LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಸಿಎಂ, ಡಿಸಿಎಂರಿಂದ ಬೀದಿ ನಾಟಕ ಅಶೋಕ್ ವ್ಯಂಗ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು "ಚಲೋ ದಿಲ್ಲಿ" ಎಂದು ಬೀದಿ ನಾಟಕ ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿಜೆಪಿಯ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಕರ್ನಾಟಕದಲ್ಲಿ ರೈತರು ಬರ ಪರಿಹಾರ ಎಲ್ಲಿ? ಎನ್ನುತ್ತಿದ್ದಾರೆ. ಅನ್ನದಾತರು ಕಿಸಾನ್ ಸಮ್ಮಾನ್ ನ 4,000 ರೂ ಎಲ್ಲಿ? ಎಂದು ಕೇಳುತ್ತಿದ್ದಾರೆ. ಹಾಲು ಉತ್ಪಾದಕರು 7 ರೂಪಾಯಿ ಸಹಾಯಧನ ಎಲ್ಲಿ? ಬಡವರು 10 ಕೆಜಿ ಅಕ್ಕಿ ಎಲ್ಲಿ?,

ನಿರುದ್ಯೋಗಿ ಯುವಕರು 3,000 ರೂ. ಎಲ್ಲಿ?, ನಮ್ಮ ಕ್ಷೇತ್ರಕ್ಕೆ ಅನುದಾನ ಎಲ್ಲಿ? ಎಂದು ಶಾಸಕರು ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಕರ್ನಾಟಕದ ನಾಯಕರೇ, ದಿಲ್ಲಿ ಬಿಡಿ, ಕನ್ನಡಿಗರ ಈ `ಎಲ್ಲಿ'ಗಳಿಗೆ ಮೊದಲು ಉತ್ತರ ಕೊಡಿ ಎಂದು ಆಗ್ರಹ ಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST