LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ದಾರಿಯಾವುದಯ್ಯ ಮುಂದೆ!?

ಸಚಿವ ವಂಚಿತ ಶಾಸಕರ ಪರಸ್ಪರ ಚರ್ಚೆ



ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗಿ ಮೂರು ದಿನ ಕಳೆದರೂ ಅಸಮಾಧಾನಿತ ಶಾಸಕರ ಮುನಿಸು ಶಮನವಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಸಚಿವರ ಬೆಂಬಲಿಗರ ಪ್ರತಿಭಟನೆ ಮುಂದುವರಿದಿದ್ದರೆ ಮುಂದೇನು ಮಾಡಬೇಕು ಎಂಬ ಚಿಂತನೆಯಲ್ಲಿ ಇದೇ ಶಾಸಕರಿದ್ದಾರೆ. 
ಇಂದು ಬೆಳಿಗ್ಗೆ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್ ಹಾಗ ದಿನೇಶ್‌ಗುಂಡೂರಾವ್ ಅವರು ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. 
ತಮ್ಮಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿ ಎಂದಿಗೂ ಎದುರಾಗಿರಲಿಲ್ಲ. ಈತರಹದ ಬೆಳವಣಿಗೆಯು ನಡೆದಿರಲಿಲ್ಲ. ಯಾವ ಮಾನದಂಡದ ಮೇಲೆ ಸಂಪುಟ ರಚನೆ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊAಡಿದ್ದಾರೆ. 
ನಿನ್ನೆ ದಿನೇಶ್‌ಗುಂಡೂರಾವ್ ಅವರು ಎಚ್.ಕೆ. ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾಗ ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹಾಜರಿದ್ದ ಕಾರಣ ಪರಸ್ಪರರು ಏನು ಮಾತನಾಡಲು ಆಗಲಿಲ್ಲ. ಹಾಗಾಗಿ ಇಂದು ಬೆಳಿಗ್ಗೆ ಎಚ್.ಕೆ.ಪಾಟೀಲ್ ಅವರು ಚಹಾ ಕುಡಿದು ಹೋಗಿ ಬನ್ನಿ ಎಂದು ಕರೆದಿದ್ದರು. ಹಾಗಾಗಿ ಇಂದು ಬೆಳಿಗ್ಗೆ ನಾನು ಪಾಟೀಲ್‌ರೊಂದಿಗೆ ಮಾತನಾಡಲು ಬಂದಿದ್ದೆ ಎಂದು ತಿಳಿಸಿದರು.
ಸಂಪುಟ ಪುನರ್ ರಚನೆಯಾಗಿದೆ. ಈ ಸಂದರ್ಭದಲ್ಲಿ ಹೊಸ ಸಚಿವರು ಒಳ್ಳೆಯ ಕೆಲಸ ಮಾಡಲಿ ಎಂದು ತಿಳಿಸಿದ ಅವರು ನಡೆದಿರುವ ಘಟನಾವಳಿಗಳ ಬಗ್ಗೆ ನಾನು ಪಾಟೀಲರು ಪರಸ್ಪರ ಚರ್ಚೆ ಮಾಡಿದ್ದೇವೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ 
ತಾವು ನೀಡಿದ್ದ ರಾಜೀನಾಮೆ ವಾಪಸ್ ಪಡೆದಿದ್ದರ ಬಗ್ಗೆ ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯಶವಂತರಾಯಗೌಡ ದೆಹಲಿಯಲ್ಲಿ ಸಂಪುಟ ಪುನರ್ ರಚನೆ ಬಗ್ಗೆ ಮಾತುಕತೆ ನಡೆಸುವುದರ ಸಂದರ್ಭದಲ್ಲಿ ಏನು ಬೆಳವಣಿಗೆ ನಡೆಯಿತು ಎಂಬುದರ ಬಗ್ಗೆ ಪಕ್ಷದ ವರಿಷ್ಠರಾದ ರಣದೀಪ್ ಸುರ್ಜೇವಾಲಾ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ವಿವರವಾಗಿ ತಿಳಿಸಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಕ್ಷೇತ್ರದ ಜನತೆ ಮಾಡಿಕೊಂಡ ಮನವಿ ಮೇರೆಗೆ ಜನ ಬೆಂಬಲಕ್ಕಿಂತ ಮತ್ಯಾವುದು ದೊಡ್ಡದಲ್ಲ ಎಂದು ತಿಳಿದು ರಾಜೀನಾಮೆ ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ. ಜನರ ಭಾವನೆಗಳಿಗಿಂತ ನಾನೇನು ಮುಖ್ಯನಲ್ಲ. ಜನರೇ ನನ್ನ ಹೈಕಮಾಂಡ್ ಹಾಗಾಗಿ ನಾನು ಅವರ ಮಾತಿಗೆ ಮನ್ನಣೆ ನೀಡಿದ್ದೇನೆ. ನಮ್ಮದು ಕಾಂಗ್ರೆಸ್ ಕಟ್ಟಿ ಬೆಳೆಸಿದ ಕುಟುಂಬ ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ. ರಾಜೀನಾಮೆ ಅಂಗೀಕಾರವಾಗಿದ್ದರೂ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುತ್ತಿದ್ದೇ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರಾದ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ವಿಜನಯ್ ಕುಲಕರ್ಣಿ ಅವರು ಸಹ ನನ್ನೊಂದಿಗೆ ಮಾತುಕತೆ ನಡೆಸಿದ್ದರೂ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರೊಂದಿಗೆ ಮಾತನಾಡಿ, ಪಾಟೀಲರಿಗೆ ಅವರ ಜಿಲ್ಲೆಯಲ್ಲೇ ಸಚಿವರಾಗಲು ವಿರೋಧವಿದೆ ಎಂದು ಹೇಳಿದರು. ಅವರು ನೆಪಕ್ಕಾಗಿ ಈ ಮಾತು ಆಡಿದ್ದಾರೋ ಇಲ್ಲ ಸತ್ಯ ಹೇಳಿದ್ದರೋ ತಿಳಿಯುತ್ತಿಲ್ಲ ಎಂದು ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆಮತ್ತೋರ್ವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ವಿಧಾನಸಭೆಯ ವಿಪಕ್ಷ ಸಾಲಿನಲ್ಲಿ ಆಸನ ನೀಡುವಂತೆ ವಿಧಾನಸಭಾ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದು, ಅವರ ಅಸಮಾಧಾನವೂ ಮುಂದುವರಿದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಕ್ಕಳ ಹಕ್ಕುಗಳ ರಕ್ಷಣೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ: ಜಿ.ಪ್ರಭಾವತಿಚಿಕ್ಕಬಳ್ಳಾಪುರ ಜಿಲ್ಲೆಯ ಬರ ನಿರ್ವಹಣೆಗೆ ಕ್ರಮ-ಸಚಿವ ಸುರೇಶ್ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್.ಮುನಿಯಪ್ಪಜಾಗತಿಕವಾಗಿ  ಹರಡುತ್ತಿರುವ ಮಾರಕ ಸಾಂಕ್ರಾಮಿಕ-  ಕೆಲಸದ ಸಂಸ್ಕೃತಿಯಿಂದ ಉಂಟಾಗುತ್ತಿರುವ ಮಾನಸಿಕ ಒತ್ತಡಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ, ಬಾಗೇಪಲ್ಲಿ ಬಂದ್‌ಗೆ ಜನರ ಅಭೂತಪೂರ್ವ ಬೆಂಬಲಟೀಮ್ ಇಂಡಿಯಾದ ಇಬ್ಬರು ಕೋಚ್‌ಗಳ ನಿರ್ಗಮನ! ವಿಶ್ವಕಪ್‌ಗೂ ಮುನ್ನ ಗೌತಮ್ ಸ್ಥಿತಿ 'ಗಂಭೀರ?ರೋಹಿತ್, ಕೊಹ್ಲಿ ಇಲ್ಲದೆ ಪಾಕಿಸ್ತಾನ ಜೊತೆ ಭಾರತ ಬಿಗ್ ಫೈಟ್! ಹೈವೋಲ್ಟೇಜ್ ಪಂದ್ಯ ಯಾವಾಗ, ಎಲ್ಲಿ ಗೊತ್ತಾ?ನೆಟ್ಟಾರು ಹತ್ಯೆ ಪ್ರಕರಣ ಮತ್ತೋರ್ವ ಆರೋಪಿ ಸೆರೆಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್ ಅರ್ಜಿದಾರಿಯಾವುದಯ್ಯ ಮುಂದೆ!?