ಬೆಂಗಳೂರು: ಸೋಮವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರ ಪ್ರತಿಭಟನೆ ಮುಂದುವರಿದಿದೆ.
ಅಸಮಾಧಾನಗೊಂಡವರನ್ನು ಖುದ್ದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾಗಿರುವವರು ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತಕ್ಷೇತ್ರದ ಮೂರು ತಾಲೂಕುಗಳನ್ನು ಬಂದ್ ಮಾಡಲಾಗಿದೆ. ಬಾಗೇಪಲ್ಲಿ ಸೇರಿದಂತೆ ಚೇಳೂರು, ಗುಡಿಬಂಡೆ ಬಂದ್‌ಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಬೆಂಬಲಿಗರು ಕರೆ ನೀಡಿದ್ದಾರೆ. ಇಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಹೇಳಲಾಗಿದೆ. ಬೆಳಿಗ್ಗೆ ತೆರೆಯಲಾಗಿದ್ದ ಅಂಗಡಿ ಹಾಗೂ ಟೀ ಶಾಪ್‌ಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದ್ದಾರೆ. ಮೂರು ಭಾರಿ ಗೆದ್ದ ಶಾಸಕ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಈಗಾಗಲೇ ಸೋಮವಾರವೇ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಯಶವಂತರಾಯಗೌಡ ಅವರು, ಲಕ್ಷö್ಮಣ ಸವದಿ ಖುದ್ದಾಗಿ ಬಂದು ಮನವೊಲಿಸಲು ಮುಂದಾದರೂ ಅದಕ್ಕೆ ಅವರು ಮಣಿದಿಲ್ಲ. ನಾಳೆ ವಿಜಯಪುರದ ಪ್ರವಾಸಿಮಂದಿರದಲ್ಲಿ 1ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಇದುವರೆಗೂ ನಡೆದ ಬೆಳವಣಿಗೆಗಳ ಬಗ್ಗೆ ವಿವರಿಸುವುದಾಗಿ ತಿಳಿಸಿದ್ದಾರೆ. ಬಾಗಲಕೊಟೆ ಜಿಲ್ಲೆಯ ಮುದೋಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಬೆಂಬಲಿಗರು ಸಹ ಲೋಕಾಪುರ ಪಟ್ಟಣದಲ್ಲಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ನಿನ್ನೆ ನಡೆದ ಸಮಾರಂಭವೊAದರಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರು ಮಾಜಿ ಸಚಿವ ಗುಂಡೂರಾವ್ ಅವರೊಂದಿಗೆ ಖುದ್ದಾಗಿ ಮಾತನಾಡಿದ್ದಾರೆ.