ಕನಕಪುರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ನೂರಾರು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವAತೆ ಮಾಡುವುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಬಹಳ ವಿಷಾದನೀಯಕರ ಎಂದು ಎಐಡಿಎಸ್ಒ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಸಿ.ಎಂ. ಆರೋಪಿಸಿದರು.
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಸರ್ಕಾರಿ ಪಬ್ಲಿಕ್ ಶಾಲಾ ಆವರಣದ ಮುಂಭಾಗ ಹತ್ತಾರು ಗ್ರಾಮಸ್ಥರ ನೇತೃತ್ವದಲ್ಲಿ ನಡೆದ ರಾಜ್ಯ ಸರ್ಕಾರದ ವಿರುದ್ಧಪ್ರತಿಭಟನೆ ಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಹೆಗ್ಗನೂರು ಕೆಪಿಎಸ್ ಶಾಲೆಗೆ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಉಯ್ಯಂಬಳ್ಳಿ ಹೋಬಳಿ ಸುತ್ತಮುತ್ತಲಿನ15 ಕ್ಕೂ ಹೆಚ್ಚು ಗ್ರಾಮಗಳಾದ ಮಡಿವಾಳ, ಹುಳ್ಯ, ಹೊಸದೊಡ್ಡಿ, ಏಳಗಳ್ಳಿ ಚಿಲ್ಲಂದವಡಿ, ಹೊಡಕೆಕಟ್ಟೆ, ನಲ್ಲಳ್ಳಿದೊಡ್ಡಿ, ಕುಪ್ಪೆದೊಡ್ಡಿ, ಹಾರೊಶಿವನಹಳ್ಳಿ, ಚುಂಚಿ ಕಾಲೋನಿ, ಸಂಗಮ, ಹೆಗ್ಗನೂರುದೊಡ್ಡಿ ಹಾಗೂ ಉಯಂಬಳ್ಳಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕಳೆದ ಒಂದು ತಿಂಗಳಿನಿAದ ಗ್ರಾಮಸ್ಥರುಗಳು ನಿರಂತರ ಹೋರಾಟ ನಡೆಸುತ್ತಿದ್ದರೂ ಸಾರ್ವಜನಿಕರ ಯಾವುದೇ ಆಕ್ರೋಶಕ್ಕೂ ಕಿವಿಕೊಡದ ರಾಜ್ಯ ಸರ್ಕಾರ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಗ್ಧ ಪೋಷಕರಿಂದ ಸಹಿಯನ್ನು ಪಡೆದುಕೊಳ್ಳುವಂತ ಘೋರ ಅನ್ಯಾಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಎನ್ನುವುದು ಶಿಕ್ಷಣವನ್ನ ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಸರ್ಕಾರದ ಒಂದು ವ್ಯವಸ್ಥಿತ ಸಂಚಾಗಿದ್ದು ಒಂದೇ ಸೂರಿ ನಡಿ 14 ವರ್ಷಗಳ ಶಿಕ್ಷಣ, ಇಂಗ್ಲಿಷ್ ಮಾಧ್ಯಮ, ಉಚಿತ ಬಸ್ ಸೌಕರ್ಯ ಹಾಗು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣನೀಡಲಾಗುವುದು ಎಂಬ ಸರ್ಕಾರದ ಭರವಸೆಗಳು ಕೇವಲ ಸುಳ್ಳಿನ ಕಂತೆಗಳಾಗಿವೆ,ಈಗಾಗಲೇ ಹೊಂಗನೂರು ಕೆ ಪಿ ಎಸ್ ಮ್ಯಾಗ್ನೆಟ್ ಯೋಜನೆಯು ಸಂಪೂರ್ಣ
ವಾಗಿ ವಿಫಲ ವಾಗಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ,” ಎಂದು ಆಕ್ರೋಶ ಹೊರಹಾಕಿದರು.
ಕಳೆದ ಮೇ 26 ರಂದು ಎ ಐ ಡಿ ಎಸ್ ಒ ಸಂಘಟನೆ ಮತ್ತು ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಪಾದರಹಳ್ಳಿ,ಆವೇರಹಳ್ಳಿ ಮತ್ತು ಜಾಲಮಂಗಲ ವ್ಯಾಪ್ತಿ ಯ 3 ಕೆಪಿಎಸ್ ಮ್ಯಾಗ್ನೆಟ್ ಕೇಂದ್ರಗಳ ಹೆಸರಿನಲ್ಲಿ ಜಿಲ್ಲೆ ಯ 40 ಶಾಲೆಗಳನ್ನು ಮುಚ್ಚುವುದರ ವಿರುದ್ಧ ಡಿಡಿಪಿಐ (ಆಆPI) ಕಚೇರಿಗೆ ಬೃಹತ್ ನಿಯೋಗವನ್ನ ಕೊಂಡೊಯ್ಯ ಲಾಗಿತ್ತು ಆ ಸಂದರ್ಭದಲ್ಲಿ ಹಳ್ಳಿ ಮಟ್ಟದ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಮಾನ್ಯ ಡಿಡಿಪಿಐ ಭರವಸೆ ನೀಡಿದ್ದರು,ಪರಿಸ್ಥಿತಿ ಹೀಗಿದ್ದರೂ ಸಹ ಸರ್ಕಾರ ಮಾತ್ರ ತನ್ನ ಪಟ್ಟು ಬಿಡದೆ ಪ್ರತಿಷ್ಠೆಯನ್ನಾಗಿ ಈ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೊಳಿಸಲು ತನ್ನ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಉಯ್ಯಂಬಳ್ಳಿ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಇದು ವಿಶಾಲವಾದ ಆವರಣ,ಉತ್ತಮ ಆಟದ ಮೈದಾನ ಹಾಗೂ ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿದೆ,ಈ ಯೋಜನೆ ಯಿಂದಾಗಿ ಇಲ್ಲಿನ ಪುಟ್ಟ ಮಕ್ಕಳು 7 ಕಿಲೋಮೀಟರ್ ದೂರದ ಅರಣ್ಯದ ನಡುವಿನ ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಿ ಹೆಗ್ಗನೂರು ಸರ್ಕಾರಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು ಗ್ರಾಮಸ್ಥರು ಯಾವುದೇ ಪರಿಸ್ಥಿತಿಯಲ್ಲೂ ಶಾಲೆಯ ಬಾಗಿಲುಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ದೃಢವಾಗಿ ನಿರ್ಧರಿಸಿದ್ದು ಸರ್ಕಾರ ಈ ಬಗ್ಗೆ ಗ್ರಾಮಸ್ಥರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿದರು.
ಶಿವಂಕಾರಿ, ಗಿರೀಶ್ Uಏ, ಜಡೆಮಾಡೇಗೌಡ, ರಾಮಕೃಷ್ಣ, ನಾಗಣ್ಣ, ಚಂದ್ರು, ಶಿವಣ್ಣ ಮೂಗೂರು ಗೌಡರು, ಮಹದೇವಸ್ವಾಮಿ ಸೇರಿದಂತೆ ಊರಿನ ಹಿರಿಯರು, ಮುಖಂಡರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು “ನಮ್ಮೂರಿನ ಶಾಲೆ ಉಳಿಯಲೇಬೇಕೆಂದು” ಘೋಷಣೆಗಳನ್ನು ಕೂಗಿದರು. ಶಾಲೆಗಳನ್ನು ಉಳಿಸಿಕೊಳ್ಳುವವರೆಗೂ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದರು,ಸಂಘಟನೆ ಜಿಲ್ಲಾ ಸಂಚಾಲಕ ಲೋಹಿತ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಶಾಲೆಗಳ ಮುಚ್ಚುವಿಕೆ: ಗ್ರಾಮಸ್ಥರ ಪ್ರತಿಭಟನೆ



