LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬರ ಪರಿಶೀಲನೆ


ಹನೂರು: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದರು. 
ಕ್ಷೇತ್ರ ವ್ಯಾಪ್ತಿಯ ಹುತ್ತೂರು, ಪಿ.ಜಿ ಪಾಳ್ಯ, ಜೋರೆದೊಡ್ಡಿ, ಹುಯಿಲನತ್ತ, ಅಜ್ಜೀಪುರ, ದೊಮ್ಮನಗದ್ದೆ,ದಾಸನದೊಡ್ಡಿ, ಎಲ್ಲೇಮಾಳ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅವಾಹಲುಗಳನ್ನು ಸ್ವೀಕರಿಸಿದರು.
ಇದೇ ವೇಳೆ ಗ್ರಾಮಸ್ಥರು ನಮಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿಗಳ ಸ್ವಚ್ಚತೆ, ಬೀದಿ ದೀಪಗಳನ್ನು ದುರಸ್ತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಿ.ಜಿ ಪಾಳ್ಯ ಗ್ರಾಮದ ರೈತ ಮುಖಂಡ ಮಹದೇವಪ್ರಭು ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸಗೊಬ್ಬರದ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿದ್ದ ಬೆಳೆಗಳು ನಾಶವಾದರೆ ನಮಗೆ ಸಮರ್ಪಕವಾಗಿ ಪರಿಹಾರ ನೀಡುವುದಿಲ್ಲ ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲ ಅಗತ್ಯ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು, ಅಲ್ಲದೇ ತೋಟಗಾರಿಕೆ ಇಲಾಖೆಯಿಂದ ನಮಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ, ಯಾವುದೇ ಮಾಹಿತಿ ಸಹ ಇಲ್ಲ ಆಗಾಗಿ ತಾಲ್ಲೂಕಿಗೆ ಪ್ರತ್ಯೇಕ ತೋಟಗಾರಿಕೆ ಇಲಾಖೆ ತೆರೆಯುವಂತೆ ಮನವಿ ಸಲ್ಲಿಸಿದರು.
ಬೆಳೆ ನಷ್ಟ ಪರಿಹಾರ ಕೊಡಿಸುವಂತೆ ಮನವಿ : ಸಚಿವ ಪುಟ್ಟರಂಗಶೆಟ್ಟಿ ಅವರು ಬರ ಪರಸ್ಥಿತಿ ಅಧ್ಯಯನ ಸಂಬAಧ ಹತ್ತೂರು ಗ್ರಾಮಕ್ಕೆ ಭೇಟಿ ನೀಡಿದಾಗ ರೈತ ಜಡೇಸ್ವಾಮಿ ಎಂಬುವರು ಮಾತನಾಡಿ 4.5 ಎಕರೆ ಜಮೀನಿನಲ್ಲಿ ಅರಿಶಿನ, ಆಲೂಗಡ್ಡೆ, ಬೆಳ್ಳುಳ್ಳಿ ಬೆಳೆಯನ್ನು ಹಾಕಿದ್ದ ಮಳೆ ಇಲ್ಲದೇ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಪರಿಹಾರ ಕೊಡಿಸುವಂತೆ ಮನವಿ ಮಾಡಿದರು. ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳನ್ನು ಪಶ್ನಿಸಿದ ಸಚಿವರು ರೈತರ ಬೆಳೆಗಳಿಗೆ ವಿಮೆ ಮಾಡಿಸಿಲ್ಲವೇ ಯಾಕೆ? ಅವರಿಗೆ ಸೂಕ್ತ ಮಾಹಿತಿ ನೀಡಬೇಕಲ್ಲವೇ ಎನ್ನುತ್ತಾ ಅಗತ್ಯ ಕ್ರಮವಹಿಸುವುದಾಗಿ ರೈತನಿಗೆ ಭರವಸೆ ನೀಡಿದರು..
ಸಶ್ಮಾನಕ್ಕೆ ಜಾಗ ನೀಡುವಂತೆ ಮನವಿ : ಪಿ.ಜಿ.ಪಾಳ್ಯ ಗ್ರಾಮಸ್ಥರು ಸ್ಮಶಾನಕ್ಕೆ ಜಾಗ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಕ್ತ ಕ್ರಮವಹಿಸಿ ಒಂದು ಎಕರೆ ಜಾಗವನ್ನು ಮಂಜೂರು ಮಾಡಿಕೊಡುವಂತೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರ ತೆರಯಲು ಮನವಿ : ಜೋರೆದೊಡ್ಡಿ ಗ್ರಾಮದ ಜನರು 20 ಕುಟುಂಬಗಳು ವಾಸವಿದ್ದು ಇಲ್ಲಿಂದ ಪಕ್ಕದ ಗ್ರಾಮಕ್ಕೆ ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದ್ದು ನಮ್ಮ ಗ್ರಾಮದಲ್ಲೇ ಅಂಗನವಾಡಿ ಕೇಂದ್ರವನ್ನು ತೆರೆದು ಅನುಕೂಲ ಕಲ್ಪಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು ಈ ಸಂಬAಧ ಪ್ರತಿಕ್ರಿಯಿಸಿದ ಅವರು ಪರಿಶೀಲಿಸಿ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮುದಾಯ ಭವನಕ್ಕೆ ಮನವಿ: ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮಕ್ಕೆ ಸಚಿವರು ಭೇಟಿ ನೀಡದ ವೇಳೆ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹಾಗೂ ಗ್ರಾಮದಲ್ಲಿ ಇರುವ ಸಮುದಾಯ ಭವನಕ್ಕೆ ದುರಸ್ಥಿಯಲ್ಲಿದ್ದು ಅದನ್ನು ಕೆಡದು ವಿಶಾಲವಾದ ಸಮುದಾಯ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಶಾಸಕರು ಈ ಬಗ್ಗೆ ಕ್ರಮವಹಿಸಲಿದ್ದಾರೆ ಎಂದು ಭರವಸೆ ನೀಡಿದರು. ಈವೇಳೆ ಶಾಸಕ ಎಂ.ಆರ್ ಮಂಜುನಾಥ್, ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪ, ಸಿಇಒ ಮೋನಾರೋತ್, ಡಿವೈಎಸ್ಪಿ ಮೋಹನ್,ತಹಶಿಲ್ದಾರರ್ ಚೈತ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST