ಟೆನ್ನಿಸ್ ಲೋಕದ ದಿಗ್ಗಜ ನೋವಾಕ್ ಜೊಕೊವಿಕ್ ಅವರು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ ಬಗ್ಗೆ ಹೊಂದಿರುವ ಅಭಿಮಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. “ನಾನು ಇಂದು ಕ್ರಿಕೆಟ್ ನೋಡುತ್ತಿದ್ದೇನೆ ಎಂದರೆ ಅದಕ್ಕೆ ವಿರಾಟ್ ಕೊಹ್ಲಿಯೇ ಕಾರಣ” ಎಂದು ಹೇಳುವ ಮೂಲಕ ಜೊಕೊವಿಕ್ ಜಗತ್ತಿನಾದ್ಯಂತ ಇರುವ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಐಪಿಎಲ್ 2026ರ ಸಂಭ್ರಮದ ನಡುವೆಯೇ `ಟೈಮ್ಸ್ ನೌ’ ಜೊತೆ ಮಾತನಾಡಿದ ಸರ್ಬಿಯಾದ ಈ ಟೆನ್ನಿಸ್ ಚಕ್ರವರ್ತಿ, ಕೊಹ್ಲಿ ಮೇಲಿರುವ ತಮ್ಮ ಗೌರವವನ್ನು ಹಂಚಿಕೊAಡಿದ್ದಾರೆ.
ಕೊಹ್ಲಿಯ ಆಟದ ಮೇಲಿನ ಉತ್ಸಾಹ ಮತ್ತು ಅವರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೊಕೊವಿಕ್, ವಿರಾಟ್ ನನ್ನ ಆತ್ಮೀಯ ಸ್ನೇಹಿತ. ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ನಿಜ ಹೇಳಬೇಕೆಂದರೆ, ಅವರ ಕಾರಣದಿಂದಲೇ ನಾನು ಕ್ರಿಕೆಟ್ ವೀಕ್ಷಿಸಲು ಪ್ರಾರಂಭಿಸಿದೆ. ಅದಕ್ಕೂ ಮೊದಲು ನನಗೆ ಈ ಕ್ರೀಡೆಯ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅವರ ಮೂಲಕವೇ ನಾನು ಕ್ರಿಕೆಟ್ ಅನ್ನು ಹೆಚ್ಚು ಗಮನಿಸುತ್ತಿದ್ದೇನೆ.”
ಇದೇ ವೇಳೆ ಭಾರತಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ ಅವರು, “ನಾವು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ. ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಭೇಟಿ ನೀಡಿದಾಗ ಖಂಡಿತವಾಗಿಯೂ ವಿರಾಟ್ ಅವರನ್ನು ಭೇಟಿಯಾಗುತ್ತೇನೆ. ನಾವಿಬ್ಬರೂ ಸೇರಿ ಸ್ವಲ್ಪ ಟೆನ್ನಿಸ್ ಮತ್ತು ಸ್ವಲ್ಪ ಕ್ರಿಕೆಟ್ ಆಡುತ್ತಾ, ಕ್ರೀಡೆಯ ಮೂಲಕ ಸಕಾರಾತ್ಮಕ ಸಂದೇಶವನ್ನು ಹರಡುವ ಆಸೆಯಿದೆ,” ಎಂದು ತಿಳಿಸಿದರು.
ನಾನು ಕ್ರಿಕೆಟ್ ನೋಡಲು ವಿರಾಟ್ ಕೊಹ್ಲಿಯೇ ಕಾರಣ ಟೆನ್ನಿಸ್ ದಿಗ್ಗಜ ನೊವಾಕ್ ಜೊಕೊವಿಕ್



