ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬAಧ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಯ ಫಲಿತಾಂಶದ ಬಗ್ಗೆ ಚಿಂತನ-ಮಂಥನ ನಡೆದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದರೂ, ತಮಗೆ ಬರಬೇಕಾಗಿದ್ದ ತಮಗೆ ಬರಬೇಕಿದ್ದ ನೀರಿಕ್ಷಿತ ಮತ ಬರೆದೆ ಇರುವುದಕ್ಕೆ ಕಾರಣ ಏನೂ ಎಂಬುದರ ಬಗ್ಗೆ ಪಕ್ಷದ ಪ್ರಮುಖರು ಚಿಂತನ-ಮಂಥನ ನಡೆಸಿದ್ದಾರೆ.
ಆ ಕ್ಷೇತ್ರದಲ್ಲಿ ಎಸ್ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿಗೆ ಸುಮಾರು 18000 ಮತಗಳು ಬಂದಿರುವುದಕ್ಕೆ ಕಾರಣ ಏನು ಎಂಬ ಹುಡುಕಾಟದಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ತಮಗೆ ಸಾಕಷ್ಟು ನಿರೀಕ್ಷಿತ ಮತಗಳು ಬಂದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಆ ಸಮುದಾಯ ನಮ್ಮಿಂದ ದೂರವಾಗುವುದು ಎಂಬ ಲೆಕ್ಕಾಚಾರ ನಡೆದಿದೆ. ಹಾಗಾಗಿ ಎಸ್ಡಿಪಿಐ ಅಭ್ಯರ್ಥಿ ಅಷ್ಟೊಂದು ಮತಗಳಿಸಲು ಕಾರಣವೇನು ಎಂಬುದರ ಹುಡುಕಾಟ ನಡೆದಿದೆ.
ಕಾಂಗ್ರೆಸ್ ಪಕ್ಷದಲ್ಲಿ ದಾವಣಗೆರೆ ಕ್ಷೇತ್ರದ ಫಲಿತಾಂಶದ ಚಿಂತನ-ಮಂಥನ



