ತಿ. ನರಸೀಪುರ: ರೈತರ ಉಳಿವು ಪ್ರಜಾಪ್ರಭುತ್ವದ ಗೆಲುವು ಎಂದು ಬರಗಾಲದ ಸಂಕಷ್ಟದಲ್ಲಿ ಮತದಾನ ಮಾಡಿದ ರೈತ ಮುಖಂಡರು.ತಾಲ್ಲೂಕಿನ ಕುರುಬೂರು ಗ್ರಾಮದಲ್ಲಿ ಎತ್ತಿನಗಾಡಿಯಲ್ಲಿ ಹಸಿರು ತೋರಣ ಕಟ್ಟಿ ಒಣಗಿದ ಕಬ್ಬಿನ ಜಲ್ಲೆಯನ್ನು ಹಿಡಿದು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಪದಾಧಿಕಾರಿಗಳು ಕುರುಬೂರು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಎತ್ತಿನ ಬಂಡಿಯಲ್ಲಿ ಮತ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ ಮಾತನಾಡಿದ ಅವರು ಬರಗಾಲದ ಸಂಕಷ್ಟದಲ್ಲೂ ರೈತರು ಪ್ರಜಾಪ್ರಭುತ್ವದ ಉಳಿವಿಗಾಗಿ ರಕ್ಷಣೆಗಾಗಿ ಮತದಾನ ಮಾಡಲು ಮುಂದಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದವರು ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ.ರೈತ ದೇಶದ ಜನರ ಅನ್ನದಾತ ಇಂತಹ ರೈತರನ್ನ ಅಧಿಕಾರಕ್ಕೆ ಬಂದ ಜನ ತುಳಿಯುತ್ತಿದ್ದಾರೆ.
ಇನ್ನು ಮೇಲಾದರೂ ಅಧಿಕಾರಕ್ಕೆ ಬಂದ ಜನ ಪ್ರತಿನಿಧಿಗಳು ರೈತರ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಿ, ಬರಗಾಲದಿಂದ ರೈತನ ದನಕರುಗಳಿಗೆ ಮೇವು ಕುಡಿಯುವ ನೀರು ಇಲ್ಲದಂತಾಗಿದೆ ಪರಿಹಾರದ ಹಣ ಸಿಗದಂತಾಗಿದೆ ಎಂದು ತಿಳಿಸಿದರು, ರಾಜ್ಯದ ರೈತರ ಸಮಸ್ಯೆಗಳ ಗಮನ ಸೆಳೆಯುವ ಸಲುವಾಗಿ ಅರೆ ಬೆತ್ತಲೆಯಾಗಿ ಎತ್ತಿನಗಾಡಿಯಲ್ಲಿ ಒಣಗಿದ ಕಬ್ಬಿನ ಜಲ್ಲೆಗಳ್ಳನ ಹಿಡಿದು ಮೆರವಣಿಗೆ ಮೂಲಕ ಮತದಾನ ಕೇಂದ್ರಕ್ಕೆ ಮತದಾನ ಮಾಡಲು ಬಂದಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಿದ್ದೇಶ್, ಗೌರಿಶಂಕರ್, ಪ್ರದೀಪ್. ಶ್ರೀಕಂಠ .ಕಿರಣ್. ನಂದೀಶ್. ರಾಜೇಶ್. ಕೃಷ್ಣರಾಜ ಅರಸ್. ಶಿವಪ್ರಸಾದ್ ಮತದಾನ ಮೆರವಣಿಗೆಯಲ್ಲಿದ್ದರು.