LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

100ನೇ ಯಶಸ್ವಿ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ


ಮಹದೇವಪುರ: ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಮೆಡಿಕವರ್ ಆಸ್ಪತ್ರೆ, 100 ನೇ ರೋಬೋಟಿಕ್ ನೆರವಿನ ಮೊಣಕಾಲು ಬದಲಿ  ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.ವೈಟ್ ಫೀಲ್ಡ್ ನ ಮೆಡಿಕವರ್ ಆಸ್ಪತ್ರೆಯಲ್ಲಿ ರೋಬೋಟಿಕ್ ನೆರವಿನ ಮೊಣಕಾಲು ಬದಲಿ ಶಸ್ತçಚಿಕಿತ್ಸೆಯಲ್ಲಿ ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ, ನಿಖರವಾದ ಶಸ್ತçಚಿಕಿತ್ಸಾ ಯೋಜನೆ ಹಾಗೂ ರೋಬೋಟಿಕ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದರಿಂದ ಕೃತಕ ಮೊಣಕಾಲಿನ ಅಳವಡಿಕೆ ಹೆಚ್ಚು ನಿಖರವಾಗಿದ್ದು, ಕೀಲುಗಳ ಸಮತೋಲನ ಸುಧಾರಿಸುವುದರ ಜೊತೆಗೆ ನೋವು ಕಡಿಮೆಯಾಗುತ್ತದೆ, ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಹಾಗೂ ದೀರ್ಘಾವಧಿಯ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ತೀವ್ರ ಮೊಣಕಾಲು ಸಂಧಿವಾತದಿAದ ಬಳಲುತ್ತಿದ್ದ ಅನೇಕ ರೋಗಿಗಳು ಈ ತಂತ್ರಜ್ಞಾನದ ಮೂಲಕ ಮತ್ತೆ ನೋವಿಲ್ಲದ, ಚಟುವಟಿಕೆಯಿಂದ ಕೂಡಿದ ಜೀವನಕ್ಕೆ ಮರಳಿದ್ದಾರೆ.ಈ ಸಾಧನೆ ಕುರಿತು ಮಾತನಾಡಿದ ಡಾ. ಆರ್.ಡಿ. ಚಕ್ರವರ್ತಿ, 100 ರೋಬೋಟಿಕ್ ಮೊಣಕಾಲು ಬದಲಿ ಶಸ್ತçಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣವಾಗಿದೆ. ರೋಬೋಟಿಕ್ ತಂತ್ರಜ್ಞಾನದಿAದ ಪ್ರತಿಯೊಬ್ಬ ರೋಗಿಗೆ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಅತ್ಯಂತ ನಿಖರವಾದ ಶಸ್ತçಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳು ಬೇಗ ಚೇತರಿಸಿಕೊಳ್ಳುವುದರ ಜೊತೆಗೆ ದೀರ್ಘಾವಧಿಯಲ್ಲಿ ಉತ್ತಮ ಕಾರ್ಯಕ್ಷಮತೆಯ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಈ ಅತ್ಯಾಧುನಿಕ ಚಿಕಿತ್ಸೆಯನ್ನು ಇನ್ನಷ್ಟು ಜನರಿಗೆ ತಲುಪಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದರು.ಡಾ. ಕೃಷ್ಣ ಕುಮಾರ್ ಎಂ.ಎಸ್. ಮಾತನಾಡಿ, ಈ ಮೈಲಿಗಲ್ಲು ನಮ್ಮ ತಂಡದ ಸಮನ್ವಯದ ಕಾರ್ಯಕ್ಕೆ ಸಾಕ್ಷಿಯಾಗಿದೆ. ರೋಬೋಟಿಕ್ ತಂತ್ರಜ್ಞಾನದಿಂದ ಸುರಕ್ಷಿತ, ನಿಖರ ಹಾಗೂ ಉತ್ತಮ ಗುಣಮಟ್ಟದ ಶಸ್ತçಚಿಕಿತ್ಸೆಗಳನ್ನು ನಿರಂತರವಾಗಿ ನೀಡಲು ಸಾಧ್ಯವಾಗುತ್ತಿದೆ. ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಹಾಗೂ ಅನುಭವಿ ಬಹುಶಿಸ್ತಿನ ವೈದ್ಯಕೀಯ ತಂಡದೊಂದಿಗೆ ಮೆಡಿಕವರ್ ಆಸ್ಪತ್ರೆ ಸುರಕ್ಷಿತ, ನಿಖರ ಮತ್ತು ರೋಗಿಕೇಂದ್ರಿತ ಮೊಣಕಾಲು ಬದಲಿ ಶಸ್ತçಚಿಕಿತ್ಸೆಗಳನ್ನು ನೀಡುವ ಮೂಲಕ 
ಆರ್ಥೋಪೆಡಿಕ್ಸ್ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ  ಮೆಡಿಕವರ್ ಆಸ್ಪತ್ರೆಗಳ ಪ್ರಾದೇಶಿಕ ನಿರ್ದೇಶಕರಾದ  ಸಿದ್ದರೆಡ್ಡಿ ,  ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ವಿಭಾಗದ ನಿರ್ದೇಶಕರಾದ ಡಾ. ಆರ್.ಡಿ. ಚಕ್ರವರ್ತಿ,  ಡಾ. ಸಂಜಯ್ ಪ್ರಸಾದ್ ಹೆಗ್ಡೆ, ಡಾ. ಕೃಷ್ಣ ಕುಮಾರ್ ಎಂ.ಎಸ್., ಡಾ. ರವೀಂದ್ರ ಪುಟ್ಟಸ್ವಾಮಯ್ಯ, ಡಾ. ರಾಘವೇಂದ್ರ ರೆಡ್ಡಿ ರಾಚಮಲ್ಲು, ಅರಿವಳಿಕೆ ತಜ್ಞರು, ನರ್ಸಿಂಗ್ ಸಿಬ್ಬಂದಿ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST