ಬೆಂಗಳೂರು: ಆರ್ ಟಿ ನಗರ ಮತ್ತು ಬಸವೇಶ್ವರನಗರ ಪೊಲೀಸರು ರಾತ್ರಿ ಮತ್ತು ಹಗಲು ಕನ್ನಗಳು ಮಾಡುತ್ತಿದ್ದ ಮಹಿಳೆ ಮತ್ತು ಸಂಘರ್ಷ ಕೊಳಗಾದ ಬಾಲಕ ಸೇರಿದಂತೆ ಏಳು ವ್ಯಕ್ತಿಗಳನ್ನು ಬಂಧಿಸಿ 28 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಮತ್ತು ನಗದು ಹಾಗೂ ಆಟೋರಿಕ್ಷಾ ವಶಪಡಿಸಿಕೊಂಡಿರುತ್ತಾರೆ.
ಆರ್.ಟಿ ನಗರ ಪೊಲೀಸರು ತಬಸ್ಸುಮ್ 35 ಮತ್ತು ಮೊಹಮ್ಮದ್ ಮುದಾಸಿರ್ 19, ಸುಲ್ತಾನ್ ಪಾಳ್ಯದಲ್ಲಿ ಮಾರ್ಚ್ 29ರಂದು ಕಳವು ಮಾಡಿದ್ದರು. ಈ ಸಂಬAಧ ಆರೋಪಿಗಳನ್ನು ಬಂಧಿಸಿ 76 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ.
ಮತ್ತೊAದು ಪ್ರಕರಣದಲ್ಲಿ ಬಸವೇಶ್ವರನಗರ ಪೊಲೀಸರು ನಂದೀಶ್ (26), ಸೋಮಶೇಖರ್(27), ಮಧು ಗೌಡ(24), ಭೀಮ(25) ಹಾಗೂ ಸಂಘರ್ಷಕೊಳಗಾದ ಬಾಲಕನನ್ನು ಸೇರಿದಂತೆ ಐದು ವ್ಯಕ್ತಿಗಳನ್ನು ಬಂಧಿಸಿ 18 ಲಕ್ಷ ರೂಪಾಯಿ ಬೆಲೆಬಾಳುವ 115 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ.
ಬಸವೇಶ್ವರನಗರದ ಬಿಇಎಂಎಲ್ ಲೇಔಟ್ನಲ್ಲಿ ಮನೆ ಬೀಗ ಮುರಿದು ಕಳವು ಪ್ರಕರಣ ದಾಖಲಾಗಿತ್ತು.



