ಬೆಂಗಳೂರು: ಕೇರಳದಲ್ಲಿ ಯುಡಿಎಫ್ ಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷ ಇಬ್ಬರು ವೀಕ್ಷಕರನ್ನು ನೇಮಿಸಿದೆ.
ಎಐಸಿಸಿ ಮುಖಂಡರಾದ ಮುಖುಲ್ ವಾಸ್ನಿಕ್ ಹಾಗೂ ಅಜಯ್ ಮಾಕನ್ ಅವರನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಈ ಇಬ್ಬರು ಮುಖಂಡರು ಕೇರಳಕ್ಕೆ ತೆರಳಿ ಅಲ್ಲಿನ ಪಕ್ಷದ ಮುಖಂಡರು ಹಾಗೂ ನೂತನ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯ ಪಡೆದು ಪಕ್ಷಕ್ಕೆ ತನ್ನ ವರದಿಯನ್ನು ಸಲ್ಲಿಸಲಿದ್ದಾರೆ.
ಕೇರಳ ಕಾಂಗ್ರೆಸ್ನಲ್ಲಿ ಈಗಾಗಲೇ ಮೂವರು ಪ್ರಮುಖರು ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದಾರೆ.
ಕಳೆದ ಬಾರಿ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ವಿ.ಡಿ.ಸತೀಶ್, ಎಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ. ವೇಣುಗೋಪಾಲ್ ಮತ್ತು ಮಾಜಿ ಗೃಹ ಸಚಿವ ಪಕ್ಷದ ಹಿರಿಯ ಮುಖಂಡ ರಮೇಶ್ ಚೆನ್ನಿತಾಲ ಅವರು ಮುಖ್ಯಮಂತ್ರಿಯಾಗುವ ಹವಣಿಕೆಯಲ್ಲಿದ್ದಾರೆ.
ಬಹುತೇಕ ಶಾಸಕರ ಒಲವು ವಿ.ಡಿ. ಸತೀಶ್ ಪರವಾಗಿದ್ದು, ಕೆ.ಸಿ. ವೇಣುಗೋಪಾಲ್ ಅವರು ಪಕ್ಷದ ರಾಷ್ಟ್ರೀಯ ವರಿಷ್ಠ ರಾಹುಲ್ ಗಾಂಧಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಅವರ ಬಗ್ಗೆ ಒಲವು ಜಾಸ್ತಿಯಿದೆ ಎಂದು ಹೇಳಲಾಗುತ್ತಿದ್ದು, ರಮೇಶ್ ಚನ್ನಿತಾಲ ಹಿರಿಯ ಮುಖಂಡರಾಗಿರುವುದರಿAದ ಅವರು ಕೂಡ ಮುಖ್ಯಮಂತ್ರಿ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೇರಳಕ್ಕೆ `ಕೈ’ ವೀಕ್ಷಕರ ನೇಮಕ



