LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ವಿಶ್ವನಾಥ್ ಅಂಡ್ ಸನ್ಸ್' ಆಗಸ್ಟ್ 14ಕ್ಕೆ ತೆರೆಗೆ 


ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವಿಶ್ವನಾಥ್ ಅಂಡ್ ಸನ್ಸ್  ಚಿತ್ರವನ್ನು ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್, ಫಾರ್ಚೂನ್ ಫೋರ್ ಸಿನಿಮಾಸ್ ಹಾಗೂ ಶ್ರೀಕರ ಸ್ಟುಡಿಯೋಸ್ ಸಂಸ್ಥೆಗಳ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವು ಆಗಸ್ಟ್ 14 ರಂದು ಬಿಡುಗಡೆಯಾಗುತ್ತಿದೆ.ಚಿತ್ರದಲ್ಲಿ ಸೂರ್ಯ, ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್, ರವೀನಾ ಟ0ಡನ್ ಅಭಿನಯಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ನಿಮಿಷ್ ರವಿ ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.ಕುಟುಂಬದ ಭಾವನೆಗಳು, ಸಂಬಂಧಗಳ ಮಹತ್ವ ಮತ್ತು ತಲೆಮಾರುಗಳ ನಡುವಿನ ಬಾಂಧವ್ಯವನ್ನು ಮನಮುಟ್ಟುವ ರೀತಿಯಲ್ಲಿ ಹೇಳುವ ಈ ಚಿತ್ರವು ತನ್ನ ಶೀರ್ಷಿಕೆ, ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.
ಇದೀಗ ವಿಕೆ ಫಿಲ್ಮ್ಸ್ ಬಿಡುಗಡೆಯಾಗುತ್ತಿರುವ `ವಿಶ್ವನಾಥ್ ಅಂಡ್ ಸನ್ಸ್’, ನಿರೀಕ್ಷೆ ಮೂಡಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST