LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕರ್ನಾಟಕದ ಮುಡಿಗೆ ಚೊಚ್ಚಲ ಸಿ.ಕೆ. ನಾಯ್ಡು ಟ್ರೋಫಿ

ಬೆಂಗಳೂರು: ಆರ್. ಸ್ಮರಣ್ ನಾಯಕತ್ವದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಗೆದ್ದುಕೊಂಡಿತು. ಇದೇ ಮೊದಲ ಬಾರಿ ರಾಜ್ಯದ 23 ವರ್ಷದೊಳಗಿನವರ ತಂಡವು ಈ ಸಾಧನೆ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯವು ಬುಧವಾರ ಡ್ರಾ ಆಯಿತು. ಮೊದಲ ಇನಿಂಗ್ಸ್‍ನಲ್ಲಿ ಮುನ್ನಡೆ ಗಳಿಸಿದ್ದ ಕರ್ನಾಟಕ ತಂಡವು ಟ್ರೋಫಿಗೆ ಮುತ್ತಿಕ್ಕಿತು.ಪಂದ್ಯದ ಕೊನೆಯ ದಿನದಾಟದಲ್ಲಿ ಕರ್ನಾಟಕವು ಅನೀಶ್ ಕೆ.ವಿ. (214; 273ಎ) ದ್ವಿಶತಕ ಮತ್ತು ಕೃತಿಕ್ ಕೃಷ್ಣ (86; 121ಎ) ಅವರ ಅಮೋಘ ಬ್ಯಾಟಿಂಗ್‍ನಿಂದಾಗಿ ಎರಡನೇ ಇನಿಂಗ್ಸ್‍ನಲ್ಲಿ 161.6 ಓವರ್‍ಗಳಲ್ಲಿ 585 ರನ್ ಗಳಿಸಿತು.

ಇದರಿಂದಾಗಿ 804 ರನ್‍ಗಳ ಬೃಹತ್ ಮುನ್ನಡೆ ಸಾಧಿಸಿತು. ಈಚೆಗೆ ಕರ್ನಾಟಕ ರಣಜಿ ತಂಡದಲ್ಲಿಯೂ ಆಡಿ ಬಂದಿರುವ ಅನೀಶ್ 18 ಬೌಂಡರಿ ಮತ್ತು ಆರು ಸಿಕ್ಸರ್ ಸಿಡಿಸಿದರು.ಮಧ್ಯಾಹ್ನ ಬ್ಯಾಟಿಂಗ್ ಆರಂಭಿಸಿದ ಉತ್ತರಪ್ರದೇಶ ತಂಡಕ್ಕೆ ಕರ್ನಾಟಕದ ಮಧ್ಯಮವೇಗಿ ಎಲ್. ಮನ್ವಂತ್ ಕುಮಾರ್ (36ಕ್ಕೆ5) ಸೋಲಿನ ಭೀತಿ ಮೂಡಿಸಿದ್ದರು. ಆದರೆ ಉತ್ತಪ್ರದೇಶ ತಂಡವು 31 ಓವರ್‍ಗಳಲ್ಲಿ 6 ವಿಕೆಟ್‍ಗಳಿಗೆ 174 ರನ್ ಗಳಿಸಿದ್ದಾಗ ಉಭಯ ನಾಯಕರೂ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

‘ಪಂದ್ಯದಲ್ಲಿ ಜಯಿಸಲು ಅವಕಾಶವಿತ್ತು. ಆದರೆ ಮೊದಲ ಇನಿಂಗ್ಸ್‍ನಲ್ಲಿ ಮಹತ್ವದ ಮುನ್ನಡೆ ಗಳಿಸಿದ್ದೆವು. ಎರಡನೇ ಇನಿಂಗ್ಸ್‍ನಲ್ಲಿ ಬೇಗನೆ ಡಿಕ್ಲೇರ್ ಮಾಡಿ ಗೆಲುವಿಗೆ ಪ್ರಯತ್ನಿಸಲೂ ಬಹುದಿತ್ತು. ಆದರೆ ಅವಕಾಶ ಬಿಟ್ಟುಕೊಡುವುದಕ್ಕಿಂತ ನಾವೇ ಇನಿಂಗ್ಸ್ ಮೇಲೆ ಪಾರಮ್ಯ ಸಾಧಿಸುವುದು ಸೂಕ್ತವೆಂದು ನಿರ್ಧರಿಸಿ ಬೃಹತ್ ಮುನ್ನಡೆ ಗಳಿಸುವ ತಂತ್ರ ಅನುಸರಿಸಿದೆವು’ ಎಂದು ಪಂದ್ಯದ ನಂತರ ಕರ್ನಾಟಕದ ಮುಖ್ಯ ಕೋಚ್ ಯರೇಗೌಡ ಸುದ್ದಿಗಾರರಿಗೆ ಹೇಳಿದರು.

ಮಂಗಳವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 663 ರನ್‍ಗಳ ಮುನ್ನಡೆ ಸಾಧಿಸಿತ್ತು. 171 ರನ್ ಗಳಿಸಿ ಕ್ರೀಸ್‍ನಲ್ಲಿದ್ದ ಅನೀಶ್ ಅವರು ಕೊನೆಯ ದಿನದಾಟದಲ್ಲಿ ದ್ವಿಶತಕದ ಗಡಿ ಮುಟ್ಟಿದ ನಂತರ ತಂಡವು ಡಿಕ್ಲೇರ್ ಮಾಡಿಕೊಂಡು, ಉತ್ತರಪ್ರದೇಶವನ್ನು ಆಲೌಟ್ ಮಾಡಿ ಗೆಲ್ಲುವ ನಿರೀಕ್ಷೆ ಮೂಡಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು