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಮಹಾನ್' ಚಿತ್ರದ ಪ್ರಮುಖಪಾತ್ರದಲ್ಲಿ  ರಾಧಿಕಾ ನಾರಾಯಣ್ ಹಾಗೂ ಮಿತ್ರ

 ಫಸ್ಟ್ ಲುಕ್ ಅನಾವರಣ ಮಾಡಿದ ಚಿತ್ರತಂಡ


          
ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ “ರಂಗಿತರAಗ” ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ಖ್ಯಾತ ನಟ ಮಿತ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ “ಮಹಾನ್” ಚಿತ್ರತಂಡ ರಾಧಿಕಾ ನಾರಾಯಣ್ ಹಾಗೂ ಮಿತ್ರ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.  
“ಮಹಾನ್” ಚಿತ್ರದಲ್ಲಿ ನನ್ನದು ನರ್ಸ್ ಪಾತ್ರ. ಪಕ್ಕಾ ಗ್ರಾಮೀಣ ಹೆಣ್ಣು ಮಗಳ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇನೆ. ನಾನು ನಗರ ಪ್ರದೇಶದಲ್ಲಿ ಬೆಳೆದವಳು. ಹಳ್ಳಿ ಹುಡುಗಿ ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ. ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಪಾತ್ರವೂ ಹೌದು. ಇನ್ನೂ, ಪಿ.ಸಿ.ಶೇಖರ್ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಈ ಹಿಂದೆಯೇ ಅವರ ನಿರ್ದೇಶನದ ಚಿತ್ರದಲ್ಲಿ ನಾನು ನಟಿಸಬೇಕಿತ್ತು. ಈಗ ಕಾಲ ಕೂಡಿ ಬಂದಿದೆ. ನಿರ್ಮಾಪಕ ಪ್ರಕಾಶ್ ಬೂದೂರು ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ವಿಶೇಷಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ವಿಜಯ ರಾಘವೇಂದ್ರ, ವರ್ಷ ಬೊಳ್ಳಮ್ಮ, ಮಿತ್ರ ಮುಂತಾದ ಕಲಾವಿದರ ಜೊತೆಗೆ ನಟಿಸಿರುವುದು ಹಾಗೂ ಚಿತ್ರೀಕರಣದ ಅನುಭವ ತುಂಬಾ ಸಂತೋಷ ತಂದಿದೆ. ನನ್ನ ಅಭಿಮಾನಿಗಳು ಅಭಿಮಾನ ಪಡುವ ಚಿತ್ರ “ಮಹಾನ್” ಆಗಲಿದೆ ಎಂದು ನಟಿ ರಾಧಿಕಾ ನಾರಾಯಣ್ ತಿಳಿಸಿದ್ದಾರೆ. 
ನಾನು “ರಾಗ” ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಅವರೊಟ್ಟಿಗೆ ಈ ಚಿತ್ರ ಮಾಡುತ್ತಿದ್ದೇನೆ. “ರಾಗ” ಚಿತ್ರದ ನನ್ನ ಪಾತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ “ಮಹಾನ್” ಚಿತ್ರದಲ್ಲೂ ಅಂತಹುದೇ ಒಂದು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ನಾಯಕ ವಿಜಯ ರಾಘವೇಂದ್ರ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸದಾ ನಾಯಕನ ಜೊತೆಗೆ ಸಾಗುವ ಪಾತ್ರವಿದು. ನಾಯಕನದು ಸೌಮ್ಯ ಸ್ವಭಾವವಾದರೆ, ನನ್ನದು ಸ್ವಲ್ಪ ಮುಂಗೋಪಿಯ ಪಾತ್ರ. ಇದೊಂದು ರೈತರ ಕುರಿತಾದ ಚಿತ್ರ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಪ್ರಕಾಶ್ ಬೂದೂರು ಅವರು ಬಹಳ ಮುತುವರ್ಜಿಯಿಂದ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ಸಹ ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಂತಹ ಅದ್ಭುತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು ನನಗೆ ಬಹಳ ಖುಷಿಯಾಗಿದೆ. ನನ್ನಷ್ಟೆ ನನ್ನ ಪಾತ್ರವನ್ನು ಪ್ರೇಕ್ಷಕರು ಸಹ ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ನಟ ಮಿತ್ರ ತಿಳಿಸಿದ್ದಾರೆ.
