ಬೆಂಗಳೂರು: ಹಾಲಿ ಚಾಂಪಿಯನ್ ಅಲ್ಪೆöÊನ್ ಎಪಿಎಲ್ ಪೈಪರ್ಸ್ ತಂಡ ಆರಂಭಿಕ ಪಂದ್ಯದಲ್ಲಿ ಸೋಲು ಕಂಡರೂ, ನಂತರ ಪಿಬಿಜಿ ಅಲಾಸ್ಕನ್ ನೈಟ್ಸ್ ವಿರುದ್ಧ 11-6 ಅಂತರದ ಭರ್ಜರಿ ಗೆಲುವು ದಾಖಲಿಸಿ ಗ್ಲೋಬಲ್ ಚೆಸ್ ಲೀಗ್‌ನ ನಾಲ್ಕನೇ ಆವೃತ್ತಿಯಲ್ಲಿ ಅಗ್ರಸ್ಥಾನಕ್ಕೇರಿದೆ.ಟೆಕ್ ಮಹೀಂದ್ರಾ ಮತ್ತು ಫಿಡೆ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಆರನೇ ದಿನವಾದ ಗುರುವಾರ ನಡೆದ ಸ್ಪರ್ಧೆಗಳಲ್ಲಿ ಅಗ್ರಸ್ಥಾನಕ್ಕೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಗುರುವಾರದ ಕೊನೆಯ ಪಂದ್ಯದಲ್ಲಿ ಗಂಗಾಸ್ ಗ್ರ್ಯಾಂಡ್ ಮಾಸ್ಟರ್ಸ್ ತಂಡ ಎಫ್‌ವೈಇಆರ್‌ಎಸ್ ಅಮೆರಿಕನ್ ಗ್ಯಾಂಬಿಟ್ಸ್ ವಿರುದ್ಧ 5-13 ಅಂತರದಿಂದ ಪರಾಭವಗೊಂಡಿತು. ಗುರುವಾರದ ದಿನದ ಆರಂಭಿಕ ಪಂದ್ಯದಲ್ಲಿಗಗಸ್, ಕಪ್ಪು ಕಾಯಿಗಳೊಂದಿಗೆ ಆಡಿದ ಆಲ್ಲೈನ್ ಎಪಿಎಲ್ ಪೈಪರ್ಸ್ ವಿರುದ್ಧ 12-4 ಅಂತರದ ಸಮಗ್ರ ಗೆಲುವು ಸಾಧಿಸಿತು. ಮತ್ತೊಂದೆಡೆ, ಚೆಕ್ ಮುಂಬಾ ಮಾಸ್ಟರ್ಸ್ ತಂಡವು ತ್ರಿವೇಣಿ ಕಾಂಟಿನೆAಟಲ್ ಕಿಂಗ್ಸ್ ವಿರುದ್ಧ 14-5 ಅಂತರದ ಗೆಲುವು ದಾಖಲಿಸಿ ಫೈನಲ್ ಜೀವಂತವಾಗಿರಿಸಿಕೊಂಡಿತು.ಗಗಸ್ ಮತ್ತು ಆಲ್ಲೈನ್ ಎರಡೂ ತಂಡಗಳು ಗುರುವಾರ ತಲಾ ಎರಡು ಪಂದ್ಯಗಳನ್ನು ಆಡಬೇಕಿದ್ದ ಹಿನ್ನೆಲೆಯಲ್ಲಿ, ಈ ಎರಡೂ ತಂಡಗಳ ನಡುವಿನ ಆರಂಭಿಕ ಮುಖಾಮುಖಿ ದಿನದ ಫಲಿತಾಂಶಕ್ಕೆ ಮಹತ್ವದ್ದಾಗಿತ್ತು. ಬಲಿಷ್ಠ ಪ್ರಶಸ್ತಿ ಸ್ಪರ್ಧಿಗಳೆಂದು ಪರಿಗಣಿಸಲ್ಪಡುವ ಗಂಗಸ್ ತಂಡವು, ಪೈಪರ್ಸ್ ವಿರುದ್ಧ ಯಾವುದೇ ಗೇಮ್ ಕಳೆದುಕೊಳ್ಳದೆ ಗೆದ್ದು ತಮ್ಮ ಸಾಮರ್ಥ್ಯವನ್ನು ತೋರಿಸಿತು.ಸ್ಟಾವುö್ರಲಾ ತ್ಸೊಲಕಿಡೌ ಅವರು ಕೊನೆರು ಹಂಪಿಗೆ ಸೋಲುಣಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ಸ್ ತಂಡದ ಗೆಲುವಿನ ಅಭಿಯಾನಕ್ಕೆ ಚಾಲನೆ ನೀಡಿದರು. ಸೂಪರ್ ಸ್ಟಾರ್ ಪುರುಷರ ಬೋರ್ಡ್ನಲ್ಲಿ ಎರಡು ಬಾರಿಯ ವಿಶ್ವಕಪ್ ವಿಜೇತ ಲೆವೊನ್ ಅರೋನಿಯನ್ ಅವರು ಹೆಚ್ಚುವರಿ ಕುದುರೆಯ ಲಾಭವನ್ನು ಎಂಡ್‌ಗೇಮ್‌ನಲ್ಲಿ ಸಮರ್ಥವಾಗಿ ಬಳಸಿಕೊಂಡು ಅನಿಶ್ ಗಿರಿಯನ್ನು 61 ನಡೆಗಳಲ್ಲಿ ಮಣಿಸಿದರು.ನನಗೆ ಅದೃಷ್ಟ ಒಲಿಯಿತು, ಆರಂಭದಲ್ಲಿನಾನು ಬಹಳ ಕೆಟ್ಟ ರೀತಿಯಲ್ಲಿಆಡಿದರೂ ಉತ್ತಮ ನಡೆಗಳನ್ನು ಕಂಡುಕೊಳ್ಳಬಹುದು ಎಂಬ ನಂಬಿಕೆ ನನಗಿತ್ತು. ಪಂದ್ಯವನ್ನು ಸೋಲದೆ ಉಳಿಸಿಕೊಳ್ಳುವುದು ನನಗೆ ಅರ್ಹವಾಗಿರಬಹುದು, ಆದರೆ ಗೆಲುವು ಖಂಡಿತವಾಗಿಯೂ ದೊಡ್ಡ ಅದೃಷ್ಟ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅರೋನಿಯನ್ ಹೇಳಿದರು. ಆದರೆ, ಸೋಲಿನ ತಕ್ಷ ಣವೇ ಪೈಪರ್ಸ್ ಪುಟಿದೆದ್ದಿತು. ಬಿಳಿ ಕಾಯಿಗಳೊಂದಿಗೆ ಆಡಿದ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ವಿಶ್ವನಾಥನ್ ಆನಂದ್ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದರು. ಬಳಿಕ ಕೊನೆರು ಹಂಪಿ ಅವರು ನಿನೊ ಬಾಟ್ಸಿಯಾಶ್ವಿಲಿ ಅವರನ್ನು ಸೋಲಿಸಿ ಟೂರ್ನಿಯಲ್ಲಿತಮ್ಮ ನಾಲ್ಕನೇ ಗೆಲುವು ದಾಖಲಿಸಿದರು. ಇದು ಸೀಸನ್ 4ರಲ್ಲಿ ಬಾಟ್ಸಿಯಾಶ್ವಿಲಿಗೆ ಎದುರಾದ ಮೊದಲ ಸೋಲು. ಪ್ರಾಡಿಜಿ ಬೋರ್ಡ್ನಲ್ಲಿ ವೊಲೊದಾರ್ ಮುರ್ಜಿನ್ ಅವರು ಸಮಯದ ಒತ್ತಡದ ನಡುವೆ ಅಭಿಮನ್ಯು ಮಿಶ್ರಾ ಅವರನ್ನು ಮಣಿಸಿದರು. ಇದರಿಂದ ಪೈಪರ್ಸ್ ಗೆಲುವು ಬಹುತೇಕ ಖಚಿತವಾಯಿತು. ಅಲಾಸ್ಕನ್ ನೈಟ್ಸ್ ಪರ ಕೇವಲ 15 ವರ್ಷದ ಯಾಗಿಜ್ ಕಾನ್ ಎರ್ಡೊಗ್ಮುಶ್ ಮಾತ್ರ ಕಪುö್ಪ ಕಾಯಿಗಳೊಂದಿಗೆ ಗೆಲುವು ಸಾಧಿಸಿ ನಾಲ್ಕು ಅಂಕಗಳನ್ನು ಗಳಿಸಿದರು. ಸೂಪರ್ ಸ್ಟಾರ್ ಪುರುಷರ ಬೋರ್ಡ್ನಲ್ಲಿ ವಿದಿತ್ ಗುಜರಾತಿ ಸಮಯ ಮುಗಿದು ಸೋಲನುಭವಿಸಿದರು.