LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸ್ಟಿಂಗ್ ಆಪರೇಷನ್-ಮಾಜಿ ಸಚಿವ ವರ್ತೂರ್ ಪ್ರಕಾಶ್ 


ಕೋಲಾರ: ರಾಜ್ಯದ ಆಹಿಂದ ವರ್ಗದ ನೇತಾರ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಕುತಂತ್ರಿಗಳ ವಿರುದ್ದ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಒತ್ತಾಯಿಸಿದರು. ಕೋಲಾರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 3 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ವಿರುದ್ದ ಅಪಪ್ರಚಾರಗಳನ್ನು ಮಾಡುತ್ತಿರುವುದು ಕಂಡು ತೀರಾ ಬೇಸರವಾಗಿದೆ. ಸಿದ್ದರಾಮಯ್ಯನವರೊಂದಿಗೆ ಸುಮಾರು 25 ವರ್ಷಗಳ ಒಡನಾಟ ಹೊಂದಿದ್ದೆ. ರಾಜ್ಯದಲ್ಲಿಯೇ ಸಿದ್ದರಾಮಯ್ಯನವರನ್ನು ಬಹಳ ಹತ್ತಿರದಿಂದ ನೋಡಿರುವೆ ಅವರ ಕಳೆದ ಸುಮಾರು 50 ವರ್ಷಗಳ ರಾಜಕೀಯ ಆಡಳಿತ ಪರಿಶುದ್ದವಾಗಿದ್ದು ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದಾರೆ.  ಸಿದ್ದರಾಮಯ್ಯನವರ ಪ್ರಮಾಣಿಕತೆ ಬದ್ದತೆಯ ಹಿನ್ನಲೆಯಲ್ಲಿ ಸಿದ್ದು ನೇತ್ರತ್ವದಲ್ಲಿ ಕಳೆದ ಎರಡು  ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು 120 ಹಾಗೂ 136 ಸ್ಥಾನಗಳನ್ನು ಪಡೆಯುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದು ಕಾಂಗ್ರೇಸ್ ಪಕ್ಷದ ಸ್ಥಾನಮಾನಗಳನ್ನು ಉನ್ನತ ಮಟ್ಟಕ್ಕೆ ತೆಗೆದು ಕೊಂಡಿದ್ದರು. ಅವರ ರಾಜಕೀಯದ ನಿವೃತ್ತ ಅಂಚಿನಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆದಿದೆ. ಸಿ.ಡಿ. ಕಾರ್ಖಾನೆಯನ್ನು ಎಐ ಬಳಿಸಿ ಕೊಂಡು ಸಾರ್ವಜನಿಕರಲ್ಲಿ ತಪ್ಪು ಭಾವನೆ ಸೃಷ್ಠಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು. ಇದೇನು ಕಾಂಗ್ರೇಸ್ ಆಡಳಿತದಲ್ಲಿ ಹೊಸದೆನಲ್ಲ. ಈ ಹಿಂದೆ ರಮೇಶ್ ಜಾರಕಿ ಹೊಳಿ ಮೇಲೆ ಸಿ.