ಮಧುಗಿರಿ: ಪಟ್ಟಣದ ಇತಿಹಾಸ ಪ್ರಸಿದ್ಧ ಪುರಾತನ ದೇವಾಲಯಗಳಾದ ಶ್ರೀ ಮಲ್ಲೇಶ್ವರ ಮತ್ತು ಶ್ರೀ ವೆಂಕಟರಮಣಸ್ವಾಮಿ ದೇವಾಲಯಗಳ ಮಧ್ಯ ಭಾಗದಲ್ಲಿ ಶ್ರೀ ಕೃಷ್ಣನ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದೆಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮಧುಗಿರಿಯ ತಂಡದವರೊಂದಿಗೆ ಭೇಟಿ ನೀಡಿ ಶ್ರೀ ವಿಶ್ವಪ್ರಸನ್ನ ತೀರ್ಥರು ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದು ನಂತರ ಮಾತನಾಡಿದ ಅವರು ಶ್ರೀ ಕೃಷ್ಣ ಮಠಕ್ಕೆ ಈಗಾಗಲೇ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣಸ್ವಾಮಿ ದೇವಾಲಯಗಳ ಮಧ್ಯೆ ಭಾಗದಲ್ಲಿ ಸಾರ್ವಜನಿಕರ ಮನವಿಯಂತೆ ಸುಂದರವಾದ ಶ್ರೀ ಕೃಷ್ಣ ಮಂದಿರ ಪುನಃ ಪ್ರತಿಷ್ಠಾಪನೆ ನಡೆಸುವಂತೆ ಮನವಿ ಮಾಡಲಾಗಿದ್ದು ಸ್ವಾಮಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು ದೇವಾಲಯದ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎಂದರು.
ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಪಿ.ದತ್ತಾತ್ರೇಯ ಮಾತನಾಡಿ ಈಗಾಗಲೇ ಪುರಸಭೆಯ ವತಿಯಿಂದ ಶ್ರೀ ಕೃಷ್ಣ ನ ಮಠದ ಹೆಸರಿಗೆ ವರ್ಗಾಯಿಸಲಾಗಿರುವ ಇ- ಸ್ವತ್ತಿನ ಪ್ರತಿ ಮತ್ತು ದುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡವಲು ಪುರಸಭೆಯ ವತಿಯಿಂದ ನೀಡಲಾಗಿರುವ ಆದೇಶಗಳ ಪ್ರತಿಗಳನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ನವರು ಸ್ವಾಮೀಜಿಯವರಿಗೆ ಹಸ್ತಾಂತರಿಸಿದ್ದಾರೆ.ಮುAದಿನ ದಿನಗಳಲ್ಲಿ ಪಾಳು ಬಿದ್ದಿರುವ ಕಟ್ಟಡವನ್ನು ತೆರವು ಗೊಳಿಸುವ ಕಾರ್ಯವನ್ನು ಶೀಘ್ರವಾಗಿ ಆರಂಭಿಸಲಾಗುವುದು ಹಾಗೂ ಇನ್ನೂ ಕೆಲವೇ ದಿನಗಳಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಶಾಸಕರಾದ ಕೆ.ಎನ್ ರಾಜಣ್ಣ ಹಾಗೂ ರಾಜೇಂದ್ರ ರಾಜಣ್ಣ ಮತ್ತು ಸಮುದಾಯದವರು ಮತ್ತು ಸಾರ್ವಜನಿಕರನ್ನು ಆಹ್ವಾನಿಸಿ ಭೂಮಿ ಪೂಜೆಯನ್ನು ಸಹ ಆರಂಭಿಸಲಾಗುವುದು ಎಂದರು.
ಸಿದ್ದನಹಳ್ಳಿಕಿರಣ್,ರವೀಶ್, ಪುರಸಭಾ ಮಾಜಿ ಅಧ್ಯಕ್ಷರಾದ ಲಾಲಾ ಪೇಟೆ ಮಂಜುನಾಥ್, ಮಾಜಿ ಸದಸ್ಯರುಗಳಾದ ನಾರಾಯಣ್, ಮಂಜುನಾಥ್ ಆಚಾರ್, ಶ್ರೀಧರ್ ,ಗುಂಡಣ್ಣ, ಮುಖಂಡರುಗಳಾದ ರಘು,ಮೌಂಟ್ ವ್ಯೂ ಶಾಲೆಯ ಕಾರ್ಯದರ್ಶಿ ಜಿ.ಎಸ್ ಜಗದೀಶ್ ಕುಮಾರ್, ಹರ್ಷ ಮತ್ತಿತರರು ಭಾಗವಹಿಸಿದ್ದರು.
ಶ್ರೀಕೃಷ್ಣ ದೇಗುಲ ನಿರ್ಮಾಣ: ರಾಜೇಂದ್ರ ರಾಜಣ್ಣ



