ಬೆಂಗಳೂರು: ಕರ್ನಾಟಕ ತಂಡ ಜೈಪುರದಲ್ಲಿ ನಡೆಯುತ್ತಿರುವ 42ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ (sub ರಿuಟಿioಡಿ sತಿimmiಟಿg ಟಿಚಿಣioಟಿಚಿಟ ಛಿhಚಿmಠಿioಟಿshiಠಿ) 2ನೇ ದಿನ 5 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಸಹಿತ ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ 1 ಚಿನ್ನ, 3 ಬೆಳ್ಳಿ, 6 ಕಂಚಿನ ಸಹಿತ 10 ಪದಕ ಜಯಿಸಿತ್ತು. ರಾಜ್ಯದ ಎಸ್. ಕ್ರಿಷ್ ಬಾಲಕರ 100 ಮೀ. ಬ್ಯಾಕ್‌ಸ್ಟೊçಕ್ ಗ್ರೂಪ್ 2 ಮತ್ತು 50 ಮೀ. ಫ್ರೀಸ್ಟೆöÊಲ್ ಗ್ರೂಪ್ 3 ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬಾಲಕರ 200 ಮೀ. ಮೆಡ್ಲೆ ಗ್ರೂಪ್ 3 (11-12 ವರ್ಷ) ವಿಭಾಗದಲ್ಲಿ ರಾಜ್ಯದ ಡೇನಿಯಲ್ ಇಮ್ಯಾನ್ಯುಯೆಲ್ ಸಾಲ್ದನಾ ಚಿನ್ನ ಜಯಿಸಿದರು. ಬಾಲಕಿಯರ 4/50 ಮೀ. ಫ್ರೀಸ್ಟೆöÊಲ್ ರಿಲೇ ಗ್ರೂಪ್ 3 ವಿಭಾಗ ಮತ್ತು 4/100 ಮೀ. ಫ್ರೀಸ್ಟೆöÊಲ್ ರಿಲೇಯಲ್ಲಿ ರಾಜ್ಯ ತಂಡ ಚಿನ್ನದ ಪದಕ ಒಲಿಸಿಕೊಂಡಿತು. ಬಾಲಕಿಯರ 200 ಮೀ. ಮೆಡ್ಲೆ ಗ್ರೂಪ್ 2ರಲ್ಲಿ (13-14 ವರ್ಷ) ಮಾನ್ಯಾ ಆರ್. ವಧ್ವ, 50 ಮೀ. ಫ್ರೀಸ್ಟೆöÊಲ್ ಗ್ರೂಪ್ 2ರಲ್ಲಿ ಅರುಣಾ ಪವನ್ ಆಳ್ವಾ ಬೆಳ್ಳಿ ಜಯಿಸಿದರು. ಬಾಲಕರ 4/100 ಮೀ. ಫ್ರೀಸ್ಟೆöÊಲ್ ರಿಲೇ ಗ್ರೂಪ್-2ರಲ್ಲಿ ರಾಜ್ಯ ತಂಡಕ್ಕೆ ರಜತ ಒಲಿಯಿತು.ಜಸ್ ಸಿಂಗ್ (200 ಮೀ. ಮೆಡ್ಲೆ), ದಿಶಾ ರಾಜೇಶ್ ಹೊಂಡಿ (50 ಮೀ. ಫ್ರೀಸ್ಟೆöÊಲ್), ಮೊಹಮ್ಮದ್ ಜಿಯಾದ್ (100 ಮೀ. ಬ್ಯಾಕ್‌ಸ್ಟೊçಕ್) ಕಂಚು ಗೆದ್ದರು. ಬಾಲಕರ 4/50 ಮೀ. ಫ್ರೀಸ್ಟೆöÊಲ್ ರಿಲೇ ಸ್ಪರ್ಧೆಯಲ್ಲಿ ರಾಜ್ಯ ತಂಡ ಕಂಚು ಜಯಿಸಿತು.