LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸಮಾಜ ಸುಧಾರಣೆ ಮುಂಚೂಣಿ ಶರಣರು ಹಡಪದ ಅಪ್ಪಣ್ಣ’

`
ತಿ.ನರಸೀಪುರ: 12ನೇ ಶತಮಾನದ ಪ್ರಮುಖ ವಚನಗಾರರಾದ ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಹಾಯಕರಾಗಿ ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ ಮಹನೀಯರು ಎಂದು ಮುಖ್ಯ ಭಾಷಣಕಾರ ಹಾಗೂ ಬಿ.ಆರ್.ಸಿ. ನಾಗೇಶ್ ಹೇಳಿದರು.
ಸವಿತಾ ಸಮಾಜದ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಸವಿತಾ ಸಮಾಜ ಸಂಘದ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಿದ್ದ ಶರಣ ಹಡಪದ ಅಪ್ಪಣ್ಣನವರ 896ನೇ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರ ನಾಗೇಶ್ ಮಾತನಾಡಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದ ಹಡಪದ ಅಪ್ಪಣ್ಣನವರ ತಂದೆ ಚನ್ನವೀರಪ್ಪ, ತಾಯಿ ದೇವಿಕ್ಕಮ್ಮ. ಅವರ ಪತ್ನಿ ಶರಣಿ ಲಿಂಗಮ್ಮ ಕೂಡ ಪ್ರಸಿದ್ಧ ವಚನಗಾರ್ತಿಯಾಗಿದ್ದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣನವರು ಜಾತಿ-ಲಿಂಗ ತಾರತಮ್ಯ ಹಾಗೂ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸಿದರು. ಬಸವಣ್ಣನವರೊಂದಿಗೆ ಸೇರಿ ಸಮಾನತೆಯ ಸಂದೇಶವನ್ನು ಸಾರಿದ ಅವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಹೇಳಿದರು.
ಈ ವೇಳೆ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಸಮಾಜ ಸೇವಕ ಡಾ.ಮಾದೇಶ್, ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ಚೆಸ್ಕ್ ಎ ಇಇ ವೀರೇಶ್,ಬಿಆರ್‌ಸಿ ನಾಗೇಶ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರ  ಇಒ ಡಾ.ರಂಗಸ್ವಾಮಿ, ಪೊಲೀಸ್ ಇನ್ಸೆ÷್ಪಕ್ಟರ್ ಧನಂಜಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಭಿಲಾಶ್, ಚೆಸ್ಕಾಂ ಸಹಾಯಕ  ಅಭಿಯಂತರ ವೀರೇಶ್ಕöÈ,ಷಿ  ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ, ಉಪ ತಹಸೀಲ್ದಾರ್ ರಾಜಕಾಂತ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ತಾಲೂಕು  ಅಧ್ಯಕ್ಷ ಸಿದ್ದೇಶ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಅವಿನಾಶ್, ಗೌರವಾಧ್ಯಕ್ಷ ಸೋಮಣ್ಣ, ಟೌನ್ ಅಧ್ಯಕ್ಷ ರುದ್ರೇಶ್, ನಾಗೇಂದ್ರ, ಕೃಷ್ಣ,  ರಾಜೇಶ್, ಗಿರೀಶ್, ಮಾದು, ಮಣಿಕಂಠ, ದೇವರಾಜು, ಯಜಮಾನರು ಸ್ವಾಮಿ, ಗೌರವಾಧ್ಯಕ್ಷ ಮೂರ್ತಿ, ಅಪ್ಪಣ್ಣ, ವಾಚ್ ಕುಮಾರ್, ಕೆಂಪಯ್ಯನ ಹುಂಡಿ ನಂಜುAಡ, ರಘು, ಶಂಕರ, ಸೋಸಲೆ ನಂಜುAಡಯ್ಯ, ಶಿವಕುಮಾರ್( ಬಡ್ಡು ) ವಾಚ್ ಕುಮಾರ , ಅಪ್ಪಣ್ಣ, ನಾಗೇಂದ್ರ, ಹಾಗೂ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಕ್ಕಳ ಹಕ್ಕುಗಳ ರಕ್ಷಣೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ: ಜಿ.ಪ್ರಭಾವತಿಚಿಕ್ಕಬಳ್ಳಾಪುರ ಜಿಲ್ಲೆಯ ಬರ ನಿರ್ವಹಣೆಗೆ ಕ್ರಮ-ಸಚಿವ ಸುರೇಶ್ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್.ಮುನಿಯಪ್ಪಜಾಗತಿಕವಾಗಿ  ಹರಡುತ್ತಿರುವ ಮಾರಕ ಸಾಂಕ್ರಾಮಿಕ-  ಕೆಲಸದ ಸಂಸ್ಕೃತಿಯಿಂದ ಉಂಟಾಗುತ್ತಿರುವ ಮಾನಸಿಕ ಒತ್ತಡಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ, ಬಾಗೇಪಲ್ಲಿ ಬಂದ್‌ಗೆ ಜನರ ಅಭೂತಪೂರ್ವ ಬೆಂಬಲಟೀಮ್ ಇಂಡಿಯಾದ ಇಬ್ಬರು ಕೋಚ್‌ಗಳ ನಿರ್ಗಮನ! ವಿಶ್ವಕಪ್‌ಗೂ ಮುನ್ನ ಗೌತಮ್ ಸ್ಥಿತಿ 'ಗಂಭೀರ?ರೋಹಿತ್, ಕೊಹ್ಲಿ ಇಲ್ಲದೆ ಪಾಕಿಸ್ತಾನ ಜೊತೆ ಭಾರತ ಬಿಗ್ ಫೈಟ್! ಹೈವೋಲ್ಟೇಜ್ ಪಂದ್ಯ ಯಾವಾಗ, ಎಲ್ಲಿ ಗೊತ್ತಾ?ನೆಟ್ಟಾರು ಹತ್ಯೆ ಪ್ರಕರಣ ಮತ್ತೋರ್ವ ಆರೋಪಿ ಸೆರೆಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್ ಅರ್ಜಿದಾರಿಯಾವುದಯ್ಯ ಮುಂದೆ!?