LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ವಸುದೈವ ಕುಟುಂಬಕಂ'

ಧ್ರುವಸರ್ಜಾ ಹೊಸ ಚಿತ್ರ  ಧ್ರುವ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ.



ಧ್ರುವ ಸರ್ಜಾ  ನಾಯಕನಾಗಿ  ನಟಿಸುತ್ತಿರುವ ನೂತನ ಚಿತ್ರದ ಘೋಷಣೆಯಾಗಿದೆ. ಹರೀಶ್ ಪೆದ್ದಿ  ನಿರ್ಮಿಸುತ್ತಿದ್ದು , ಬಿ.ಎಸ್ ಸುಧೀಂದ್ರ ಸಹ ನಿರ್ಮಾಪಕರಾಗಿದ್ದಾರೆ. ನಂದ ಸುಧೀರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ “ವಸುದೈವ ಕುಟುಂಬಕA” ಎಂದು ಹೆಸರಿಡಲಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ನಂದಕಿಶೋರ್ ಅವರು ನಂದ ಸುಧೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.“ವಸುದೈವ ಕುಟುಂಬಕಂ” ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಲವ್, ಆಕ್ಷನ್, ಸೆಂಟಿಮೆAಟ್ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುತ್ತದೆ. ಧ್ರುವ ಸರ್ಜಾ ಅವರ ಅಭಿನಯದ ಚಿತ್ರದ ಹಾಡುಗಳು ಜನಪ್ರಿಯವಾಗಿದೆ. ಈ ಚಿತ್ರದಲ್ಲೂ ಸಹ ಸುಮಧುರ ಗೀತೆಗಳಿರುತ್ತದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ “ವಸುದೈವ ಕುಟುಂಬಕಂ” ಚಿತ್ರದಲ್ಲಿ ಹೆಸರಾಂತ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಬಳಗವಿರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST