LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ವಾಲ್ಮೀಕಿ ನಿಗಮದ ಹಗರಣ ಕೇಳಿದ ಪ್ರಶ್ನೆಗೆ ಉತ್ತರ ಬಂದಿಲ್ಲ: ಸಿಎಂಗೆ ಅಶೋಕ್ ಪ್ರಶ್ನೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ @siddaramaiah ಅವರಿಗೆ ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ಬಂದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ನಿಗಮದ ಎಲ್ಲ ಅಧಿಕಾರಿಗಳನ್ನು ಕರೆದು, "ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಎಲ್ಲಿಯೂ ಹೇಳಬೇಡಿ. ನಾನು ಅಧಿಕಾರದಲ್ಲಿ ಇದ್ದರೆ ಮಾತ್ರ ನಿಮ್ಮನ್ನೆಲ್ಲ ಬಚಾವ್ ಮಾಡಲು ಸಾಧ್ಯ" ಎಂದು ಎಚ್ಚರಿಕೆ ನೀಡಿದ್ದು ಸತ್ಯವಲ್ಲವೇ ಸಿದ್ದರಾಮಯ್ಯನವರೇ?.

ಎಚ್.ಡಿ.ರೇವಣ್ಣ ಅವರ ಕುಟುಂಬ ಸದಸ್ಯರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಆತುರದಲ್ಲಿ ಎಸ್ ಐಟಿ ರಚನೆ ಮಾಡಿ, ನೋಟೋಸ್ ನೀಡಿ, ವಿಚಾರಣೆ ಮಾಡಿ, ನ್ಯಾಯಾಂಗ ಬಂಧನಕ್ಕೂ ಕಳಿಸುತ್ತೀರಿ. ಆದರೆ ಅದೇ ಆಸಕ್ತಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಇದು ಯಾವ ಸೀಮೆ ನ್ಯಾಯ ಸಿದ್ದರಾಮಯ್ಯನವರೇ?

ಎಸ್ ಐಟಿ ನಿಮ್ಮ ಕೈಗೊಂಬೆ ಎನ್ನುವುದಕ್ಕೆ ಪರಶುರಾಮ್ ಮತ್ತು ಪದ್ಮನಾಭ್ ಅವರ ನಡುವೆ ನಡೆದಿರುವ ಫೋನ್ ಸಂಭಾಷಣೆಯೇ ಸಾಕ್ಷಿ. "ಸಿಬಿಐ, ಇಡಿ ಆದರೆ ನಮಗೆ ಜೈಲೇ ಗತಿ, ಎಸ್ ಐಟಿ ಆದರೆ ನೋಡಿಕೊಳ್ಳಬಹುದು" ಎಂದು ಪದ್ಮನಾಭ್ ಹೇಳಿರುವುದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ಎಸ್ ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ?

ಎಸ್ ಐಟಿ ರಚನೆಯಾಗಿದ್ದು 31.05.2024 ರಂದು. ಆದರೆ ಎಸ್ ಐಟಿ ರಚನೆಯಾಗಿ 40 ದಿನ ಕಳೆದರೂ ಮಾಜಿ ಸಚಿವ ನಾಗೇಂದ್ರ ಅವರನ್ನಾಗಲಿ, ಶಾಸಕ ಬಸವರಾಜ ದದ್ದಲ್ ಅವರನ್ನಾಗಲಿ ವಿಚಾರಣೆ ಮಾಡಲಿಲ್ಲ. ವಿಚಾರಣೆ ಹೋಗಲಿ ಒಂದು ನೋಟಿಸ್ ಕೂಡಾ ಕೊಡಲಿಲ್ಲ. ಅಂದಮೇಲೆ ನಿಮಗೆ ಸತ್ಯ ಸಂಗತಿ ಹೊರಬರುವುದು ಬೇಕಾಗಿಯೇ ಇರಲಿಲ್ಲ. ಎಸ್ ಐಟಿ ರಚಿಸಿದ್ದೇ ಈ ಹಗರಣ ಮುಚ್ಚಿಹಾಕಲು ಅಲ್ಲವೇ ಸಿದ್ದರಾಮಯ್ಯನವರೇ?

ಇಡಿ ಮಧ್ಯ ಪ್ರವೇಶವಾದ ನಂತರ ಕೇವಲ ನೆಪ ಮಾತ್ರಕ್ಕೆ ವಿಚಾರಣೆಯ ನಾಟಕ ಮಾಡಿದ್ದು ಸುಳ್ಳಾ ಸಿದ್ದರಾಮಯ್ಯನವರೇ? ವಿಚಾರಣೆಗೂ ಮುನ್ನ "ಎಸ್ ಐಟಿ ಮುಂದೆ ನೆಪ ಮಾತ್ರಕ್ಕೆ ಹೋಗಿ ಬಾ, ನಾನು ಅಧಿಕಾರಿಗಳಿಗೆ ಹೇಳಿಕೊಳ್ಳುತ್ತೇನೆ" ಎಂದು ಪ್ರಭಾವಿ ನಾಯಕರೊಬ್ಬರು ನಾಗೇಂದ್ರ ಅವರಿಗೆ ಅಭಯ ಕೊಟ್ಟಿದ್ದು ಸುಳ್ಳೇ ಸಿದ್ದರಾಮಯ್ಯನವರೇ? ಈ ಎಲ್ಲದಕ್ಕೂ ಉತ್ತರ_ಕೊಡಿ_ಸಿದ್ದರಾಮಯ್ಯ ಎಂದು ಅಶೋಕ್ ಆಗ್ರಹ ಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು