ಮಂತ್ರಾಲಯದ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಶೇಷ ವಿಷಯಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಕೊಳ್ಳುವ “ರಾಯರ ದರ್ಶನ” ಆಲ್ಭಂ ಬಿಡುಗಡೆಗೆ ಸಿದ್ದವಾಗಿದೆ.ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ನಿರ್ಮಾಣ ಮಾಡಿರುವ ಈ ಆಲ್ಬಂನ ಲೋಕಾರ್ಪಣೆ ಜೂನ್ 20 ರಂದು ಮಂತ್ರಾಲಯದಲ್ಲಿ ನೆರವೇರಲಿದೆ. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ “ರಾಯರ ದರ್ಶನ” ಆಲ್ಬಂ ನ ಟೀಸರ್ ಅನ್ನು ತಾರಾ ಅನುರಾಧ ಅನಾವರಣ ಮಾಡಿದರು. ಗಣೇಶ್ ಕಾಸರಗೋಡು, ಮಹೇಶ್ ಗೌಡ, ಮಂತ್ರಾಲಯ ಮಠದ ಶ್ರೀನಿಧಿ ಕರಣಂ, ಶ್ರೀಶ ಜೋಯಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಲ್ಬಂ ಸಾಂಗ್ಗೆ ಸಂಗೀತ ಸಂಯೋಜಿಸಿರುವ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ, ಹಾಡು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಗಾಯಕ ಅಬ್ಬಿ ವಿ ಪತ್ರಿಕಾಗೋಷ್ಠಿಯಲ್ಲಿದ್ದರು. ರಘು ಭಟ್, ಮಾತನಾಡಿ “ರಾಯರ ದರ್ಶನ” ಆಲ್ಬಂ ಸಾಂಗ್ ಅಂದುಕೊAಡ ಹಾಗೆ ಮೂಡಿಬರಲು ಶ್ರೀರಾಘವೇಂದ್ರಸ್ವಾಮಿಗಳ ಹಾಗೂ ಶ್ರೀಸುಬುದೇಂದ್ರ ತೀರ್ಥರ ಪರಮಾನುಗ್ರಹ ಕಾರಣ. ಈ ಆಲ್ಬಂ ಸಾಂಗ್ ನಿರ್ಮಾಣವಾಗಲು ಒಂದು ವರ್ಷ ಸಮಯ ಬೇಕಾಯಿತು. ಇದರಲ್ಲಿ ಮಂತ್ರಾಲಯದಲ್ಲಿ ನಡೆಯುವ ಪೂಜೆ ಹಾಗೂ ವೈಭವೋತ್ಸವ, ಆರಾಧನೆ ಮುಂತಾದ ಉತ್ಸವಗಳ ವಿವರಣೆ ಇದೆ. ಅಜನೀಶ್ ಲೋಕನಾಥ್ ಹಾಗೂ ಸಿ ಆರ್ ಬಾಬಿ ಅವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಅನ್ನು “ಕಾಂತಾರ” ಸಿನಿಮಾದ ಬ್ರಹ್ಮಕಳಶ ಹಾಡಿನ ಖ್ಯಾತಿಯ ಅಬ್ಬಿ ವಿ ಹಾಡಿದ್ದಾರೆ. ನಾಗಾರ್ಜುನ ಶರ್ಮ ಬರೆದಿದ್ದಾರೆ. ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ಅದ್ದೂರಿಯಾಗಿ ಅನಾವರಣವಾಗಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಜೆ ಕೂಡ ಅಂದು ಇರುತ್ತದೆ. ಮೂರು ರಾಜ್ಯಗಳ ಉಪ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ. ಎಂದರು.
ವಿದ್ಯುನ್ಮಾನ ಮಾಧ್ಯಮದವರಿಗೆ “ಖಿಓIಖಿ” ಪ್ರಶಸ್ತಿ ಕೊಡುತ್ತಾ ಬರುತ್ತಿದ್ದೇವೆ. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ ಈ ಪ್ರಶಸ್ತಿ ಕಳದೆರೆಡು ವರ್ಷಗಳಿಂದ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಾಧ್ಯಮದವರನ್ನು ಗುರುತಿಸಿಕೊಡಲಾಗುತ್ತಿದೆ. ಈ ಬಾರಿ ವಿದ್ಯುನ್ಮಾನ ಮಾಧ್ಯಮದ ಜೊತೆಗೆ ಮುದ್ರಣ ಮಾಧ್ಯಮದವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಆಗಸ್ಟ್ ನಲ್ಲಿ ಬೆಂಗಳೂರಿನಲ್ಲೇ ಈ ಸಮಾರಂಭ ನಡೆಯಲಿದೆ. ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು. ಇಂದಿನ ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ಸAಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಮಾತನಾಡಿ ತಮ್ಮ ಜೀವನದಲ್ಲಿ ಆದ ರಾಯರ ಅನುಗ್ರಹವನ್ನು ಹಂಚಿಕೊAಡರು. ನಾನು ಹಾಗೂ ಬಾಬಿ ಅವರು ರಾಯರ ಮೇಲಿನ ಅಪಾರ ಭಕ್ತಿಯಿಂದ ಈ ಆಲ್ಬಂ ಗೆ ಸಂಗೀತ ಸಂಯೋಜನೆ ಮಾಡಿದ್ದೇವೆ. ಇದು ನಮ್ಮ ಪುಣ್ಯ. “ಕಾಂತಾರ” ದ “ಬ್ರಹ್ಮಕಳಶ”ದ ಹಾಡನ್ನು ಹಾಡಿರುವ ಕೆನಡಾ ಮೂಲದ ಅಬ್ಬಿ ವಿ ಅವರು ರಾಯರ ಮೇಲಿನ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಅಷ್ಟೇ ಚೆನ್ನಾಗಿ ನಾಗಾರ್ಜುನ ಶರ್ಮ ಬರೆದಿದ್ದಾರೆ ಎಂದರು.ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಟಿ ತಾರಾ ಅನುರಾಧ, , ರಘು ಭಟ್ ದಂಪತಿಗಳ ಎರಡು ಪ್ರಯತ್ನಕ್ಕೆ ಯಶಸ್ಸನ್ನು ಕೋರಿದರು. ಗಾಯಕ ಅಬ್ಬಿ ವಿ “ರಾಯರ ದರ್ಶನ” ಆಲ್ಬಂನ ಕೆಲವು ಸಾಲುಗಳನ್ನು ಹಾಡಿದರು. ಗೀತರಚನೆಕಾರ ನಾಗಾರ್ಜುನ ಶರ್ಮ ಹಾಡು ಹುಟ್ಟಿದ ಸಮಯದ ಕುರಿತು ವಿವರಣೆ ನೀಡಿದರು. ಮಂತ್ರಾಲಯದಿAದ ಬಂದಿದ್ದ ಶ್ರೀನಿಧಿ ಕರಣಂ ಹಾಗೂ ಶ್ರೀಶ ಜೋಯಿಸ್ ಅವರು ಜೂನ್ 20 ರ “ರಾಯರ ದರ್ಶನ” ಆಲ್ಬಂ ಬಿಡುಗಡೆ ಸಮಾರಂಭಕ್ಕೆ ಮಂತ್ರಾಲಯಕ್ಕೆ ಎಲ್ಲರನ್ನು ಆಹ್ವಾನಿಸಿದರು.
ಜೂನ್ 20ಕ್ಕೆ `ರಾಯರ ದರ್ಶನ’ ಆಲ್ಬಂ ಸಾಂಗ್ ಆಗಸ್ಟ್ ನಲ್ಲಿ TNIT ಪ್ರಶಸ್ತಿ ಪ್ರದಾನ ಪ್ರದಾನ



