1-0-1-3! ಇದು ಪದಾರ್ಪಣೆ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಮಧ್ಯಮ ವೇಗದ ಬೌಲರ್ ಪ್ರಫುಲ್ ಹಿಂಗೆ ಅವರ ಆರಂಭಿಕ ಓವರ್ ಅಂಕಿ ಅಂಶ! ಆರು ಎಸೆತಗಳು ಮುಗಿಯುವುದರೊಳಗೆ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್, ಪ್ರೆಟೋರಿಯಸ್ ವಿಕೆಟ್! ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲೇ ಇಂತಹ ಡ್ರೀಮ್ ಸ್ಟಾರ್ಟ್ ಪಡೆದ ಮತ್ತೊಬ್ಬ ಬೌಲರ್ ಇಲ್ಲ!ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ತಂಡ ಎಸೆದ ಮೊದಲ ಓವರ್ ನಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಕಾರಣರಾದವರು ನಾಗ್ಪುರ ಮೂಲದ 24 ವರ್ಷದ ಬೌಲರ್ ಪ್ರಫುಲ್ ಪ್ರಕಾಶ್ ಹಿಂಗೆ!ಯಾರು ಈ ಹೊಸ ಬೌಲರ್?2002ರ ಜನವರಿ 18ರಂದು ನಾಗ್ಪುರದಲ್ಲಿ ಜನಿಸಿದ ಪ್ರಫುಲ್ ಪ್ರಕಾಶ್ ಹಿಂಜ್ ವಿದರ್ಭ ತಂಡದ ಉದಯೋನ್ಮುಖ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ ನಲ್ಲಿ “ಹಿಟ್-ದಿ-ಡೆಕ್” ಸ್ಪೆಷಲಿಸ್ಟ್ ಆಗಿ ಹೊರಹೊಮ್ಮುತ್ತಿರುವ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 2026ರ ಮಿನಿ ಹರಾಜಿನಲ್ಲಿ ಮೂಲಧನ 30 ಲಕ್ಷ ರೂಪಾಯಿಗೆ ಸಹಿ ಮಾಡಿಕೊಂಡಿದೆ. ದೇಶೀಯ ಕ್ರಿಕೆಟ್ ನಲ್ಲಿ ಇವರು ಈಗಾಗಲೇ ಗಮನ ಸೆಳೆದಿದ್ದಾರೆ. 2025-26 ರ ಸೀಸನ್ ನಲ್ಲಿ ವಿದರ್ಭ ತಂಡಕ್ಕೆ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲೂ ಮಿಂಚಿದ್ದರು. ವಿದರ್ಭ ತಂಡದ ಪರ ಆಡಿರುವ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಬಳಿಸಿದ್ದಾರೆ. ಇನ್ನು 6 ಲಿಸ್ಚ್ ಎ ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿದ್ದಾರೆ.ಐಪಿಎಲ್ ನಲ್ಲಿ ಇದು ಅವರ ಪ್ರಥಮ ಪಂದ್ಯ. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಮವಾರ ಭಯ ಇದ್ದಿದ್ದು ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಬಗ್ಗೆ. ಭಯವಿತ್ತು. ಆದರೆ ಎಲ್ಲ ಭಯ, ಆತಂಕಗಳಿಗೆ ತೆರೆ ಎಳೆದವರು ಪ್ರಫುಲ್!.



