LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಗೆಲುವಿನ ಹೊಸ್ತಿಲಲ್ಲಿ ಎಡವಿದ ಶತಕವೀರ ನಿಸ್ಸಾಂಕ: ಭಾರತ ಜಯಭೇರಿ

ಏಷ್ಯಾ ಕಪ್ ಫೈನಲ್ ಗೂ ಮುನ್ನ ಕೇವಲ ಔಪಚಾರಿಕ ಎಂದೇ ಪರಿಗಣಿಸಲ್ಪಟ್ಟ ಭಾದತಗ v/s ಶ್ರೀಲಂಕಾ ಪಂದ್ಯ ಅಕ್ಷರಶಃ ಟಿ೨೦ಯ ರೋಚಕತೆಯನ್ನು ಉಣಬಡಿಸಿತು. ಪತುಮ್ ನಿಸ್ಸಾಂಕ ಅವರ ಅದ್ಬುತ ಶತಕದಿಂದ ಸೂಪರ್ ಓವರ್ ಕಂಡ ಪಂದ್ಯ ಅಂತಿಮವಾಗಿ ಸೂಪರ್ ಓವರ್ ನಲ್ಲಿ ಭಾರತ ತಂಡದ ಪಾಲಾಯಿತು.

ಗಣದಲ್ಲಿ ಶುಕ್ರವಾರ ನಡದ ಸೂಪರ್ ೪ ಹಂತದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ೨೦ ಓವರ್ ಗಳಲ್ಲಿ ೨೦೨ ರನ್ ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ೨೦ ಓವರ್ ಗಳಲ್ಲಿ ಅಷ್ಟೇ ರನ್ ಗಳಿಸುವಲ್ಲಿ ಶಕ್ತವಾಯಿತು. ಸೂಪರ್ ಓವರ್ ನಲ್ಲಿ ಶ್ರೀಲಂಕಾ ೨ ವಿಕೆಟ್ ನಷ್ಟಕ್ಕೆ ಕೇವಲ ೨ ರನ್. ಇದನ್ನು ನಾಯಕ ಸೂರ್ಯಕುಮಾರ್ ಯಾದವ್ ಒಂದೇ ಎಸೆತದಲ್ಲಿ ಪೂರೈಸಿದರು. ಈ ಮೂಲಕ ಭಾರತ ತಂಡ ಅಜೇಯವಾಗಿ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದಿರಾಳಿ  ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯಾ ಕಪ್ಇತಿಹಾಸದಲ್ಲೇ ಇತ್ತಂಡಗಳು ಮೊದಲ ಬಾರಿ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ಶ್ರೀಲಂಕಾಗೆ ಆರಂಭಿಕ ಆಘಾತ ಗೆಲ್ಲಲು ೨೦೨ ರನ್ ಗಳ ಕಠಿಣ ಗುರಿ ಪಡೆದಿದ್ದ ಶ್ರೀಲಂಕಾ ತಂಡ ಮೊದಲ ವಿಕಟ್ ಕುಸಾಲ್ ಮೆಂಡಿಸ್ ರೂಪದಲ್ಲಿ ೭ ರನ್ ಗೆ
ಪತನಗೊಂಡಾಗ ಭಾರತ ಈ ಪಂದ್ಯವನ್ನು ಸುಲಭದಲ್ಲಿ ಗೆದ್ದುಬಿಡಬಹುದು ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಪತುಮ್ ನಿಸ್ಸಾಂಕಾ ಮತ್ತು ಕುಸಾಲ್ ಪೆರೆರಾ ಅವರು ಪಂದ್ಯದ ಗತಿಯನ್ನೇ ಗತಿಯನ್ನೇ ಬದಲಾಯಿಸಿದರು. ಇವರಿಬ್ಬರೂ ೨ನೇ ವಿಕೆಟ್ ಗೆ ೧೨೭ ರನ್ ಕಲೆಹಾಕಿದರು. ಓವರ್ ಗೆ ೧೧ ರನ್ ನಂತೆ ಗಳಿಸುತ್ತಾ ಹೋದ ಇವರಿಬ್ಬರೂ ಭಾರತೀಯ ಬೌಲರ್ ಗಳನ್ನು ಚೆನ್ನಾಗಿ ಗೋಳು ಹೊಯ್ದುಕೊಂಡರು.

ತAಡದ ಮೊತ್ತ ೧೩೪ ರನ್ ಆಗಿರಬೇಕಾದರೆನ ವರುಣ್ ಚಕ್ರವರ್ತಿ ಅವರ ಬೌಲಿಂಗ್ ನಲ್ಲಿ ಕೀಪರ್ ಸಂಜು ಸ್ಯಾಮ್ಸನ್ ಅವರ ಅದ್ಬುತ ಸ್ಟಂಪಿAಗ್ ನಿಂದಾಗಿ ಕುಸಾಲ್ ಪೆರೆರಾ(೩೨ ಎಸೆತದಲ್ಲಿ ೫೮) ವಿಕೆಟ್ ಪತನಗೊಂಡಿತು. ಆದರೂ ನಿಸ್ಸಾಂಕಾ ಹೋರಾಟ ಮಾತ್ರ ನಿಂತಿರಲಿಲ್ಲ. ಕೇವಲ ೨೫ ಎಸೆತಗಳಲ್ಲಿ
ಅರ್ಧಶತಕ ಬಾರಿಸಿದ್ದ ಅವರು ೫೩ ಎಸೆತದಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು ೫೮ ಎಸೆತಗಳಲ್ಲಿ ೧೦೭ ರನ್ ಗಳಿಸಿ ಕೊನೇ ಓವರ್
ನಲ್ಲಿ ಔಟಾದರು. ಇದು ನಿಸ್ಸಾಂಕಾ ಅವರು ಮೊದಲ ಚಿ೨೦ ಶತಕವಾಗಿದ್ದರೆ, ಏಷ್ಯಾ ಕಪ್ ಟಿ೨೦ ಪಂದ್ಯದಲ್ಲಿ ೩ನೇ ಶತಕವಾಗಿದೆ.

ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ೨೩ ಎಸೆತಗಳಲ್ಲಿ ಉಪಯುಕ್ತ ೩೯ ರನ್ ಗಳಿಸಿದರೆ, ಅಕ್ಷರ್ ಪಟೇಲ್ ಅವರು ೧೫ ಎಸೆತಗಳಲ್ಲಿ ಅಜೇಯ ೨೧ ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ದಸುನ್ ಶನಕ, ಚರಿತ ಅಸಲಂಕ,ವನಿAದು ಹಸರಂಗ, ದುಷ್ಮಂತ ಚಾಮಿರ, ಮಹೀಶ್ ಪತಿರಣ ತಲಾ ೧ ವಿಕೆಟ್ ಗಳಿಸಿದರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು