LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

2 ಕೋಟಿ ರೂ. ವೆಚ್ಚದ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ

ಚನ್ನಪಟ್ಟಣ: ತಾಲ್ಲೂಕಿನ ಪತ್ರಕರ್ತರ ಬಹು ವರ್ಷಗಳ ಕನಸಾದ, ಸುಮಾರು 2 ಕೋಟಿ ರೂ. ವೆಚ್ಚದ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು ಮಾಜಿ ಸಚಿವರು, ಹಾಲಿ ಶಾಸಕರು ಆದ ಸಿ.ಪಿ.ಯೋಗೇಶ್ವರ್ ಅವರು ಕಾರ್ಯನಿತರ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಜಿಲ್ಲೆ ಮತ್ತು ತಾಲ್ಲೂಕಿನ ಪತ್ರಕರ್ತರೊಡಗೂಡಿ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಸೋಮವಾರ ಪಟ್ಟಣದ ಶಿವಾನಂದ ಚಿತ್ರಮಂದಿರದ ಎದುರಿನ ಪತ್ರಕರ್ತರ ನಿವೇಶನದಲ್ಲಿ ನೆರವೇರಿಸಿದರು.
ಶಂಕುಸ್ಥಾಪನೆ ನಂತರ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ್ ಅವರು, ನಗರದ ಹೃದಯ ಭಾಗದಲ್ಲಿ ಪತ್ರಕರ್ತರ ಭವನಕ್ಕೆ ಸ್ವಂತ ನಿವೇಶನ ಹೊಂದಿರುವುದು ಬಹಳ ಸಂತೋಷ. ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಪತ್ರಕರ್ತರಿಗೆ ತಮ್ಮ ಕಾರ್ಯಚಟುವಟಿಕೆಗಳ ಅನುಕೂಲಕ್ಕಾಗಿ ಪತ್ರಿಕಾ ಭವನ ಅವಶ್ಯಕವಾಗಿದೆ. ನಾನೂ ಸಹ ಪತ್ರಕರ್ತರು ಮತ್ತು ಪತ್ರಿಕಾ ಭವನದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಜವಾಬ್ದಾರಿ ಇರುವ ಎಲ್ಲರೂ ಒಗ್ಗಟ್ಟಿನಿಂದ ಮುಕ್ತವಾಗಿ ಸಹಕರಿಸಿದರೆ ಒಂದು ವರ್ಷದೊಳಗೆ ಆಧುನಿಕ ಸುಸಜ್ಜಿತವಾದ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡಲು ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.
ಸರ್ಕಾರದಿಂದ ಇಷ್ಟೊಂದು ಅನುದಾನ ತರಲು ಆಗದು, ಪತ್ರಕರ್ತರ ಭವನ ನಿರ್ಮಾಣಕ್ಕೆ ದಾನಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡುವ ವಿಶ್ವಾಸವಿದೆ. ಪತ್ರಕರ್ತರೆಲ್ಲರೂ ಒಟ್ಟಾಗಿ ನಿಂತು ಅವರ ಸಹಾಯ ಸಹಕಾರವನ್ನು ಪಡೆದು ನನ್ನೊಂದಿಗೆ ಸಹಕರಿಸಿದರೆ ಒಂದು ವರ್ಷದೊಳಗೆ ಪತ್ರಿಕಾ ಭವನವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಪತ್ರಕರ್ತರು, ರಾಜ್ಯ ಜಿಲ್ಲೆಯಲ್ಲೇ ವಿಶೇಷ. ಪತ್ರಿಕಾ ಭವನ ತಾಲ್ಲೂಕಿನ ಪತ್ರಕರ್ತರ ಬಹುದಿನಗಳ ಕನಸು. ಪತ್ರಕರ್ತರೆಲ್ಲರೂ ಒಟ್ಟಾಗಿ ಅವಿರತವಾಗಿ ಹೋರಾಟ ಮಾಡಿ ಪಟ್ಟಣದ ಹೃದಯ ಭಾಗದಲ್ಲಿ ಸ್ವಂತ ನಿವೇಶನವನ್ನು ಹೊಂದಿ ಇಂದು ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರ ಸಹಕಾರದೊಂದಿಗೆ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾ÷್ಯಘನೀಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಪತ್ರಿಕಾ ಭವನ ನಿರ್ಮಾಣವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಇದೇ ಬಸವ ಜಯಂತಿ ದಿನ ಪತ್ರಿಕಾ ಭವನ ಲೋಕಾರ್ಪಣೆ ಗೊಳಿಸಲು ಶ್ರಮಿಸುವಂತೆ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಪ್ರಸಿದ್ಧ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಮಲ್ಲೇಶ್ ಗುರೂಜಿ ಅವರು ಆಶೀರ್ವಾದ ಮಾಡಿ, ಇಂದು ಪವಿತ್ರವಾದ ದಿನ. ಬಸವಜಯಂತಿ ಮತ್ತು ಅಕ್ಷಯ ತೃತೀಯ ದಿನ. ಈ ಶುಭ ದಿನದಲ್ಲಿ ಯಾವುದೇ ಕಾರ್ಯ ಕೈಗೊಂಡರೂ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ. ಇಂದು ಪತ್ರಕರ್ತರ ಬಹುದಿನಗಳ ಕನಸು ನನಸಾಗುತ್ತಿದೆ. ಈ ಕಾರ್ಯಕ್ಕೆ ನಾನು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸಹಾಯ ಸಹಕಾರ ಸದಾ ಇರುತ್ತದೆ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ. ನಿಮ್ಮೆಲ್ಲರ ಆಶಯದಂತೆ ಪತ್ರಿಕಾ ಭವನ ಬೇಗ ಪೂರ್ಣಗೊಳ್ಳಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್ ಬಿ.ಎನ್., ಪೌರಾಯುಕ್ತ ,ಮಹೇಂದ್ರ ಬಿ., ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್, ನಗರಸಭೆಯ ಅಧ್ಯಕ್ಷ ಬಿ.ಎಂ.ನಾಗೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರಶೇಖರ್, ಮಾಜಿ ಅಧ್ಯಕರಾದ ಪ್ರಶಾಂತ್, ವಾಸಿಲ್ ಆಲಿ ಖಾನ್, ಬಿ.ಪಿ.ಮುದ್ದುಕೃಷ್ಣೇಗೌಡ, ಸದಸ್ಯರಾದ ಸತೀಶ್, ಸುಮಾ ರವೀಶ್, ಮಂಜುನಾಥ್, ಎಂ.ಟಿ.ತಿಮ್ಮರಾಜು, ಸ.ನೌ. ಸಂಘದ ಅಧ್ಯಕ್ಷ ಸುದೀಂದ್ರ ಕೆ., ಸಮಾಜ ಸೇವಕರಾದ ಪ್ರಸನ್ನಕುಮಾರ್, ಗೋವಿಂದಹಳ್ಳಿ ನಾಗರಾಜು, ಎಂ.ಎನ್.ಆನAದಸ್ವಾಮಿ, ಎಲೇಕೇರಿ ರವೀಶ್, ಡಾ.ಭಗತ್ ರಾಮ್,ಎಂ.ವೇದಮೂರ್ತಿ, ಕರಣ್ ಆನಂದ್, ಕೃಷ್ಣಮೂರ್ತಿ (ಕಿಟ್ಟಣ್ಣ) ಕೊಂಡಾಪುರ ಪ್ರಸನ್ನ, ರೇಖಾ ಉಮಾಶಂಕರ್,ಕೋಕಿಲಾ ರಾಣಿ, ಕೆ.ಟಿ.ಲಕ್ಷ÷್ಮಮ್ಮ,ಧರ್ಮಸ್ಥಳದ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ, ಎಲೇಕೇರಿ ನಂದೀಶ್, ಶಿವರಾಮೇಗೌಡ ನಾಗವಾರ, ತಿಮ್ಮೇಶ್ ಪ್ರಭು, ಡಾ.ಮಲ್ಲೇಶ್ ದ್ಯಾವಪಟ್ಟಣ. ಚೆಕ್ಕರೆ ಯೋಗೇಶ್, ರಾಂಪುರ ಲೋಕೇಶ್, ಎಸ್.ಸಿ.ಶೇಖರ್, ಕೋಟೆ ಸಿದ್ದರಾಮಯ್ಯ, ವೆಂಕಟೇಶ್, ಶಂಭೂಗೌಡ, ಹನುಮಂತು, ಬಿವಿಎಸ್ ಕುಮಾರ್, ಸುರೇಶ್, ಕಾಂತರಾಜು, ಅರ್ಚಕ ರಾಘವೇಂದ್ರ ಮಯ್ಯ, ಕೆಯುಡ್ಲೂ÷್ಯಜೆ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ರಾಜ್ಯ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ಲಕ್ಷಿ÷್ಮÃಪತಿ ಮಂಗಳವಾರಪೇಟೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಜಗದೀಶ್, ಮಾಜಿ ಅಧ್ಯಕ್ಷ ಸೂರ್ಯಪ್ರಕಾಶ್, ರಾಜ್ಯ ಸಮಿತಿ ಸದಸ್ಯ ಶಿವಮಾದು, ರಾಮನಗರದ ಎಂ.ಹೆಚ್.ಪ್ರಕಾಶ್, ಚಲುವರಾಜು, ಅಪ್ರೋಜ್ ಖಾನ್, ಮಧು, ಕನಕಪುರ ಗಿರೀಶ್, ತಾಲ್ಲೂಕು ಅಧ್ಯಕ್ಷ ಡಿ.ಎಂ.ಮAಜುನಾಥ್, ಪ್ರಧಾನ ಕಾರ್ಯದರ್ಶಿ ಅಕ್ಕೂರು ರಮೇಶ್, ಉಪಾಧ್ಯಕ್ಷರಾದ ಚಿನ್ನಗಿರಿಗೌಡ, ಅರ್ಕೇಶ್, ಕಾರ್ಯದರ್ಶಿಗಳಾದ ವಿನ್ಸಂಟ್ ವಿಜಯ್, ಚೇತನ್, ಖಜಾಂಚಿ ಮೆಂಗಳ್ಳಿ ಮಹೇಶ್, ಹಿರಿಯ ಸದಸ್ಯರಾದ ಸು.ತ.ರಾಮೇಗೌಡ, ರಮೇಶ್‌ಗೌಡ, ಬಿ.ಟಿ.ನಾಗೇಶ್, ಹೆಚ್.ರಮೇಶ್, ನಂದಕುಮಾರ್, ಶಂಕರ್, ಎ.ಟಿ.ವೆಂಕಟೇಶ್‌ಪ್ರಭು, ಸಿ.ಎನ್.ವೆಂಕಟೇಶ್, ಗೋ.ರಾ.ಶ್ರೀನಿವಾಸ್, ಕರೀಂ,ನಯಾಜ್ ಪಾಷ, ಸಾಧು ರಮೇಶ್, ಎಂ.ಎಸ್.ಸುರೇಶ್, ತಿಲಕ್‌ರಾಜ್, ಡಿ.ಎಂ.ರವಿ, ಕೃಷ್ಣಮೂರ್ತಿ, ಕುಮಾರ್, ದರ್ಶನ್, ಪ್ರದೀಪ್,ಶಿವಶಂಕರ್, ಚಂದ್ರಸಾಗರ್, ರಂಜಿತ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು