ಬೆಂಗಳೂರು: ಅನಾಥವಾಗಿ ಬಿದ್ದಿದ್ದ ಬ್ಯಾಗೊಂದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬೆಂಗಳೂರು ಮಹಾನಗರದಲ್ಲಿ ನಡೆದಿದೆ.ಬೆಂಗಳೂರಿನ ಹೊರವಲಯದ ರಾಮಮೂರ್ತಿನಗರದ ಫ್ಲೈಓವರ್ ಮೇಲೆ ಅನುಮಾನಸ್ಪಾದವಾಗಿ ಬ್ಯಾಗೊಂದುಪತ್ತೆಯಾಗಿದ್ದು, ಜನ ಗಾಬರಿಗೊಂಡಿದ್ದಾರೆ.
Also read
ಇಂದು ಬೆಳ್ಳಂಬೆಳಿಗ್ಗೆ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ಕಂಡು ಜನ ಅದರಲ್ಲಿ ಏನಿರಬಹುದು? ಎಂದು ಅತಂಕಗೊಂಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಗ್ ಪರಿಶೀಲನೆ ಮಾಡಿದ್ದು, ಅದರಲ್ಲಿ ವಾಟರ್ ಬಾಟೆಲ್ ಹಾಗೂ ಕೆಲ ಬಟ್ಟೆಗಳು ಇರುವುದು ಪತ್ತೆಯಾಗಿದೆ.