ಡಿ. ಹರಿಯ ಬಿಟ್ಟು ಮೂಲೆ ಗುಂಪು ಮಾಡಲಾಯಿತು, ನಂತರದಲ್ಲಿ ಸಹಕಾರ ಕ್ಷೇತ್ರದ ರಾಜಣ್ಣನವರ ಮೇಲೂ ಈ ಪ್ರಯತ್ನ ನಡೆಸಿ ಮೂಲೆ ಗುಂಪು ಮಾಡಲಾಯಿತು ಈಗಾ ಇಳಿವಯಸ್ಸಿನಲ್ಲಿದ್ದು ಅವರ ಪರಿಶುದ್ದ ಆಡಳಿತಕ್ಕೆ ಮಸಿ ಬಳಿಯುವ ಪ್ರಯತ್ನದ ವಿರುದ್ದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಪಕ್ಷ ಬೇಧ ಮರೆತು ಸಿದ್ದರಾಮಯ್ಯನವರ ಪರ ಧ್ವನಿ ಎತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಅವರ ಪಕ್ಷದಲ್ಲಿದ್ದ 135 ಶಾಸಕರು ಹಾಗೂ ಸಚಿವರು ಯಾರೂ ಸಹ ಧ್ವನಿ ಎತ್ತದೆ ಇರುವುದು ಯಕ್ಷ ಪ್ರಶ್ನೆಯಾಗಿ ಕಾಡಿದೆ ಎಂದು ವ್ಯಂಗವಾಡಿದರು. ಸಿದ್ದರಾಮಯ್ಯನವರ ಪರವಾಗಿ ಅಹಿಂದ ವರ್ಗವು ಪಕ್ಷ ಭೇದ,ಜಾತಿ ಭೇದ ಪಕ್ಕಕ್ಕೆ ಇಟ್ಟು ವ್ಯಕ್ತಿತ್ವಕ್ಕೆ ಬೆಂಬಲವಾಗಿ ನಿಲ್ಲುವುದು. ಈ ಸಂಬಂಧವಾಗಿ ಈ ಪ್ರಕರಣ ವಿರುದ್ದ ತನಿಖೆಗೆ ಎಸ್.ಐ.ಟಿ. ಸಮಿತಿ ನೇಮಿಸ ಬಾರದು ಅದು "ಶಿವಕುಮಾರ್ ಇನ್ವೆಸಟಿಗೇಷನ್ ಟೀಮ್" ಎಂದ ಟೀಕಿಸಿದ ಅವರು ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಸಮಗ್ರವಾಗಿ ನಡೆಸಬೇಕು. ಸಿದ್ದರಾಮಯ್ಯನವರು ಕಳೆದ 2006ರ ಚುನಾವಣೆಯಲ್ಲಿ ಚಾಮುಂಡಿಯಲ್ಲಿ ಗೆದ್ದಾಗನಿಂದಲೇ ಅವರ ವಿರುದ್ದ ಕಾಂಗ್ರೇಸ್ ಪಕ್ಷದಲ್ಲಿ ಅಪಸ್ವರಗಳು ಪ್ರಾರಂಭವಾಗಿದ್ದು ಕೋಲಾರದಲ್ಲಿ ನಾನು ಅಭಿನಂಧನ ಸಮಾರಂಭ ನಡೆಸಲು ವ್ಯಾಪಕವಾದ ಪ್ರಚಾರ ಮಾಡಿ ಸಿದ್ದತೆಯ ಭರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅಂದಿನ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಖರ್ಗೆ ಸಾಹೇಬರು ರಾಜ್ಯದಲ್ಲಿ ಬರ ಇರುವುದರಿಂದ ಅಭಿನಂದನಾ ಸಮಾರಂಭಗಳು ನಡೆಸಬಾರದು ಎಂದು ನೋಟಿಸ್ ಜಾರಿ ಮಾಡಿದ್ದರು ಎಂದು ನೆನಪಿಸಿದರು. ನಂತರದ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ನೇತ್ರತ್ವದಲ್ಲಿ ಆಹಿಂದ ವರ್ಗಗಳು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ ಹಿನ್ನಲೆಯಲ್ಲಿ 120 ಕ್ಕೂ ಹೆಚ್ಚು ಸೀಟ್‌ಗಳ ಬಂದವು. 2023ರ ಚುನಾವಣೆಯಲ್ಲಿ 136 ಸೀಟ್‌ಗಳ ಆಯ್ಕೆಯಾಗುವ ಮೂಲಕ ಕರ್ನಾಟಕವನ್ನು ಕಾಂಗ್ರೇಸ್ ಪಕ್ಷದ ಭದ್ರಕೋಟೆಯಾಗಿ ನಿರ್ಮಿಸಿ ಕಾಂಗ್ರೇಸ್ ಹೈಕಮಾಂಡ್ ನಿರೀಕ್ಷೆಗೂ ಮೀರಿ ಫಲಿತಾಂಶ ತಂದು ಕೊಟ್ಟಿದ್ದನ್ನು ಸಹಿಸದ ಹಿತಶತ್ರುಗಳು ಸಿದ್ದರಾಮಯ್ಯನವರ ಮುಖಕ್ಕೆ ಮಸಿ ಬಳಿಯಲು ಹುನ್ನಾರ ನಡೆಸಿದ್ದಾರೆ ಇದರ ವಿರುದ್ದ ಸಿ.ಬಿ.ಐ. ತನಿಖೆಗೆ ಒಳ ಪಡೆಸಬೇಕೆಂದು ಒತ್ತಾಯಿಸಿದರು. 
ಸಿದ್ದರಾಮಯ್ಯನವರ ಆಡಳಿತದಲ್ಲಿ ಒಬ್ಬೊಬ್ವ ಚೇಲಾ 5 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಇರ‍್ಯಾರು ಇಂದು ಸಿದ್ದು ರಾಮಯ್ಯನವರ ಕನಿಷ್ಟ ಧ್ವನಿ ಎತ್ತದೆ ಇರುವುದು ನಿಜಕ್ಕೂ ನೋವಿಮ ಸಂಗತಿಯಾಗಿದೆ. ಆಡಳಿತಾರೊಢ ಕಾಂಗ್ರೇಸ್ ಪಕ್ಷದವರು ಯಾರೂ ಸಿದ್ದರಾಮಯ್ಯನವರ ಮಾತನಾಡಿ ಅವರಿಗೆ ನ್ಯಾಯ ದೊರಕಿಸಲು ಮುಂದಾಗಿಲ್ಲ ಅದರೆ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯನವರಿಗೆ ಮಸಿ ಬಳಿಯಲು ಮಾಡಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿರುವುದು ಶ್ಲಾಘನೀಯ 
ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಆಡಳಿತದಲ್ಲಿ ಬೇನಾಮಿ ಹೆಸರುಗಳಲ್ಲಿ ಸಾವಿರಾರು ಎಕರೆ ಜಮೀನುಗಳನ್ನು ಕಬಳಿಸಿದ್ದಾರೆ ಅದರೆ ಅವರು ಯಾರು ಸಿದ್ದರಾಮಯ್ಯನವರ ಕೈ ಹಿಡಿಯಲು ಬರಲಿಲ್ಲ ಕನಿಷ್ಟ ಅವರ ಮೇಲಿನ ಈ ಪಿತೂರಿಯನ್ನು ಖಂಡಿಸಿ ಒಂದು ಹೇಳಿಕೆಯನ್ನು ನೀಡಲಿಲ್ಲ. ಇಂಥಹ ಪಕ್ಷದಲ್ಲಿ  ಸಿದ್ದರಾಮಯ್ಯನವರು ಇರುವುದರಿಂದ ಯಾವೂದೇ ರೀತಿ ಪ್ರಯೋಜನವಿಲ್ಲ. ಪಕ್ಷವನ್ನು ಸಂಘಟಿಸಿ ಆಡಳಿತಕ್ಕೆ ತಂದವರ ಮೇಲೆ ಕನಿಷ್ಟ ಗೌರವ ನೀಡಲಿಲ್ಲ ಎಂದ ಮೇಲೆ ಕೊಡಲೇ ರಾಜಿನಾಮೆ ನೀಡ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಹೊರಗೆ ಬರಲಿ ಎಂದರು.  ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯನವರ ಜೂತೆ ನಾವು ಇದ್ದೇವೆ ಬೇಕಾದರೆ ಹೊಸ ಪಕ್ಷ ಕಟ್ಟಿ ಕೊಳ್ಳಲಿ, ಅಹಿಂದ ವರ್ಗವು ಸಿದ್ದರಾಮಯ್ಯನವರ ಬೆನ್ನ ಇರುವುದು ಎಂದ ಅವರು ನಮಗೆ ಈ ಪಿತೂರಿ ನಡೆಸಿದವರು ಬೆಳಕಿಗೆ ಬರಬೇಕು. ಯಾರೂ ಈ ವಿಡೀಯೋಗಳನ್ನು ಮಾಡಿದ್ದಾರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡೆಸಿದರೆ ಸಿಡಿಗಳ ಕಿಂಗ್ ಪಿನ್ ಯಾರೇಂದು ತಿಳಿಯುವುದು, ಸಿದ್ದರಾಮಯ್ಯ ಕಳಂಕ ರಹಿತ ಅಹಿಂದ ವರ್ಗದ ನಾಯಕನಿಗೆ ಅನ್ಯಾಯವಾಗಲು ಬಿಡುವುದಿಲ್ಲ.ರಾಜ್ಯಾದಾದ್ಯಂತ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST