ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರದಲ್ಲಿರುವ ಶ್ರೀ ವಿಘ್ನೇಶ್ವರ, ಶ್ರೀ ಶನೈಶ್ಚರ, ಶ್ರೀ ಮಾರುತಿ, ಶ್ರೀ ನವಗ್ರಹ ಶ್ರೀ ಸಾಯಿಬಾಬಾ ದೇವಸ್ಥಾನದ 44ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಅಣ್ಣಮ್ಮದೇವಿ ಮಹೋತ್ಸವ ಹಾಗೂ ಊರಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸ್ಥಳೀಯ ಶಾಸಕರಾದ ಶ್ರೀ ಕೆ.ಗೋಪಾಲಯ್ಯರವರು ಉತ್ಸವದ ಪ್ರಯುಕ್ತ ನಡೆದ ಮಹಾ ರಥೋತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವೆಂಕಟೇಶಮೂರ್ತಿ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.