ಈ ಹಿಂದೆ ಅವರು ಮಾಡಿರದ ಪಾತ್ರದಲ್ಲಿ ಅವರು “ಮಹಾನ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಅವರದು ಈ ಚಿತ್ರದಲ್ಲಿ ಸಾಮಾಜಿಕ ಕಾಳಜಿ ಇರುವ ರೈತನ ಪಾತ್ರ. ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳಿರುತ್ತದೆ. ಅವರ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಅವರನ್ನು ಹುರಿದುಂಬಿಸುವ ಪಾತ್ರದಲ್ಲಿ ಮಹಿಳೆ ಇದ್ದರೆ ಉತ್ತಮ ಎಂಬುದು ನನ್ನ ಅನಿಸಿಕೆ ಆಗಿತ್ತು. ಈ ಪಾತ್ರದಲ್ಲಿ ರಾಧಿಕಾ ಅವರು ನಟಿಸಿದ್ದಾರೆ. ನರ್ಸ್ ಆಗಿಯೂ, ಸಾಮಾಜಿಕ ಕಾಳಜಿ ಇರುವ ಹೆಣ್ಣಾಗಿ ರಾಧಿಕಾ ನಾರಾಯಣ್ ಅವರು ಅಭಿನಯಿಸಿದ್ದು, ವಿಜಯ ರಾಘವೇಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನನ್ನ ಹಾಗೂ ಮಿತ್ರ ಅವರ ಕಾಂಬಿನೇಶನ್ ನಲ್ಲಿ ಬಂದ “ರಾಗ” ಚಿತ್ರ ಇಂದು ಕೂಡ ಜನಪ್ರಿಯ. ಈಗ “ಮಹಾನ್” ಚಿತ್ರದಲ್ಲಿ ನ್ಯಾಯದ ಪರ ಹೋರಾಡುವ ನಾಯಕ ವಿಜಯ ರಾಘವೇಂದ್ರ ಅವರಿಗೆ ಸದಾ ಬೆಂಗಾವಲಾಗಿ ಇರುವ, ನಾಯಕನ ಆಗುಹೋಗುಗಳಿಗೆ ಸ್ಪಂದಿಸುವ ಪಾತ್ರ ಮಿತ್ರ ಅವರದು. ಇಬ್ಬರ ನಡುವೆ ವಯಸ್ಸಿನ ಅಂತರ ಬಹಳ ಇದ್ದರೂ, ಈ ಸ್ನೇಹಿತರಂತೆ ಬಲವಾದ ನಂಟು ಇರುತ್ತದೆ. ಬಹಳ ಪ್ರಾಮುಖ್ಯತೆಯಿರುವ ಪಾತ್ರ. ಮಿತ್ರ ಅವರ ಪಾತ್ರ ಮತ್ತು ಅವರ ಅಭಿನಯ ಎಲ್ಲರ ಮನ ಮುಟ್ಟುತ್ತದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. 
“ಮಹಾನ್” ನಮ್ಮ ಆಕಾಶ ಪಿಕ್ಚರ್ಸ್  ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡುವ ಹಂಬಲ ನಮ್ಮ ಸಂಸ್ಥೆಯದು. ಅದರ ಮೊದಲ ಪ್ರಯತ್ನವಾಗಿ ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ “ಮಹಾನ್” ಚಿತ್ರ ನಿರ್ಮಾಣವಾಗುತ್ತಿದೆ.  “ರಂಗಿತರAಗ” ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಹಾಗೂ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಮಿತ್ರ ಅವರಂತಹ ಅನುಭವಿ ನಟರು  ಅಭಿನಯಿಸಿರುವುದು ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ಮಾಪಕ ಪ್ರಕಾಶ್ ಬೂದೂರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST