LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಅಪಾರ್ಟ್ಮೆಂಟ್‌ಗಳ ಸಮಸ್ಯೆಗೆ ಶೀಘ್ರ ಪರಿಹಾರ: ಎಸ್‌ಟಿಎಸ್

ಕೆಂಗೇರಿ: ಕ್ಷೇತ್ರದಲ್ಲಿನ ಅಪಾರ್ಟೆ್ಮಂಟ್ ಗಳ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಿಮ್ಮಗಳ ಸಮಸ್ಯೆ ಆಲಿಸಿ ಪರಿಹಾರ ದೊರಕಿಸಿ ಕೊಡಲು ಸಿದ್ದವಿರುವುದಾಗಿಯೇ ಹೊರತು ಪ್ರಚಾರದ ಗೀಳಿಗಾಗಿ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡನಿಗೆ ಶಾಸಕ ಎಸ್.ಟಿ. ಸೋಮಶೇಖರ್ ಟಾಂಗ್ ನೀಡಿದರು.ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹನುಮಂತಯ್ಯ ವಾರ್ಡ್ ನ ಕೆ.ಹೆಚ್.ಬಿ ಪ್ಲಾಟಿನಂ ಅಪಾರ್ಟೆ್ಮಂಟ್ ನಲ್ಲಿ ಜಿಬಿಎ ಸಂಭಾವ್ಯ ಅಭ್ಯರ್ಥಿ ಚೇತನ್ ಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪಾರ್ಟೆ್ಮಂಟ್ ನಿವಾಸಿಗಳ ಸಮಸ್ಯೆ ಆಲಿಸಿ ಮಾತನಾಡಿದ ಅವರು ನಿಮ್ಮ ಅಪಾರ್ಟೆ್ಮಂಟ್ ಸಮಸ್ಯೆಗಳನ್ನು ನೇರವಾಗಿ ನನ್ನ ಬಳಿ ತಿಳಿಸಿ ಅನ್ಯರ ಮಧ್ಯೆ ಪ್ರವೇಶವನ್ನು ನಿಷೇಧಿಸಿ ಎಂದು ತಿಳಿಸಿದರು.ನನ್ನ ಕ್ಷೇತ್ರದಲ್ಲಿ ಸಾವಿರಾರು ಅಪಾರ್ಟೆ್ಮಂಟ್ ಗಳಿವೆ. ಎಷ್ಟೋ ಅಸೋಸಿಯೇಷನ್ ನೋಡಿದ್ದೇನೆ. ಕೆ.ಹೆಚ್.ಬಿ ಪ್ಲಾಟಿನಂ ಅಪಾರ್ಟೆ್ಮಂಟ್ ನ ಕಸದ ಸಮಸ್ಯೆ, ಒಳಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಒಂದು ತಿಂಗಳೊಳಗೆ ಅಪಾರ್ಟೆ್ಮಂಟ್ ನ 808 ಮನೆಗಳಿಗೆ ಇ - ಖಾತಾ ವಿತರಿಸುವಂತೆ ಕೆ.ಹೆಚ್.ಬಿ ಅಧಿಕಾರಿಗಳಿಗೆ ಸೂಚಿಸಿದರು.ಅಪಾರ್ಟೆ್ಮಂಟ್ ವಾಸಿಗಳು ಎಂದರೆ ಶ್ರೀಮಂತರು ಎಂಬ ಭಾವನೆ ಅಧಿಕಾರಿಗಳಿಗಿದೆ. ಮಧ್ಯಮ ಹಾಗೂ ಬಡವರು ಸಾಲ ಮಾಡಿ ಕೈಗೆಟುಕುವ ದರದಲ್ಲಿ ಸ್ವಂತ ಸೂರು ಖರೀದಿಸಿರುತ್ತಾರೆ.ನನ್ನ ಕ್ಷೇತ್ರದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಕ್ಕೆ ತೊಂದರೆ ಉಂಟು ಮಾಡಿದರೆ ಸುಮ್ಮನೇ ಕೂರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮುಖಂಡ ಚೇತನ್ ಗೌಡ, ವಾರ್ಡ್ ಅಧ್ಯಕ್ಷ ಪುರುಷೋತ್ತಮ್, ಕೆಂಗೇರಿ ಬ್ಲಾಕ್ ಮಹಿಳಾ ಅಧ್ಯಕ್ಷೆ ಲಕ್ಷ್ಮೀಪ್ರಭು ರಾಜ್, ಪ್ಲಾಟಿನಂ ಅಪಾರ್ಟೆ್ಮಂಟ್ ಅಧ್ಯಕ್ಷ ಶ್ರೀಧರಯ್ಯ, ಕಾರ್ಯದರ್ಶಿ ನಾಗರಾಜ್, ಬೆಸ್ಕಾಂ ಇಇ ಶಿವಕುಮಾರ್, ಜಲಮಂಡಳಿ ಎಇಇ ಯಶವಂತ್,ಸಹಾಯಕ ಪೋಲಿಸ್ ಆಯುಕ್ತೆ ಸತ್ಯವತಿ, ಪೋಲಿಸ್ ಇನ್ಸೆ÷್ಪಕ್ಟರ್ ಜಗದೀಶ್, ಸಂಚಾರ ಪೋಲಿಸ್ ಇನ್ಸೆ÷್ಪಕ್ಟರ್ ನಾಗೇಶ್, ಆರೋಗ್ಯಾಧಿಕಾರಿ ವಿನಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಅನೇಕರು ಅಪಾರ್ಟೆ್ಮಂಟ್ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು ಒಂದು ತಿಂಗಳ ಒಳಗಾಗಿ ಅಪಾರ್ಟೆ್ಮಂಟ್ ನಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸುವುದಾಗಿ ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು