ಬೆಂಗಳೂರು: ಅಹಿಂದ ಸಂಘಟನೆ ಆರಂಭಗೊಂಡು 25 ವರ್ಷಗಳು ಸಂದಿದ್ದು, ಈಗಾಗಲೇ 25ನೇ ವರ್ಷ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ 25ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ರಾಜ್ಯದ 4 ವಿಭಾಗಳಲ್ಲಿ ನಾಲ್ಕು ಕಡೆ ಅಹಿಂದ ಚಿಂತನೆಗಳ ಸಂಕಿರಣ ಏರ್ಪಡಿಸಲು ಸಿದ್ಧತೆ ನಡೆಸಲಾಗಿದೆ. ಸಂಘಟನೆಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿದೆ.
ಹೊಸ ನಾಯಕನನ್ನು ಆಯ್ಕೆ ಮಾಡಿದ ಕೂಡಲೇ ರಾಜ್ಯ ಮಟ್ಟದಲ್ಲಿ ಸಮಾವೇಶವನ್ನು ನಡೆಸಿ ಆ ಸಮಾವೇಶದಲ್ಲಿ ಹೊಸ ನಾಯಕನಿಗೆ ಸಿದ್ದರಾಮಯ್ಯಅವರ ಕಡೆಯಿಂದ ಬಾವುಟವನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ಅಹಿಂದ ಸಂಘಟನೆಯ ಮುಖಂಡರಿಗೆ ವಿವಿಧ ಪಕ್ಷಗಳಲ್ಲಿ ಪ್ರಾತಿನಿದ್ಯ ನೀಡಬೇಕು ಎಂಬ ಒತ್ತಾಯ ಮಾಡಲಾಗುವುದು ಎಂದು ಅಹಿಂದ ಸಂಘಟನೆಯ ಪ್ರಮುಖರೋರ್ವರು ತಿಳಿಸಿದ್ದಾರೆ.



