LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ಸಚಿವರ ಸಿಟಿ ರೌಂಡ್ಸ್

ರಸ್ತೆಗಳ ಅಸ್ವಚ್ಛತೆ ಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಕೃಷ್ಣಬೈರೇಗೌಡ



ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಬೆಳಿಗ್ಗೆ ಬೆಂಗಳೂರು ನಗರ ಸಂಚಾರ ಮಾಡಿದ್ದಾರೆ. ನಗರ ಪ್ರದಕ್ಷಿಣೆಯಾಕಿದ ಸಂದರ್ಭದಲ್ಲಿ ರಸ್ತೆಗಳಲ್ಲಿ ಸ್ವಚ್ಛತೆಯಿಲ್ಲದನ್ನು ಕಂಡು ಜಿಬಿಎ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಇಂದು ಪೂರ್ವ ನಗರ ಪಾಲಿಕೆಯ ಹೆಣ್ಣೂರು, ಅಗರ ಕೆರೆ, ಕಸ್ತೂರಿ ನಗರ, ರಾಮಮೂರ್ತಿ ನಗರ ಸೇರಿದಂತೆ ಹಲವು ಕಡೆ ಸಂಚರಿಸಿದ್ದಾರೆ. ತಮ್ಮ ಭೇಟಿ ಸಂದರ್ಭದಲ್ಲಿ ಪ್ರತಿನಿತ್ಯ ರಸ್ತೆ ಸ್ವಚ್ಛತೆಗೆ ಆಗಮಿಸುವ ಪೌರಕಾರ್ಮಿಕರು ಶೇ.30ರಷ್ಟು ಗೈರು ಹಾಜರಾಗಿದ್ದರು ಎನ್ನಲಾಗಿದೆ. ಇದನ್ನುಮನಗಂಡು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಲಭ್ಯವಾಗಿಲ್ಲ. ಏಕೆ ಇಷ್ಟು ಜನ ಗೈರಾಗಿದ್ದಾರೆ. ಅದಕ್ಕೆ ಕಾರಣಗಳೇನು? ಇಷ್ಟೊಂದು ಪ್ರಮಾಣದಲ್ಲಿ ಗೈರಾಗುತ್ತಾರಲ್ಲ. ಆದರೂ ಕೂಡ ನಮ್ಮನ್ನು ಕೆಲಸಕ್ಕೆ ಖಾಯಂ ಮಾಡಿ ಎಂದು ಕೇಳುತ್ತೀರಾ? ಹೇಗೆ ಮಾಡುವುದು ಎಂದು ಹೇಳಿದ್ದಾರೆ. 
ಕಾರ್ಯನಿರ್ವಾಹಕ ಇಂಜಿ ನಿಯರ್ ಅವರ ಕಚೇರಿಯು ತೀವ್ರ ಅಸ್ವಚ್ಛತೆಯನ್ನು ಕಂಡು ಕಿಡಿಕಾರಿದ್ದಾರೆ.  ಒಟ್ಟಾರೆ ತಮ್ಮ ಸಚಿವ ಖಾತೆ ವಹಿಸಿಕೊಂಡಾಗಿನಿಂದ ಸಚಿವರು ನಗರದಲ್ಲಿರುವ ಅಸಮರ್ಪಕ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸುತ್ತ ನಗರ ರಸ್ತೆ ಸಂಚಾರ, ರಸ್ತೆ ಬದಿಯ ವ್ಯಾಪಾರಿಗಳ ಅತಿಕ್ರಮಣ, ಪಾರ್ಕಿಂಗ್ ವ್ಯವಸ್ಥೆ ಕಚೇರಿಯಲ್ಲಿನ ಕಾರ್ಯನಿರ್ವಹಣೆ ಮುಂತಾದ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿದ್ದ ಸಚಿವರು ಇಂದು ನಗರ ಸ್ವಚ್ಛತೆ ಕಡೆಗೆ ಕಣ್ಣು ಹಾಯಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST