LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ರಾಜ್ಯ ಕಾಂಗ್ರೆಸ್‌ನಲ್ಲೀಗ 5 ಪವರ್ ಸೆಂಟರ್

ರಾಜ್ಯದ ಕಾಂಗ್ರೆಸ್‌ನಲ್ಲೀಗ ಪವರ್ ಪಾಲಿಟಿಕ್ಸ್ ಜೋರಾಗುವ ಲಕ್ಷಣಗಳು ಕಾಣಸಿಗುತ್ತಿದೆ. ಇಷ್ಟು ದಿನ ಸಿಎಂ ಸ್ಥಾನದಲ್ಲಿದ್ದ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಕಾಂಗ್ರೆಸ್ ರಾಜಕಾರಣದ ಪವರ್ ಸೆಂಟರ್‌ಗಳಾಗಿದ್ದರು. ಯಾವಾಗ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಆಯಿತೋ, ಅಲ್ಲಿಂದ ಹೆಚ್ಚಾಯಿತು ಪವರ್ ಸೆಂಟರ್‌ಗಳು. ಕಾಂಗ್ರೆಸ್‌ನಲ್ಲಿ ಒಂದಲ್ಲ, ಎರಡಲ್ಲ. ಇದೀಗ ಇರುವುದು 5 ಪವರ್ ಸೆಂಟರ್‌ಗಳು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ಧರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ- ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೀಗೆ ಐವರು ನಾಯಕರುಗಳು ಕಾಂಗ್ರೆಸ್‌ನಲ್ಲೀಗ ಪವರ್ ಸೆಂಟರ್‌ಗಳಾಗಿ ಮಾರ್ಪಾಟ್ಟಿದ್ದಾರೆ.
ಒಂದೇ ಒಂದು ಪವರ್ ಸೆಂಟರ್ ಇದ್ದರೇ, ಪಕ್ಷವನ್ನು ಮುನ್ನಡೆಸಲು ಕಷ್ಟ ಸಾಧ್ಯವಾಗಿರುವ ವಾತಾವರಣದಲ್ಲಿ 5 ಪವರ್ ಸೆಂಟರ್‌ಗಳು ನಿರ್ಮಾಣ ಆಗಿದ್ದಾದ್ದರೂ ಏಕೆ? ಹೇಗೆ? ಮುಂದೇನು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಕಾಂಗ್ರೆಸ್ ಪಾಳಯದಲ್ಲಿಯೇ ಚರ್ಚೆಯಾಗುತ್ತಿದೆ.
ಇಂತಹ ಸಂದರ್ಭವನ್ನು ಸೃಷ್ಠಿಸಿದ್ದೇ ಕಾಂಗ್ರೆಸ್‌ನ ಹೈಕಮಾಂಡ್ ನಾಯಕರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್.
ಹೌದು, ರಾಜ್ಯದ ಕಾಂಗ್ರೆಸ್ 2023 ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಆ ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಿಂದ ನಾಯಜತ್ವ ಬದಲಾವಣೆ ಮಾಡಿಕೊಂಡಿದೆ. ಆದ್ರೆ ಬದಲಾವಣೆ ಮಾಡಿಕೊಳ್ಳುವ ಭರಾಟೆಯಲ್ಲಿ 5 ಪವರ್ ಸೆಂಟರ್‌ಗಳನ್ನು ಮಾಡಿಕೊಂಡು ಎಡವಿತಾ? ಮುಂದೆ ಹೇಗೆ ಹೋಗುವುದು? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಈ ಐವರು ನಾಯಕರುಗಳು ಕಾಂಗ್ರೆಸ್ ಪಕ್ಷಕ್ಕೆ ಬಹಳ ಅನಿವಾರ್ಯತೆ ಇರುವ ನಾಯಕರೇ. ಇಲ್ಲಿ ಯಾರನ್ನೂ ಕೂಡ ಕಡೆಗಣಿಸುವಂತಿಲ್ಲ. ಯಾರೊಬ್ಬರನ್ನು ಕಡೆಗಣಿಸಿದ್ರೂ ಅದು ರಾಜಕಾರಣ ಮಾಡಬೇಕು ಎಂದುಕೊಂಡವರಿಗೆ ಕುತ್ತು ತರುವುದು ನಿಶ್ಚಿತ. ಹೀಗಾಗಿ, ಈ ಐವರನ್ನು ಸಂಬಾಳಿಸಿಕೊAಡು ಹೋಗಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದು ಹೇಗೆ ಎಂಬುದನ್ನು ವಿವರಿಸುತ್ತೇವೆ ನೋಡಿ.
ಮಲ್ಲಿಕಾರ್ಜುನ ಖರ್ಗೆ. ಎಐಸಿಸಿ ಅಧ್ಯಕ್ಷರು. ಹಾಲಿ ರಾಜ್ಯಸಭಾ ಸದಸ್ಯರು ಜೊತೆಗೆ ಕೇಂದ್ರದ ಮೇಲ್ಮನೆಯಲ್ಲಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಣೆ. ಹಾಲಿ ಎಐಸಿಸಿ ಅಧ್ಯಕ್ಷರಾಗಿರುವ ಕಾರಣ ಪವರ್ ಸೆಂಟರ್.
ಸಿದ್ಧರಾಮಯ್ಯ. ಅಹಿಂದ ನಾಯಕ. ಮಾಜಿ ಮುಖ್ಯಮಂತ್ರಿ. ಪಕ್ಷದ ಮೇಲೆ ತಮ್ಮದೇ ಆದ ಹಿಡಿತ ಹೊಂದಿರುವ ನಾಯಕ. ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತರ ವೋಟ್ ಬ್ಯಾಂಕ್‌ನ ತಮ್ಮ ಪಾಕೆಟ್‌ನಲ್ಲಿಟ್ಟುಕೊಂಡ ನಾಯಕ ಕೂಡ ಹೌದು. ರಾಜಕಾರಣದಲ್ಲಿ ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವ. ರಾಜಕೀಯದ ಅನುಭವದಿಂದ ಪಕ್ಷದಲ್ಲಿಂದು ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ತಾಲೂಕು ಪಂಚಾಯಿತ್ ಚುನಾವಣೆಯಿಂದ ಹಿಡಿದು, ರಾಷ್ಟçಮಟ್ಟದ ರಾಜಕಾರಣದವರೆಗೆ ತಮ್ಮದೇ ಆದ ನೆಟ್‌ವರ್ಕ್ ಇಟ್ಟುಕೊಂಡು, ಅದನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಹೀಗಾಗಿ, ಅವರು ಇಂದು ಮಾಜಿ ಮುಖ್ಯಮಂತ್ರಿ ಆದ್ರೂ ಸಹ ಪವರ್ ಸೆಂಟರ್.
ಡಿ.ಕೆ.ಶಿವಕುಮಾರ್. ಹಾಲಿ ಮುಖ್ಯಮಂತ್ರಿ. ಕಟ್ಟಾ ಕಾಂಗ್ರೆಸ್ಸಿಗ. ಎಷ್ಟೇ ಕಷ್ಟ ಬಂದರೂ ಪಕ್ಷ ಬಿಡದ ನಿಷ್ಠಾವಂತ. ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ, ರಾಜ್ಯ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಕೂಡ. ಸದ್ಯ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಚತುರ ರಾಜಕಾರಣಿ. ಎಂತಹುದ್ದೇ ಸಂದರ್ಭ ಬರಲೀ, ಶತ್ರುಗಳು ಯಾರೇ ಎದುರಿಗೆ ಇರಲೀ, ಎದೆಗುಂದದೇ ಎದುರಿಸಬಲ್ಲ ನಾಯಕ. ಇಂತಹ ನಾಯಕನನ್ನು ಹೈಕಮಾಂಡ್ ನಾಯಕರು ಸಿಎಂ ಸ್ಥಾನಕ್ಕೆ ಕರೆತಂದು ಕೂರಿಸಿರುವ ಕಾರಣ ಸದ್ಯ ಡಿಕೆಶಿ ಪವರ್ ಸೆಂಟರ್.
ಡಾ.ಜಿ.ಪರಮೇಶ್ವರ್. ದಲಿತ ಸಮುದಾಯಕ್ಕೆ ಸೇರಿದ ನಾಯಕ. ಹಾಲಿ ಉಪ-ಮುಖ್ಯಮಂತ್ರಿ. ಈ ಹಿಂದೆ ಸುಧೀರ್ಘ ಅವಧಿಗೆ ಕೆಪಿಸಿಸಿ ಘಟಕದ ಅಧ್ಯಕ್ಷ ಸ್ಥಾನ ನಿರ್ವಹಣೆ. ತುಮಕೂರು ಜಿಲ್ಲೆಗೆ ಸೇರಿದ್ರೂ ಸಹ ಹಳೆಯ ಮೈಸೂರು ಭಾಗದ ಮೇಲೆ ತಮ್ಮದೇ ಆದ ಹಿಡಿತ ಮತ್ತು ಪ್ರಭಾವ ಹೊಂದಿರುವ ನಾಯಕ. ಈ ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದಾಗ ಬೆಂಗಳೂರು ನಗರದ ಉಸ್ತುವಾರಿ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಬೇಕು ಅಂದರೆ ಇವರ ಕೃಪೆ ಬೇಕೇ ಬೇಕು ಎಂಬ ಸ್ಥಿತಿ ನಿರ್ಮಾಣವಾಗಿರುವ ಕಾರಣ, ಇವರು ಕೂಡ ಪವರ್ ಸೆಂಟರ್.
ಇನ್ನು ಬಿ.ಕೆ.ಹರಿಪ್ರಸಾದ್. ಹಾಲಿ ಕೆಪಿಸಿಸಿ ಅಧ್ಯಕ್ಷ. ಪ್ರಬಲ ಹಿಂದುಳಿದ ವರ್ಗಕ್ಕೆ ಸೇಎಇದವರಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಕೂಡ ಈಗ ಪವರ್ ಸೆಂಟರ್.
ಹೀಗೆ ಐವರು ನಾಯಕರು ತಮ್ಮದೇ ಆದ ಪ್ರಭಾವ ಹಾಗೂ ಹಿಡಿತ ಮೂಲಕ ಪವರ್ ಸೆಂಟರ್‌ಗಳಾಗಿದ್ದು, ಯಾರೇ ಕಾಂಗ್ರೆಸ್‌ನಲ್ಲಿ ರಾಜಕಾರಣ ಮಾಡಬೇಕು ಎಂದರೂ ಅವರು ಈ ಐವರನ್ನು ಓಲೈಕೆ ಮಾಡಲೇಬೇಕಾದ ಸ್ಥಿತಿ ಕಾಂಗ್ರೆಸ್‌ನಲ್ಲಿದೆ...

ಡಾ. ಜಿ.ವೈ. ಪದ್ಮ ನಾಗರಾಜ್

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು